newsfirstkannada.com

ಇಶಾನ್-ಶ್ರೇಯಸ್​ ವಿವಾದದ ಬಗ್ಗೆ ಮೌನ ಮುರಿದ ದ್ರಾವಿಡ್; ಇಬ್ಬರು ಯಂಗ್​ಸ್ಟರ್​ಗೆ ಇದು ಶುಭ ಸೂಚನೆ..!

Share :

Published March 11, 2024 at 11:14am

  ​​​​​​​​ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ

  ಇಶಾನ್-ಶ್ರೇಯಸ್​ ಭವಿಷ್ಯದ ಬಗ್ಗೆ ದ್ರಾವಿಡ್ ಉತ್ತರ

  ಇಬ್ಬರಿಗೂ ಕೋಚ್​​ ದ್ರಾವಿಡ್ ಗುಡ್​ನ್ಯೂಸ್ ನೀಡಿದ್ದಾರೆ

ಇಶಾನ್ ಕಿಶನ್ ಅಂಡ್ ಶ್ರೇಯಸ್ ಅಯ್ಯರ್.. ಕಳೆದ ಒಂದೆರಡು ತಿಂಗಳಿಂದ ಚರ್ಚೆಯಲ್ಲಿರುವ ಆಟಗಾರರು. ಇವರಿಬ್ಬರ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಡೆಯಿಂದ, ಇವರ ಕರಿಯರ್​​​ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಥ ಹೊತ್ತಲ್ಲೇ ಕೋಚ್​​ ದ್ರಾವಿಡ್ ಗುಡ್​ನ್ಯೂಸ್ ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಟೀಮ್ ಇಂಡಿಯಾ, ಸರಣಿಯಲ್ಲಿ ಗೆದ್ದು ಬೀಗಿದೆ. ಈ ಸರಣಿಯಲ್ಲಿ ಯುವ ಆಟಗಾರರ ಅದ್ಭುತ ಪ್ರದರ್ಶನದ ಟೆಸ್ಟ್​ಗೆ ಹೊಸ ಮೆರಗು ತಂದಿದೆ. ಆದ್ರೆ, ಈ ಟೆಸ್ಟ್​ ಸರಣಿಯ ನಡು ನಡುವೆಯೇ ಸದ್ದು ಮಾಡಿದ್ದು ಮಾತ್ರ.. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್.

ಟೆಸ್ಟ್​ ಸರಣಿಯ ನಡುವೆ ಹೆಚ್ಚು ಸುದ್ದಿಯಾಗಿದ್ದು, ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ವ್ಯಾಪಕ ಚರ್ಚೆಗೆ ಆಸ್ಪದವೂ ಮಾಡಿಕೊಟ್ಟಿತ್ತು. ಪರ-ವಿರೋಧದ ಡಿಬೇಟ್​​ಗೂ ಕಾರಣವಾಗಿತ್ತು. ಇದಕ್ಕೆಲ್ಲಾ ಕಾರಣ ಜಾರ್ಖಂಡ್ ವಿಕೆಟ್ ಕೀಪರ್​​​​​ ಇಶಾನ್ ಕಿಶನ್ ಆ್ಯಂಡ್ ಮುಂಬೈಕರ್ ಶ್ರೇಯಸ್ ಅಯ್ಯರ್​ ವಿರುದ್ಧ ಬಿಸಿಸಿಐ ತೆಗೆದುಕೊಂಡ ಕಠಿಣ ಕ್ರಮವೇ ಆಗಿತ್ತು.

ವಾರ್ಷಿಕ ಒಪ್ಪಂದದಿಂದ ಕೊಕ್ ನೀಡಿದ್ದ ಬಿಸಿಸಿಐ
ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ, ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟಿಸಿತ್ತು. ರಣಜಿ ಟ್ರೋಫಿಯಲ್ಲಿ ಭಾವವಹಿಸದ ಕಾರಣ, ವಾರ್ಷಿಕ ಒಪ್ಪಂದಿಂದ ಇಶಾನ್​ ಹಾಗೂ ಶ್ರೇಯಸ್​ ಅಯ್ಯರ್​ನ ಕೈಬಿ ಬಿಸಿಸಿಐ ಶಾಕ್​ ನೀಡಿತ್ತು. ಇದು ಬಿಸಿಸಿಐ ನಡೆ ಜೊತೆಗೆ ರಾಜಕೀಯ ಕೈವಾಡದ ಆರೋಪಕ್ಕೂ ಗುರಿ ಮಾಡಿತ್ತು. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆ, ಟಿಪ್ಪಣೆಗಳು ಕಾರಣವಾಗಿತ್ತು. ಈ ಕುರಿತು ಇಷ್ಟು ದಿನ ಮೌನವಾಗಿದ್ದ ಕೋಚ್ ರಾಹುಲ್​ ದ್ರಾವಿಡ್, ಇದೀಗ ಮೌನ ಮುರಿದಿದ್ದಾರೆ.

ಕಾಂಟ್ರಾಕ್ಟ್ ನಿರ್ಧರಿಸುವವನು ನಾನಲ್ಲ. ಗುತ್ತಿಗೆಯನ್ನ ನಿರ್ಧರಿಸುವುದು ಆಯ್ಕೆ ಮಂಡಳಿ ಹಾಗೂ ಬೋರ್ಡ್​. ಒಪ್ಪಂದದ ಮಾನದಂಡಗಳು ನನಗೆ ತಿಳಿದಿಲ್ಲ. 15 ಆಟಗಾರರ ಆಯ್ಕೆ ವೇಳೆ ಮಾತ್ರ ನನ್ನ ಅಭಿಪ್ರಾಯ ತೆಗೆದುಕೊಳ್ಳಲಾಗುತ್ತೆ. ನಂತರ ನಾನು ರೋಹಿತ್ ಪ್ಲೇಯಿಂಗ್-XI ಆಯ್ಕೆ ಮಾಡುತ್ತೇವೆ. ಇದು ಬಿಟ್ಟರೆ ಆಟಗಾರರು ಒಪ್ಪಂದ ಹೊಂದಿದ್ದಾರೆಯೇ? ಇಲ್ಲವೇ ಎಂಬುವುದನ್ನ ಚರ್ಚಿಸಲ್ಲ-ರಾಹುಲ್ ದ್ರಾವಿಡ್, ಹೆಡ್ ಕೋಚ್

ರನ್​​ ಮಾಡಿ.. ಸೆಲೆಕ್ಟರ್ಸ್​ ಮೇಲೆ ಒತ್ತಡ ಹಾಕಿ..!
ಬಿಸಿಸಿಐ ನಡೆಯಿಂದ ಇಶಾನ್ ಹಾಗೂ ಶ್ರೇಯಸ್, ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡ್ತಾರಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ಭವಿಷ್ಯದ ಪ್ರಶ್ನೆಗೂ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.

ಯಾರೂ ತಂಡದಿಂದ ಹೊರಗಿಲ್ಲ. ತಂಡಕ್ಕೆ ಹಿಂತಿರುಗಲು ಪ್ರಶ್ನೆ ಬಂದಾಗ ಫಿಟ್ ಆಗಿರಬೇಕು, ಕ್ರಿಕೆಟ್ ಆಡಬೇಕು. ರನ್​ ಗಳಿಸಿ ಆಯ್ಕೆದಾರರ ಮೇಲೆ ಒತ್ತಡ ಹೇರಬೇಕು-ರಾಹುಲ್ ದ್ರಾವಿಡ್, ಹೆಡ್ ಕೋಚ್

ಕೋಚ್​ ದ್ರಾವಿಡ್ ನೀಡಿರುವ ಈ ಹೇಳಿಕೆ ಇಶಾನ್ ಹಾಗೂ ಶ್ರೇಯಸ್​ ಅಯ್ಯರ್​ಗೆ ಶುಭಸೂಚನೆಯೇ ಆಗಿದೆ. ಅತ್ತ ರಣಜಿ ಫೈನಲ್​​ ಆಡ್ತಿರೋ ಶ್ರೇಯಸ್​, ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಇದು ಸಹಜವಾಗೇ ಅಯ್ಯರ್ ಪಾಲಿಗೆ ಮುಳ್ಳಾಗಿದೆ. ಒಟ್ನಲ್ಲಿ.! ಭವಿಷ್ಯದ ಚಿಂತನೆಯಲ್ಲಿರುವ ಶ್ರೇಯಸ್​ ಆ್ಯಂಡ್ ಕಿಶನ್​ಗೆ ದ್ರಾವಿಡ್ ಶುಭಸುದ್ದಿಯನ್ನೇ ನೀಡಿದ್ದು, ಆಟದ ಮೂಲಕ ಉತ್ತರ ನೀಡಬೇಕಾದ ಜವಾಬ್ದಾರಿ ಇಬ್ಬರ ಮುಂದಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಶಾನ್-ಶ್ರೇಯಸ್​ ವಿವಾದದ ಬಗ್ಗೆ ಮೌನ ಮುರಿದ ದ್ರಾವಿಡ್; ಇಬ್ಬರು ಯಂಗ್​ಸ್ಟರ್​ಗೆ ಇದು ಶುಭ ಸೂಚನೆ..!

https://newsfirstlive.com/wp-content/uploads/2024/01/Ishan-Kishan_Shreyas-Iyer.jpg

Load More