/newsfirstlive-kannada/media/post_attachments/wp-content/uploads/2025/03/VIRAT-KOHLI-8.jpg)
ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದರೂ ಅಭಿಮಾನಿಗಳ ಮನದಲ್ಲಿ ಒಂದು ಆತಂಕ ಮನೆ ಮಾಡಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. ಈ ದಿಗ್ಗಜರ ಆಟ ಏಕದಿನ ಕ್ರಿಕೆಟ್ನಲ್ಲಿ ಇವತ್ತೇ ಕೊನೆನಾ ಎಂಬ ದುಗಡವೂ ಇತ್ತು. ಆ ಆತಂಕ ದೂರಾಗಿದೆ. ನಿವೃತ್ತಿ ಸುದ್ದಿಗೆ ಕ್ಲೀಯರ್ ಕಟ್ ಆನ್ಸರ್ ಕೊಟ್ಟಿರೋ, ರೋಹಿತ್ ಮುಂದಿನ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.
ಸೆಲೆಬ್ರೇಷನ್ ನೋಡಿದ ಫ್ಯಾನ್ಸ್ಗೆ ರೋಹಿತ್, ವಿರಾಟ್ ನಿವೃತ್ತಿ ಶಾಕ್ ನೀಡ್ತಾರಾ? ಅನ್ನೋ ಮನದ ವೇದನೆ ಕಾಡಲು ಶುರುವಾಗಿತ್ತು. ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದ ಈ ಜೋಡಿ, ಚಾಂಪಿಯನ್ಸ್ ಟ್ರೋಫಿ ನಂತರ ಏಕದಿನ ಮಾದರಿಯಿಂದಲೂ ದೂರ ಸರೀತಾರೆ ಅನ್ನೋ ಮಾತುಗಳಿತ್ತು. ಹೀಗಾಗಿ ಸಂಭ್ರಮದ ನಡು ನಡುವೆಯೇ ದಿಗ್ಗಜರು ಮರೆಯಾಗ್ತಾರಾ ಎಂಬ ಬೇಸರವೂ ಇತ್ತು. ಇದಕ್ಕೆಲ್ಲಾ ರೋಹಿತ್ ಒಂದೇ ಒಂದು ಮಾತಿನ ಉತ್ತರ ಫ್ಯಾನ್ಸ್ ಸಂಭ್ರಮವನ್ನ ಇಮ್ಮುಡಿಗೊಳಿಸಿತ್ತು.
ಮತ್ತೊಂದು ವಿಷ್ಯ. ನಾನು ಈ ಫಾರ್ಮೆಟ್ನಿಂದ ನಿವೃತ್ತಿ ಹೊಂದುತ್ತಿಲ್ಲ. ಯಾವುದೇ ರೂಮರ್ಸ್ ಹರಡಬಾರದು ಎಂದು ಹೇಳುತ್ತಿದ್ದೇನೆ. ಮುನ್ನಡೆಯುತ್ತ ಹೋಗ್ತಾನೆ-ರೋಹಿತ್ ಶರ್ಮಾ, ನಾಯಕ
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯ ಶ್ರೇಷ್ಠ ತಂಡ ಪ್ರಕಟ; KL ರಾಹುಲ್ ಸೇರಿ ಟೀಂ ಇಂಡಿಯಾದ 6 ಸ್ಟಾರ್ಗಳಿಗೆ ಸ್ಥಾನ
ರೋಹಿತ್ ಶರ್ಮಾರ ಈ ಒಂದು ಮಾತು ಹಬ್ಬಿದ್ದ ವದಂತಿಗಳಿಗೆ ಬ್ರೇಕ್ ಹಾಕ್ತು. ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು. ಮತ್ತಷ್ಟು ದಿನಗಳ ಕಾಲ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಯಾಗಿ ಆಡ್ತಾರೆ ಅನ್ನೋ ಸಂದೇಶವನ್ನು ನೀಡ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಕಾರಣವೂ ಇದೆ.
2027ರ ಏಕದಿನ ವಿಶ್ವಕಪ್ ಮೇಲೆ ರೋಹಿತ್-ಕೊಹ್ಲಿ ಕಣ್ಣು
ಸದ್ಯಕ್ಕೆ ನಿವೃತ್ತಿ ವಿಚಾರ ತಳ್ಳಿಹಾಕಿರುವ ರೋಹಿತ್, ವಿರಾಟ್, 2027ರ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ತಾರಾ ಎಂಬುದೇ ಪ್ರಶ್ನೆ. ಏಕೆಂದರೆ ಮುಂದಿನ 2 ವರ್ಷಗಳಲ್ಲಿ ರೋಹಿತ್ ವಯಸ್ಸು 39 ಆಗಿರಲಿದೆ. ಅತ್ತ ವಿರಾಟ್ ವಯಸ್ಸು 38 ವರ್ಷ ಆಗಿರಲಿದೆ. ಹೀಗಾಗಿ ಇವರಿಬ್ಬರು ಆಡ್ತಾರಾ ಅನ್ನೋ ಅನುಮಾನ ಇತ್ತು. ಆದ್ರೀಗ ಅನುಮಾನಕ್ಕೆ ತೆರೆ ಎಳೆದಿರುವ ರೋಹಿತ್, ವಿರಾಟ್ ಕೊಹ್ಲಿ, 2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿದ್ದಾರೆ. ಏಕದಿನ ವಿಶ್ವಕಪ್ ಗೆಲ್ಲದಿರುವ ಕೊರಗು ನೀಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಪ್ಲ್ಯಾನ್ ಕೂಡ ರೂಪಿಸಿಕೊಂಡಿದ್ದಾರೆ. ಇದೇ ನಿಜಕ್ಕೂ ಬಿಗೆಸ್ಟ್ ಚಾಲೆಂಜ್.
ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಧನಶ್ರೀ ವರ್ಮಾ; ಚಹಾಲ್ ಜೊತೆಗಿನ ಕ್ಷಣಗಳು ರಿಸ್ಟೋರ್..!
ಫಾರ್ಮ್ ಉಳಿಸಿಕೊಳ್ಳುವ ಸವಾಲ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿರುವ ರೋಹಿತ್, ಕೊಹ್ಲಿ. 2027ರ ಏಕದಿನ ವಿಶ್ವಕಪ್ ಆಡೋ ಗುರಿ ಹೊಂದಿದ್ದಾರೆ ನಿಜ. ಇದು ಸಾಧ್ಯವಾಗಬೇಕಾದ್ರೆ ವಿರಾಟ್ ಹಾಗು ರೋಹಿತ್ ಪ್ರಸ್ತುತ ಫಾರ್ಮ್, ಮುಂದಿನ 2 ವರ್ಷಗಳ ಕಾಲ ಮುಂದುವರಿಸಬೇಕಿದೆ. ಇಂಜುರಿಯಿಂದ ದೂರ ಉಳಿಯೋದು ಬಿಗೆಸ್ಟ್ ಚಾಲೆಂಜ್. ಹೀಗಾಗಿ 2027ರ ಏಕದಿನ ವಿಶ್ವಕಪ್ ಗೆಲುವಿನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳೋ ಪ್ಲ್ಯಾನ್ನಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮುಂದಿನ ಎರಡು ವರ್ಷಗಳ ಕಾಲ ತಂಡದಲ್ಲಿ ಇರ್ತಾರಾ ಅನ್ನೋದೇ ಪ್ರಶ್ನೆ.
ರೋಹಿತ್ ಶರ್ಮಾ, ವಿರಾಟ್, 2027ರ ವಿಶ್ವಕಪ್ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಇದರೊಂದಿಗೆ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ. ಈ ಕನಸು ನಿಜವಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಷ್ಟೇ.
ಇದನ್ನೂ ಓದಿ: ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್