/newsfirstlive-kannada/media/post_attachments/wp-content/uploads/2023/08/Gold-rate-1.jpg)
ಇದು ಮದುವೆಗಳ ಸೀಸನ್. ಎಲ್ಲರಿಗೂ ಬಂಗಾರ ಖರೀದಿ ಮಾಡಲೇಬೇಕಾದ ಅಗತ್ಯ. ಹಾಗಾಗಿ ಜನ ಚಿನ್ನದ ಅಂಗಡಿಗಳ ಮುಂದೆ ಕ್ಯೂ ಕಟ್ಟಿ ನಿಂತಿದ್ದಾರೆ. ಈ ಹೊತ್ತಲೇ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇತ್ತು. ಇದರಿಂದ ಜನ ಬೆಚ್ಚಿಬಿದ್ದು ಹೋಗಿದ್ರು. ಈಗ ಚಿನ್ನದ ದರ ದಿಢೀರ್ ಇಳಿಕೆ ಆಗಿದ್ದು, ಬಂಗಾರ ಖರೀದಿ ಮಾಡೋರಿಗೆ ಇದು ಗುಡ್ನ್ಯೂಸ್ ಆಗಿದೆ.
ಬಂಗಾರದ ದರದಲ್ಲಿ ಸಾಕಷ್ಟು ಕುಸಿತವಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ದರ ಕಡಿಮೆ ಆಗುತ್ತಲೇ ಇದೆ. ಯಾರಿಗಾದ್ರೂ ಚಿನ್ನ ಖರೀದಿ ಮಾಡಬೇಕು ಅನ್ನೋದಾದ್ರೆ ಇದು ಒಳ್ಳೆಯ ಅವಕಾಶ.
ಚಿನ್ನಕ್ಕೆ ಭಾರೀ ಡಿಮ್ಯಾಂಡ್
ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರನ್ನು ಆಕರ್ಷಿಸೋ ಏಕೈಕ ಲೋಹ ಚಿನ್ನ. ಮದುವೆ ಸೀಸನ್ನಲ್ಲಂತೂ ಚಿನ್ನದ ಆಭರಣಗಳಿಗೆ ವಿಶೇಷವಾದ ಡಿಮ್ಯಾಂಡ್ ಇದೆ. ನೀವು ಚಿನ್ನ ಖರೀದಿ ಮಾಡಿದ್ರೆ ಎರಡು ವರ್ಷಗಳಲ್ಲಿ ನಿಮಗೆ ಡಬಲ್ ಇನ್ಕಮ್ ನೀಡಲಿದೆ.
ಹೂಡಿಕೆ ಮಾಡೋಕು ಬೆಸ್ಟ್ ಚಿನ್ನ
ಇಷ್ಟೇ ಅಲ್ಲ ಹೂಡಿಕೆ ಮಾಡಲು ಕೂಡ ಚಿನ್ನ ಯಾವಾಗಲೂ ಬೆಸ್ಟ್. ಆಗಾಗ ಸಣ್ಣಪುಟ್ಟ ಏರಿಳಿತ ಬಿಟ್ಟರೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಯಾವುದೇ ಲಾಸ್ ಅಂತೂ ಇಲ್ಲ. ಬದಲಿಗೆ ಭೂಮಿಯಷ್ಟೇ ಬಂಗಾರ ಗೋಲ್ಡ್.
ಬೆಲೆಯಲ್ಲಿ ಸತತ ಇಳಿಕೆ
ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಎರಡು ಲೋಹಗಳ ದರ ಕಡಿಮೆ ಆಗಿದೆ. ಈಗ ಬೆಂಗಳೂರಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 72,250 ಆಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 5,912 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 7,225 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 7,882 ಆಗಿದೆ. ಹಾಗೆಯೇ ಪ್ರತಿ ಕೆಜಿ ಬೆಳ್ಳಿ ದರ ರೂ. 92,500 ಆಗಿದೆ.
ಇದನ್ನೂ ಓದಿ:Karnataka Naxal: ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ