ಬೆಳಗಾವಿ ಮಂದಿಗೆ ಮತ್ತೊಂದು ಗುಡ್​ನ್ಯೂಸ್; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

author-image
Ganesh
Updated On
ಬೆಳಗಾವಿ ಮಂದಿಗೆ ಮತ್ತೊಂದು ಗುಡ್​ನ್ಯೂಸ್; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
Advertisment
  • ಕೇಂದ್ರ ರೈಲ್ವೇ ಇಲಾಖೆಯಿಂದ ಮಹತ್ವದ ನಿರ್ಧಾರ
  • ಬೆಳಗಾವಿ-ಬೆಂಗಳೂರು ಓಡಾಟ ಮತ್ತಷ್ಟು ಸುಲಭ
  • ಏಪ್ರಿಲ್‌ನಿಂದ ಬೆಂಗಳೂರು-ಬೆಳಗಾವಿ ನಡುವೆ ಸಂಚಾರ

ಬೆಂಗಳೂರು: ಏಪ್ರಿಲ್ ಮೊದಲ ವಾರದಿಂದ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಸಂಚಾರ ಆರಂಭವಾಗಲಿದೆ.

ಸದ್ಯ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ. ಅದನ್ನು ಬೆಳಗಾವಿಯವರೆಗೂ ವಿಸ್ತರಿಸುವ ಕುರಿತು ರೈಲ್ವೇ ಇಲಾಖೆ ಜೊತೆಗೆ ಸಂಸದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದರು. ಕೊನೆಗೂ ಜಗದೀಶ್ ಶೆಟ್ಟರ್ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ.

ಏಪ್ರಿಲ್ ಮೊದಲ ವಾರದಿಂದ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಯಲಿದೆ. ಈಗಾಗಲೇ ಧಾರವಾಡ-ಬೆಳಗಾವಿ ನಡುವೆ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಲಾಗಿದೆ. ವಂದೇ ಭಾರತ್ ರೈಲು ಬೆಳಗಾವಿ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೇ ಇಲಾಖೆ ವ್ಯವಸ್ಥೆ ಮಾಡುತ್ತಿದೆ.

ಇದನ್ನೂ ಓದಿ: ಹೊಸ ಗೆಟಪ್​ನಲ್ಲಿ ದತ್ತಾ ಬಾಯ್; ನಟ ವಿಜಯ್​ ಸೂರ್ಯ ಲುಕ್​ಗೆ ಫ್ಯಾನ್ಸ್​ ಏನಂದ್ರು?

ಒಮ್ಮೆ ನಿಲ್ದಾಣಕ್ಕೆ ಬಂದೋಬಸ್ತ್ ಆದ ಕೂಡಲೇ ಸಂಚಾರ ಆರಂಭವಾಗಲಿದೆ. ಅಮೃತ್ ಯೋಜನೆಯಡಿಯಲ್ಲಿ ಬೆಳಗಾವಿಯ ರೈಲ್ವೇ ನಿಲ್ದಾಣ ನವೀಕರಣ ನಡೆಯುತ್ತಿದೆ. ನವೀಕರಣದ ಕಾರ್ಯದ ಮಧ್ಯೆದಲ್ಲೇ ಬೆಳಗಾವಿ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. 20661 ಮತ್ತು 20662 ಸಂಖ್ಯೆಯ ವಂದೇ ಭಾರತ್ ರೈಲು, ಬೆಂಗಳೂರು-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ.

ಇದನ್ನೂ ಓದಿ: ರಾಜಕೀಯದಲ್ಲಿ ಒಂದು ನೈಟ್ ಅಲ್ಲಿ​​ ಏನ್ ​ಬೇಕಾದ್ರೂ ಆಗಬಹುದು.. ದೆಹಲಿ ಯಾತ್ರೆಗೂ ಮುನ್ನ ಡಿಕೆಶಿ ಅಚ್ಚರಿ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment