ಕೇಂದ್ರ ಸರ್ಕಾರದಿಂದ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​; ಸದ್ಯದಲ್ಲೇ ಬ್ಯಾಂಕ್​​ ಖಾತೆಗೆ ಹಣ ಜಮಾ

author-image
Ganesh Nachikethu
Updated On
ಬಡ ಹೈನುಗಾರನ ಖಾತೆಗೆ 257 ಕೋಟಿ ರೂಪಾಯಿಗೆ ಜಾಕ್​ಪಾಟ್​; ಬೆಚ್ಚಿಬಿದ್ದ ಅಧಿಕಾರಿಗಳು..
Advertisment
  • ಹೊಸ ವರ್ಷಕ್ಕೆ ಕೇಂದ್ರ ಸರ್ಕಾರಿ ನೌಕಕರಿಗೆ ಗುಡ್​ನ್ಯೂಸ್​
  • ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಮಹತ್ವದ ಸುದ್ದಿ
  • ಕೇಂದ್ರ ನೌಕರರ ಖಾತೆಗೆ 11,250 ರೂ. ಹಣ ಜಮೆ ಆಗಲಿದೆ!

ನವದೆಹಲಿ: ಹೊಸ ವರ್ಷಕ್ಕೆ ಕೇಂದ್ರ ಸರ್ಕಾರಿ ನೌಕಕರಿಗೆ ಗುಡ್​ನ್ಯೂಸ್​ ಒಂದಿದೆ. ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರ ನೌಕರರ ಖಾತೆಗೆ 11,250 ರೂ. ಹಣ ಜಮಾ ಮಾಡಲಿದೆ.

ಕಳೆದ ವರ್ಷ 2024ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ ಶೇ.3ರಷ್ಟು ಹೆಚ್ಚು ಮಾಡಿತ್ತು. ಇದರ ಪರಿಣಾಮ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.53ಕ್ಕೆ ಏರಿಕೆ ಆಗಿತ್ತು. ಈ ತುಟ್ಟಿಭತ್ಯೆಯನ್ನು ಇಷ್ಟು ದಿನ ತಡೆ ಹಿಡಿಯಲಾಗಿತ್ತು. ಈಗ ತಡೆ ಹಿಡಿಯಲಾಗಿದ್ದ ಡಿಎ ಬಾಕಿ ಪಾವತಿಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಾದ ಬೆನ್ನಲ್ಲೇ ಕೇಂದ್ರ ನೌಕರರ ಖಾತೆಗೆ ಹಣ ಬರಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಬಜೆಟ್​​ ಮಂಡನೆ ವೇಳೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೆಲವು ಸಿಹಿ ಸುದ್ದಿಗಳು ಸಿಗಲಿವೆ.

ಇಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಜೆಟ್​​ನಲ್ಲಿ 8ನೇ ವೇತನ ಆಯೋಗದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಹೊಸ ವೇತನ ಆಯೋಗದ ಬದಲು ಖಾಸಗಿ ವಲಯದಲ್ಲಂತೂ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಲಾಗುವುದು. ವೇತನ ಹೆಚ್ಚಳವನ್ನು ಲೆಕ್ಕಾಚಾರ ಮಾಡಲು iCreot ಸೂತ್ರವನ್ನು ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹೊಸ ಸೂತ್ರ ಉದ್ಯೋಗಿಗಳಿಗೆ ದೊಡ್ಡ ರೀತಿಯಲ್ಲಿ ಪ್ರಯೋಜನ ಆಗಲಿದೆ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​​ನಿಂದ ಅಚ್ಚರಿ ನಿರ್ಧಾರ; ಹಳೆಯ ನಾಯಕನಿಗೆ ಕ್ಯಾಪ್ಟನ್ಸಿ ಪಟ್ಟ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment