/newsfirstlive-kannada/media/post_attachments/wp-content/uploads/2025/05/MC-SUDHAKAR-1.jpg)
ಒಂದು ಕಾಲದಲ್ಲಿ ಎಂಜಿನಿಯರಿಂಗ್ ಮಾಡಲು ತಾ ಮುಂದು ನಾ ಮುಂದು ಅಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ರು. ಆದರೆ ಇತ್ತೀಚಿಗೆ ಕೆಲ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಅಂತಹ ಕೋರ್ಸ್‌ಗಳಿಗೆ ಶುಲ್ಕ ವಿನಾಯಿತಿ ನೀಡಲು ಇಲಾಖೆ ಸಜ್ಜಾಗುತ್ತಿದೆ.
ಮೆಕಾನಿಕಲ್, ಸಿವಿಲ್ ಸೇರಿದಂತೆ ಕೆಲ ಕೋರ್ಸ್‌ಗಳಿಗೆ ಅಡ್ಮಿಷನ್ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಳೆದ ವರ್ಷ ಅಧಿಕ ಸೀಟು ಹಾಗೇ ಉಳಿದಿತ್ತು. ಇದನ್ನ ಗಮನಿಸಿದ ಉನ್ನತ ಶಿಕ್ಷಣ ಇಲಾಖೆ ಬೇಡಿಕೆ ಇಲ್ಲದ ಕೋರ್ಸ್‌ಗಳಿಗೆ ಮರು ಜೀವ ತುಂಬಲು ಅಂತಹ ಕೋರ್ಸ್‌ಗಳ ಫೀಸ್ ಕಡಿಮೆ ಮಾಡುವ ಮಾಡಲು ತಯಾರಿ ನಡೆಸಿದೆ. ಈ ಶುಲ್ಕ ವಿನಾಯಿತಿಯು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಮಾತ್ರ ಅನ್ವಯಿಸಲಿದೆ.
ಇದನ್ನೂ ಓದಿ: ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 48,000 ರೂಪಾಯಿ ಸಂಬಳ
2024ರಲ್ಲಿ ಉಳಿಕೆಯಾದ ಸೀಟುಗಳ ವಿವರ
ಕಂಪ್ಯೂಟರ್ ಸೈನ್ಸ್
- ಲಭ್ಯವಿದ್ದ ಸೀಟು- 2,367
- ಭರ್ತಿಯಾದ ಸೀಟು- 2,136
- ಉಳಿಕೆಯಾದ ಸೀಟು- 231
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
- ಲಭ್ಯವಿದ್ದ ಸೀಟು- 11,361
- ಭರ್ತಿಯಾದ ಸೀಟು- 9,841
- ಉಳಿಯಾದ ಸೀಟು- 1,520
ಮಾಹಿತಿ ತಂತ್ರಜ್ಞಾನ
- ಲಭ್ಯವಿದ್ದ ಸೀಟು - 6,084
- ಭರ್ತಿಯಾದ ಸೀಟು- 5,405
- ಉಳಿಕೆಯಾದ ಸೀಟು- 679
ಸಿವಿಲ್ ಎಂಜಿನಿಯರಿಂಗ್
- ಲಭ್ಯವಿದ್ದ ಸೀಟು- 5,723
- ಭರ್ತಿಯಾದ ಸೀಟು- 2,883
- ಉಳಿಕೆಯಾದ ಸೀಟು- 2,840
ಮೆಕ್ಯಾನಿಲ್ ಎಂಜಿನಿಯರಿಂಗ್
- ಲಭ್ಯವಿದ್ದ ಸೀಟು- 5,977
- ಭರ್ತಿಯಾದ ಸೀಟು- 2,783
- ಉಳಿಕೆಯಾದ ಸೀಟು- 3,194
2024ರಲ್ಲಿ ಸಿವಿಲ್ ಎಂಜಿನಿಯರಿಂಗ್‌ಗೆ ಶೇಕಡ 47-48ರಷ್ಟು ದಾಖಲಾತಿ ಆಗಿದ್ದರೆ, ಮೆಕಾನಿಕಲ್ ಎಂಜಿನಿಯರಿಂಗ್‌ಗೆ ಕೇವಲ ಶೇ27ರಷ್ಟು ಮಾತ್ರ ದಾಖಲಾತಿ ಆಗಿತ್ತು. ಹೀಗಾಗಿ ಪ್ರಮುಖ ಈ ಎರಡು ಕೋರ್ಸ್ ಸೇರಿದಂತೆ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಫೀಸ್ ಅಲ್ಲೂ ಕೂಡ ಕಡಿತವಾಗಿವ ಸಾಧ್ಯತೆ ಇದೆ. ಈ ಬಾರಿ ಸಿಇಟಿ ಸೀಟು ಹಂಚಿಕೆಯೊಳಗೆ ಕಾಲೇಜು ಫೀಸ್ ಅಂತಿಮವಾಗಲಿದೆ.
ಇದನ್ನೂ ಓದಿ: CBSE 12ನೇ ತರಗತಿ: ಈ ಬಾರಿ ವಿಜಯವಾಡ ಇಡೀ ದೇಶಕ್ಕೆ ಫಸ್ಟ್.. ಬೆಂಗಳೂರಿಗೆ ಎಷ್ಟನೇ ಸ್ಥಾನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ