/newsfirstlive-kannada/media/post_attachments/wp-content/uploads/2023/10/Teaching.jpg)
ಇಂದು ಸರ್ಕಾರಿ ಹುದ್ದೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ! ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಪಡೆಯೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸೈನ್ಸ್, ಕಾಮರ್ಸ್, ಆರ್ಟ್ಸ್ ಯಾವುದೇ ವಿಷಯ ಓದಿರಲಿ. ಎಲ್ಲರಿಗೂ ಸರ್ಕಾರಿ ಕೆಲಸ ಬೇಕೇ ಬೇಕು. ಅಷ್ಟರಮಟ್ಟಿಗೆ ಜನ ಸರ್ಕಾರಿ ಕೆಲಸದ ಹಿಂದೆ ಬಿದ್ದಿದ್ದಾರೆ. ಹಗಲು ರಾತ್ರಿ ನಿದ್ದೆಗೆಟ್ಟು ಓದುತ್ತಾರೆ. ಆರೋಗ್ಯ ಕೆಟ್ರೂ ಪರ್ವಾಗಿಲ್ಲ ಸರ್ಕಾರಿ ಕೆಲಸ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಉದ್ಯೋಗದಲ್ಲಿ ಸಿಗೋ ಭದ್ರತೆ.
ಮಾಸ್ಟರ್ ಡಿಗ್ರಿ ಮುಗಿದ ಬೆನ್ನಲ್ಲೇ ಎಷ್ಟೋ ವಿದ್ಯಾರ್ಥಿಗಳು KSET, NET ಎರಡು ಎಕ್ಸಾಂ ಕ್ಲಿಯರ್ ಮಾಡಿಕೊಂಡಿದ್ದಾರೆ.
ವರ್ಷಗಟ್ಟಲೇ ಕಷ್ಟಪಟ್ಟು ಓದಿ ಎಕ್ಸಾಂ ಕ್ಲಿಯರ್ ಮಾಡಿದ್ದಾರೆ. ಈ ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಕೊಂಡಿದ್ದಾರೆ. ಬ್ಯಾಚುಲರ್ ಡಿಗ್ರಿ ಮಾಡಿದವರು ಬೋಧಕೇತರ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದಾರೆ. BA, BE, BSc, MA, MBA, BS, MS, MSW ಸೇರಿದಂತೆ PhD ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ನೇಮಕಾತಿ ಮಾಡಲಿದೆ? ಎಂದು ಎದುರು ನೋಡುತ್ತಿದ್ದಾರೆ. ಇಂಥವರಿಗೆ ಗುಡ್ನ್ಯೂಸ್ ಒಂದಿದೆ.
ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದಲೇ ಉದ್ಯೋಗಾಂಕ್ಷಿಗಳಿಗೆ ಗುಡ್ನ್ಯೂಸ್ ಇದೆ. ರಾಜ್ಯದ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳಲ್ಲಿ 2 ಸಾವಿರ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಬಜೆಟ್ನಲ್ಲಿ ಅವಕಾಶ ನೀಡಲಾಗಿದೆ. ಅತಿ ಶೀಘ್ರದಲ್ಲೇ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ಏನಂದ್ರು ಸಚಿವ ಡಾ. ಎಂ.ಸಿ ಸುಧಾಕರ್?
ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹುದ್ದೆಗಳ ಕೊರತೆ ಇದೆ. ಈ ಹುದ್ದೆಗಳನ್ನು ಸದ್ಯದಲ್ಲೇ ಭರ್ತಿ ಮಾಡಲಾಗುವುದು. ಈ ಬಜೆಟ್ನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಒಟ್ಟು 2 ಸಾವಿರ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳು ಅವಕಾಶ ಕಲ್ಪಿಸಿದ್ದಾರೆ ಎಂದರು.
ರಾಜ್ಯದ ವಿವಿಗಳಲ್ಲಿ ಶೇ. 60ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ ಶೇ. 80ರಷ್ಟು ಹುದ್ದೆಗಳು ಖಾಲಿ ಇವೆ. ಬೋಧಕ ಸಿಬ್ಬಂದಿ ಇಲ್ಲದಿದ್ದರೆ ಉತ್ತಮ ಶಿಕ್ಷಣ ಸಿಗುವುದಿಲ್ಲ. ಅತಿಥಿ ಉಪನ್ಯಾಸಕರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದಾಗಿನಿಂದ ಅನೇಕ ಹುದ್ದೆಗಳನ್ನು ತುಂಬಿದ್ದೇವೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಹಗರಣ ಆಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಕೆಇಎ ಮೂಲಕ ಪರೀಕ್ಷೆ ನಡೆದಿದೆ. ಸಚಿವ ಸಂಪುಟದ ಉಪಸಮಿತಿಯನ್ನೂ ಕೂಡ ಮಾಡಲಾಗಿದೆ. ಕೆಲವೆಡೆ ಅವೈಜ್ಞಾನಿಕವಾಗಿ ಹುದ್ದೆ ಸೃಷ್ಟಿ ಮಾಡಲಾಗಿದೆ. ಪರಿಶೀಲನೆಗಾಗಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ ಎಂದರು.
ಇಡೀ ರಾಜ್ಯದಲ್ಲಿ 2.76 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ
ಇಷ್ಟೇ ಅಲ್ಲ ರಾಜ್ಯದಲ್ಲಿ 7.72 ಲಕ್ಷ ಸರ್ಕಾರಿ ಉದ್ಯೋಗಗಳು ಮಂಜೂರಾಗಿವೆ. ಅವುಗಳಲ್ಲಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಳೆದ ವರ್ಷ ಇದ್ದ ಖಾಲಿ ಹುದ್ದೆಗಳ ಸಂಖ್ಯೆ 2.55 ಲಕ್ಷ ಎಂದು ವರದಿ ಆಗಿತ್ತು. ಈಗ ಹೆಚ್ಚುವರಿಯಾಗಿ 20 ಸಾವಿರಕ್ಕೂ ಅದಿಕ ಹುದ್ದೆಗಳು ಸೇರ್ಪಡೆಗೊಂಡಿವೆ.
ಹಣಕಾಸು ಇಲಾಖೆಯ ಪ್ರಕಾರ, ಕೇಸ್ ಟು ಕೇಸ್ ಆಧಾರದ ಮೇಲೆ ನೇಮಕಾತಿಗೆ ಅನುಮತಿ ನೀಡಲಾಗುತ್ತದೆ. ಆದರೆ ಸ್ಪಷ್ಟವಾಗಿ ಸಿದ್ದರಾಮಯ್ಯ ಆಡಳಿತವು ಖಾತರಿ ಯೋಜನೆಗಳಿಗೆ 63,000 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಿದೆ. ಹಾಗಾಗಿ ನೇಮಕಾತಿಯಲ್ಲಿ ನಿಧಾನವಾಗುತ್ತಿದೆ.
ಖಾಲಿ ಹುದ್ದೆಗಳು ಹೆಚ್ಚಿದ್ದು ಎಲ್ಲಾ ಹೊರಗುತ್ತಿಗೆ ನಿಡಲಾಗುತ್ತಿದೆ. 96, 000 ಸಿ ಗ್ರೂಪ್, ಡಿ ಉದ್ಯೋಗಿಗಳು, ಸೈನೋಗ್ರಾಫರ್ಗಳು, ಟೈಪಿಸ್ಟ್ಗಳು, ಡ್ರೈವರ್ಗಳು ಇತ್ಯಾದಿಯನ್ನು ಹೊರಗುತ್ತಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ:RCBಗೆ ಕೈಕೊಟ್ಟ ವಿರಾಟ್ ಕೊಹ್ಲಿ.. ಸ್ಟಾರ್ ಬ್ಯಾಟರ್ನಿಂದ ಅಭಿಮಾನಿಗಳಿಗೆ ಬಿಗ್ ಶಾಕ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ