newsfirstkannada.com

Breaking: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

Share :

Published May 1, 2024 at 9:06am

    ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿ ಆಗಿದೆ

    ಒಂದು ಸಿಲಿಂಡರ್ ಬೆಲೆಯಲ್ಲಿ ಎಷ್ಟು ರೂಪಾಯಿ ಇಳಿಕೆ ಆಗಿದೆ?

    ಕಳೆದ ಏಪ್ರಿಲ್ ತಿಂಗಳಲ್ಲೂ ಬೆಲೆ ಇಳಿಸಿದ್ದ ತೈಲ ಕಂಪನಿಗಳು

ಬೆಂಗಳೂರು: ದೇಶದ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 19 ರೂಪಾಯಿ ಇಳಿಸಿವೆ. ಈ ಮೂಲಕ ಕಮರ್ಷಿಯಲ್ ಸಿಲಿಂಡರ್ ಗ್ರಾಹಕರಿಗೆ ಕೊಂಚ ರಿಲಿಫ್ ಸಿಕ್ಕಿದೆ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,745.5 ರೂಪಾಯಿಗೆ ಇಳಿಕೆ ಆಗಿದೆ. ಪ್ರತಿ ತಿಂಗಳ ಮೊದಲ ದಿನವೇ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಣೆ ಮಾಡುತ್ತವೆ. ಅಂತೆಯೇ ಈ ಮೇ ಮೊದಲ ದಿನ ಗ್ರಾಹಕರಿಗೆ ತೈಲ ಕಂಪನಿಗಳು ಗುಡ್​ನ್ಯೂಸ್ ನೀಡಿವೆ.

ಮುಂಬೈನಲ್ಲಿ 1698.50 ರೂಪಾಯಿ ಆಗಿದ್ದರೆ, ಕೋಲ್ಕತ್ತದಲ್ಲಿ 1859 ರೂಪಾಯಿ ಹಾಗೂ ಚೆನ್ನೈನಲ್ಲಿ 1911 ರೂಪಾಯಿ ಆಗಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಪ್ರಿಲ್ ತಿಂಗಳಿನಲ್ಲೂ ಇಳಿಕೆ ಮಾಡಲಾಗಿತ್ತು. ಹಿಂದಿನ ತಿಂಗಳ 30.50 ರೂಪಾಯಿ ಇಳಿಕೆಯಾಗಿತ್ತು.

ಇದನ್ನೂ ಓದಿ:ಬರಿದಾದ ಕಾವೇರಿ ಒಡಲು.. ಬರದ ಭೀಕರತೆ ಹೇಳ್ತಿದೆ ಈ ಫೋಟೋಗಳು.. ಆದರೂ ತಮಿಳುನಾಡಿಗೆ ಬೇಕಂತೆ ನೀರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

https://newsfirstlive.com/wp-content/uploads/2023/10/LPG-Gas.jpg

Load More