/newsfirstlive-kannada/media/post_attachments/wp-content/uploads/2025/07/krs2.jpg)
ಮಂಡ್ಯ: ಕೊನೆಗೂ ರಾಜ್ಯ ಸರ್ಕಾರ ಮಂಡ್ಯ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅಲ್ಲದೇ ಅನ್ನದಾತರ ಆಗ್ರಹಕ್ಕೆ ರಾಜ್ಯ ಸರ್ಕಾರ ಮಣಿದಿದೆ.
ಇದನ್ನೂ ಓದಿ:ಚಿಕ್ಕಮ್ಮನ ಮದ್ವೆ ಆಗುವಂತೆ ಯುವಕನಿಗೆ ಹಿಗ್ಗಾಮುಗ್ಗಾ ಹಲ್ಲೆ.. ಬಲವಂತವಾಗಿ ಹಣೆಗೆ ತಿಲಕ ಹಚ್ಚಿಸಿದ ಚಿಕ್ಕಪ್ಪ..!
/newsfirstlive-kannada/media/post_attachments/wp-content/uploads/2025/07/krs.jpg)
ಅಣೆಕಟ್ಟೆ ಇತಿಹಾಸದಲ್ಲೇ ಜೂನ್ ತಿಂಗಳಿನಲ್ಲಿ ಕೆಆರ್​ಎಸ್​ ಡ್ಯಾಂ ಭರ್ತಿಯಾಗಿದೆ. ಡ್ಯಾಂ ತುಂಬಿದ ಪರಿಣಾಮ ನದಿ ಮೂಲಕ ಕಾವೇರಿ ನೀರು ತಮಿಳುನಾಡಿಗೆ ಯಥೇಚ್ಛವಾಗಿ ಹರಿಯುತ್ತಿತ್ತು. KRS ಡ್ಯಾಂ ಭರ್ತಿಯಾದ್ರೂ, ಗೇಟ್ ಅಳವಡಿಕೆ, ನಾಲಾ ಆಧುನೀಕರಣ ಕಾಮಗಾರಿ ನೆಪದಲ್ಲಿ ರೈತರ ಬೆಳೆಗಳಿಗೆ ನೀರು ಬಿಡದೆ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿತ್ತು ಸರ್ಕಾರ. ಪರಿಣಾಮ ನೀರು ಇಲ್ಲದೇ, ಮಳೆಯೂ ಇಲ್ಲದೇ ರೈತರ ಬೆಳೆಗಳು ಒಣಗುತ್ತಿದ್ದವು.
/newsfirstlive-kannada/media/post_attachments/wp-content/uploads/2025/07/krs1.jpg)
ಹೀಗಾಗಿ ಸರ್ಕಾರ, ಕಾವೇರಿ ನೀರಾವರಿ ನಿಗಮದ ನಡೆ ವಿರುದ್ಧ ವ್ಯಕ್ತವಾಗಿದ್ದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ರೈತರು, ವಿಪಕ್ಷ ನಾಯಕರ ಆಕ್ರೋಶ ಹಾಗೂ ಆಗ್ರಹಕ್ಕೆ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮ ಕಡೆಗೂ ಮಣಿದಿದೆ. ರಾತ್ರಿಯಿಂದ ವಿಶ್ವೇಶ್ವರಯ್ಯ ನಾಲೆಯ ಮೂಲಕ ರೈತರ ಬೆಳೆಗಳಿಗೆ ನೀರು ಹರಿಸಿದದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸದ್ಯ ತಾವು ಬೆಳೆದ ಬೆಳೆಗಳನ್ನ ಉಳಿಸಿಕೊಳ್ಳಲು ಅನ್ನದಾತರು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us