/newsfirstlive-kannada/media/post_attachments/wp-content/uploads/2025/03/Yugadi-Holige.jpg)
ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಯುಗಾದಿ ಅಂದ್ರೆ ಹೋಳಿಗೆಯ ಘಮ, ಘಮ ಮನೆ, ಮನೆಗಳಲ್ಲೂ ಪಸರಿಸುತ್ತದೆ. ಯುಗಾದಿ ಸಮೀಪಿಸುತ್ತಿದ್ದಂತೆ ಹೋಳಿಗೆ ಪ್ರಿಯರು ಖುಷಿ ಪಡುವ ಸಿಹಿ ಸುದ್ದಿ ಸಿಕ್ಕಿದೆ.
ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯದಲ್ಲಿ ತೊಗರಿಬೇಳೆ ದರ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸಗಟು ದರ ಹಾಗೂ ಚಿಲ್ಲರೆ ದರದಲ್ಲಿ ಕೆಜಿ ತೊಗರಿಬೇಳೆ ಎಷ್ಟಿತ್ತು? ಈಗ ಎಷ್ಟು ಇಳಿಕೆ ಆಗಿದೆ ಅನ್ನೋ ವಿವರ ಇಲ್ಲಿದೆ.
ಕಳೆದ 3 ತಿಂಗಳ ಹಿಂದೆ ಅಂದ್ರೆ 2024ರ ಡಿಸೆಂಬರ್‌ನಲ್ಲಿ ತೊಗರಿಬೇಳೆಯ ಸಗಟು ದರವು ಕೆಜಿಗೆ 150 ರಿಂದ 175 ರೂಪಾಯಿಗಳಿತ್ತು. ಈಗ ಸಗಟು ದರ ಕೆಜಿಗೆ 45 ರೂಪಾಯಿ ಕಡಿಮೆಯಾಗಿದೆ. ಅಂದ್ರೆ ಸದ್ಯ ಸಗಟು ದರ ಕೆಜಿಗೆ 105-135 ರೂಪಾಯಿಗೆ ಇಳಿಕೆಯಾಗಿದೆ.
/newsfirstlive-kannada/media/post_attachments/wp-content/uploads/2025/03/Chickpea.jpg)
ಮೂರು ತಿಂಗಳ ಹಿಂದೆ ಚಿಲ್ಲರೆ ಮಾರಾಟಗಾರರು ಕೆಜಿಗೆ 200 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು. ಈಗ ಚಿಲ್ಲರೆ ಮಾರಾಟಗಾರರು ಸಾಧಾರಣ ಬೇಳೆಯನ್ನು 130-150 ರೂಪಾಯಿ ಮತ್ತು ಒಳ್ಳೆ ಗುಣಮಟ್ಟದ ಬೇಳೆಯನ್ನು 170 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ.
2024ರ ಅಕ್ಟೋಬರ್-ನವೆಂಬರ್‌ನಲ್ಲಿ ತೊಗರಿಬೇಳೆ ಕೆಜಿಗೆ 200 ರೂಪಾಯಿ ದಾಟಿತ್ತು. ಇದೀಗ ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ತೊಗರಿಬೇಳೆ ದರ ಇಳಿಕೆ ಆಗಿರುವುದು ಗೃಹಿಣಿಯರಿಗೆ ಸಂತಸ ತಂದಿದೆ.
/newsfirstlive-kannada/media/post_attachments/wp-content/uploads/2025/03/Yugadi-Holige-1.jpg)
ತೊಗರಿಬೇಳೆ ದರ ಇಳಿಕೆಗೆ ಕಾರಣ ಇಲ್ಲಿದೆ!
ಈ ವರ್ಷ ಎಲ್ಲೆಡೆ ತೊಗರಿಬೇಳೆಯ ಫಸಲು ಸಮೃದ್ಧವಾಗಿ ಬಂದಿದೆ. ಕರ್ನಾಟಕದಲ್ಲೂ ಅತ್ಯುತ್ತಮ ಬೆಳೆ ಬೆಳೆಯಲಾಗಿದೆ. ತೊಗರಿಬೇಳೆ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶಗಳಲ್ಲೂ ಈ ಬಾರಿ ಉತ್ತಮ ಬೆಳೆಯಾಗಿದೆ.
ದೇಶೀಯವಾಗಿ ಮಾತ್ರವಲ್ಲದೆ ವಿದೇಶಗಳಿಂದಲೂ ತೊಗರಿಬೇಳೆ ಹೆಚ್ಚು ಆಮದಾಗುತ್ತಿದೆ. ದಕ್ಷಿಣ ಆಫ್ರಿಕಾ, ವಿಯೆಟ್ನಾಂ ಮತ್ತಿತರ ಭಾಗಗಳಿಂದಲೂ ಅತಿ ಹೆಚ್ಚು ತೊಗರಿಬೇಳೆ ಬರುತ್ತಿದೆ. ಹೀಗಾಗಿ ತೊಗರಿಬೇಳೆಯ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಯಶವಂತಪುರ ಎಪಿಎಂಸಿಯ ಸಗಟು ವರ್ತಕರ ಸಂಘ ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us