ಅಪ್ಪು ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಬಿಗ್​ ಅನೌನ್ಸ್‌ಮೆಂಟ್‌! ವಿಡಿಯೋ ನೋಡಿ!

author-image
admin
Updated On
ಅಪ್ಪು ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಬಿಗ್​ ಅನೌನ್ಸ್‌ಮೆಂಟ್‌! ವಿಡಿಯೋ ನೋಡಿ!
Advertisment
  • ಪ್ರತಿ ದಿನ ಅಪ್ಪು ಅವರನ್ನ ಸೆಲೆಬ್ರೇಟ್ ಮಾಡೋ ಆಸೆ ನಿಮಗಿದ್ಯಾ?
  • ಪ್ರತಿ ಕ್ಷಣ ಪುನೀತ್‌ ಅವರನ್ನ ನೋಡಲು ನೀವು ಬಯಸುತ್ತೀರಾ?
  • ಅಭಿಮಾನಿಗಳಿಗಾಗಿ ದಿಟ್ಟ ಹೆಜ್ಜೆ ಇಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪ್ರತಿ ದಿನ ಅಪ್ಪು ಅವರನ್ನ ಸೆಲೆಬ್ರೇಟ್ ಮಾಡೋ ಆಸೆ ಯಾರಿಗಿಲ್ಲ ಹೇಳಿ. ಕೋಟ್ಯಾಂತರ ಪುನೀತ್ ರಾಜ್‌ ಕುಮಾರ್ ಅಭಿಮಾನಿಗಳು ಪ್ರತಿ ಕ್ಷಣ ಅಪ್ಪು ಅವರನ್ನ ನೋಡಲು ಬಯಸುತ್ತಾರೆ. ಯಾಕಂದ್ರೆ ಅಪ್ಪು ಮರೆಯಾದರು ಮರೆಯಲು ಸಾಧ್ಯವಿಲ್ಲ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿಗಳಿಗೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಅದು ಅಂತಿಂಥ ಸಿಹಿಸುದ್ದಿ ಅಲ್ಲ. ಪುನೀತ್‌ ಫ್ಯಾನ್ಸ್‌ ಅಶ್ವಿನಿ ಅವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರು ಕಡಿಮೆ ಅನ್ನುವಂತದ್ದು.

publive-image

ಅಪ್ಪು 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳಿಗಾಗಿ ಬಿಗ್‌ ಅನೌನ್ಸ್‌ ಮಾಡಿದ್ದಾರೆ. ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ, ಗೌರವನೇ ಅಪ್ಪು ಇನ್ನೂ ನಮ್ಮ ಜೊತೆ ಇದ್ದಾರೆ ಅನ್ನೋದಕ್ಕೆ ಸಾಕ್ಷಿ ಎಂದಿರುವ ಅಶ್ವಿನಿ ಅವರು ಬಹಳ ದೊಡ್ಡ ಕೊಡುಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಗೆ ಅನ್ನದಾನ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್‌; ಟಾಪ್ 10 ಫೋಟೋ ಇಲ್ಲಿದೆ! 

ನಿಮ್ಮೆಲ್ಲರ ನಗುವಲ್ಲೇ ನಾನು ಅಪ್ಪು ಅವರನ್ನ ಕಾಣುತ್ತಿದ್ದೇನೆ. ಪ್ರತಿ ದಿನ ಅಪ್ಪು ಅವರನ್ನ ಸೆಲೆಬ್ರೇಟ್ ಮಾಡುವ ಆಸೆ, ಪ್ರತಿ ಕ್ಷಣ ಅಪ್ಪು ಅವರನ್ನ ನೋಡುವ ಆಸೆ ನಿಮಗಿದ್ಯಾ. ನಿಮ್ಮ ನಗುವಿನ ಒಡೆಯ ಮರೆಯಾದರು ಮರೆಯಲು ಸಾಧ್ಯವಿಲ್ಲ. ಹೀಗಾಗಿ ನಿಮಗಾಗಿ ಕಾದಿದೆ ಒಂದು ಗುಡ್‌ನ್ಯೂಸ್. ಅಪ್ಪು ಹೆಸರಲ್ಲಿ ನಾನು ಒಂದು ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದೇನೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ.

publive-image

ಹೌದು.. ಭಾರತದಲ್ಲೇ ಪ್ರಪ್ರಥಮ ಬಾರಿಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗಾಗಿ Fandom App ಬಿಡುಗಡೆ ಮಾಡಲಾಗುತ್ತಿದೆ. ಒಂದು ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಮತ್ತೆ ಡಾ|| ಪುನೀತ್ ರಾಜ್‌ಕುಮಾರ್ ಅವರ ಜೊತೆ ಕನೆಕ್ಟ್ ಆಗೋಣ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿ ಮತ್ತೆ ಸಂಭ್ರಮಿಸುವ, ಸುಮಧುರ ನೆನಪುಗಳನ್ನು ಸವಿಯುವ ಹಾಗೂ ಅಪ್ಪುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸ್ಥಳವೇ ಈ ಪಿ.ಆರ್.ಕೆ. ಆ್ಯಪ್‌. PRKStarFandom app ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment