/newsfirstlive-kannada/media/post_attachments/wp-content/uploads/2024/07/krs-dam-1.jpg)
ರಾಜ್ಯದಲ್ಲಿ ಭಾರೀ ಮಳೆಯಾಗ್ತಿರೋದ್ರಿಂದ ರೈತರ ಜೀವನಾಡಿಗಳಾಗಿರೋ ಡ್ಯಾಂಗಳು ಭರ್ತಿಯಾಗ್ತಿದೆ. ಜೀವನದಿ ಕಾವೇರಿಯ ಕೆ.ಆರ್.ಎಸ್ ಡ್ಯಾಂಗೆ ಒಳಹರಿವು ಮತ್ತಷ್ಟು ಏರಿಕೆಯಾಗಿದೆ. ಮಲೆನಾಡಿನಲ್ಲಿ ಆರ್ಭಟಿಸುತ್ತಿರೋ ವರುಣನಿಂದಾಗಿ ತುಂಗಾ ಡ್ಯಾಂ ತುಂಬಿದೆ. ಆಲಮಟ್ಟಿ ಡ್ಯಾಂನಲ್ಲಿ ಒಳಹರಿವು ಹೆಚ್ಚಳವಾಗಿರೋದ್ರಿಂದ ಭೂತನಾಳ ಕೆರೆಗೆ ಜೀವ ಕಳೆ ಬಂದಿದೆ. ಇಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾರ್ಭಟ ಜೋರಾಗಿದ್ದು, ಕೆ.ಆರ್.ಎಸ್ ಡ್ಯಾಂಗೆ ಒಳಹರಿವು ಮತ್ತಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಥ್
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ - 106.20 ಅಡಿ
ಒಳ ಹರಿವು - 19,202 ಕ್ಯೂಸೆಕ್
ಹೊರ ಹರಿವು - 2,284 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 28.072 ಟಿಎಂಸಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ - 65 ಅಡಿ
ಇಂದಿನ ಮಟ್ಟ- 63.73
ಒಳಹರಿವು- 5,881 ಕ್ಯೂಸೆಕ್
ಹೊರ ಹರಿವು- 5000 ಕ್ಯೂಸೆಕ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ - 129 ಅಡಿ
ಇಂದಿನ ಮಟ್ಟ- 121.3 ಅಡಿ
ಒಳಹರಿವು- 1,673 ಕ್ಯೂಸೆಕ್
ಹೊರಹರಿವು- 200 ಕ್ಯೂಸೆಕ್
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ - 117 ಅಡಿ
ಇಂದಿನ ಮಟ್ಟ- 95.95 ಅಡಿ
ಒಳಹರಿವು- 6,464 ಕ್ಯೂಸೆಕ್
ಹೊರಹರಿವು- 250 ಕ್ಯೂಸೆಕ್
ಮಳೆನಾಡಿನ ಮಳೆಗೆ ತುಂಬಿದ ತುಂಗಾ ಡ್ಯಾಂ
ವರುಣನ ಆರ್ಭಟಕ್ಕೆ ಮಲೆನಾಡು ಮಳೆನಾಡಾಗಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗ್ತಿರೋದ್ರಿಂದ ಗಾಜನೂರು ಬಳಿ ಇರೋ ತುಂಗಾ ಜಲಾಶಯ ಭರ್ತಿಯಾಗಿದೆ. ಡ್ಯಾಂ ತುಂಬಿರೋದ್ರಿಂದ 21 ಗೇಟ್‌ಗಳನ್ನ ಓಪನ್ ಮಾಡಿ ನೀರು ಹೊರ ಬಿಡಲಾಗಿದೆ. ನಿರಂತರ ಮಳೆಿಯಿಂದಾಗಿ 3.24 ಟಿಎಂಸಿ ಸಾಮರ್ಥ್ಯದ ಡ್ಯಾಂ ಭರ್ತಿಯಾಗಿದೆ.
ಜಲಾಶಯಕ್ಕೆ ಸುಮಾರು 32 ಸಾವಿರದ 782 ಕ್ಯೂಸೆಕ್ ನೀರು ಒಳಹರಿವಿದೆ. ಅಷ್ಟೇ ಪ್ರಮಾಣದ ನೀರನ್ನು ಕೂಡ ತುಂಗಾ ನದಿಗೆ ಬಿಡಲಾಗಿದೆ. ರಾಜ್ಯದಲ್ಲಿಯೇ ಮೊದಲು ತುಂಬುವ ಡ್ಯಾಂ ಎಂಬ ಖ್ಯಾತಿ ಪಡೆದಿರೋ ತುಂಬಾ ಜಲಾಶಯ ಶಿವಮೊಗ್ಗ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತೆ.
ಆಲಮಟ್ಟಿ ಡ್ಯಾಂನಿಂದಾಗಿ ಭೂತನಾಳ ಕೆರೆಗೆ ಜೀವ ಕಳೆ
ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗ್ತಿರೋದ್ರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂನಲ್ಲಿ ಒಳಹರಿವು ಹೆಚ್ಚಳವಾಗಿದೆ. ಇದರಿಂದಾಗಿ ಬೇಸಿಗೆಯಲ್ಲಿ ಬರಿದಾಗಿದ್ದ ಭೂತನಾಳ ಕೆರೆಗೆ ಜೀವಕಳೆ ಬಂದಿದೆ. ಆಲಮಟ್ಟಿ ಜಲಾಶಯದಿಂದ ಸುಮಾರು 322 ಎಕರೆ ಪ್ರದೇಶ ವಿಸ್ತೀರ್ಣ ಇರೋ ಭೂತನಾಳ ಕೆರೆಗೆ ನೀರನ್ನ ಹರಿಸಿದ್ದು ಬಹುತೇಕ ಭರ್ತಿಯಾಗಿದೆ. ನಗರದ ಐದು ವಾರ್ಡ್‌ಗಳಿಗೆ ಭೂತನಾಳ ಕೆರೆಯಿಂದ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ.
ಸುಂಡಿ ಫಾಲ್ಸ್‌ನಲ್ಲಿ ಪ್ರವಾಸಿಗರು ಫುಲ್ ಖುಷ್
ಗಡಿಭಾಗದಲ್ಲಿರೋ ಭೋರ್ಗರೆಯುತ್ತಿರೋ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿವೆ. ಜಿಲ್ಲೆಯಿಂದ 30 ಕಿಲೋ ಮೀಟರ್ ದೂರದಲ್ಲಿರೋ ಸುಂಡಿ ಫಾಲ್ಸ್ 50 ಅಡಿ ಎತ್ತರಿಂದ ಧುಮ್ಮಿಕ್ಕುತ್ತಿದೆ. ಜಲಪಾತ ನೋಡೋಕೆ ಪ್ರತಿಯೊಬ್ಬರಿಗೂ 20 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಕಾಡಿನೊಳಗಿರೋ ಫಾಲ್ಸ್ ಕೆಳಗೆ ಪ್ರವಾಸಿಗರು ಮೈಯೊಡ್ಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಗೋವಾ, ಮಹಾರಾಷ್ಟ್ರ,ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರ ಬರ್ತಿದ್ದು ಯಾವುದೇ ತೊಂದರೆ ಆಗದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮಳೆಯಿಂದಾಗಿ ಡ್ಯಾಂಗಳು ಭರ್ತಿಯಾಗ್ತಿದ್ರೆ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಜಲಾಶಯಗಳು ತುಂಬುತ್ತಿರೋದ್ರಿಂದ ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರದಾಡಿದ್ದ ಜನರಿಗೆ ಕುಡಿಯೋ ನೀರಿನ ವ್ಯವಸ್ಥೆಗೆ ದಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ