/newsfirstlive-kannada/media/post_attachments/wp-content/uploads/2024/11/KL-Rahul-Test-Batting.jpg)
ಬರೋಬ್ಬರಿ 24 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿತ್ತು. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿತ್ತು. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು.
ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನ್ಯೂಜಿಲೆಂಡ್​​ ಟೆಸ್ಟ್​ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ 25 ರನ್​ಗಳಿಂದ ಸೋತಿತ್ತು. ನ್ಯೂಜಿಲೆಂಡ್​ ನೀಡಿದ 147 ರನ್​​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 29.1 ಓವರ್​​ಗಳಲ್ಲಿ ಕೇವಲ 121 ರನ್​​ಗಳಿಗೆ ಆಲೌಟ್​​ ಆಗಿ ಸೋತಿರುವುದು ಭಾರೀ ಮುಖಭಂಗವಾಗಿತ್ತು.
ಟೀಮ್​ ಇಂಡಿಯಾಗೆ ಕೈ ಕೊಟ್ಟಿದ್ದ ಸರ್ಫರಾಜ್​ ಖಾನ್​​
ಭಾರತ ತಂಡದ ಬ್ಯಾಟರ್​​ಗಳು ನ್ಯೂಜಿಲೆಂಡ್​​ ಬೌಲರ್​​​ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು. ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್​​ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್​​ ಸಿಡಿಸಿ ಭಾರೀ ಸದ್ದು ಮಾಡಿದ್ದ ಸರ್ಫರಾಜ್​ ಖಾನ್​ ಟೀಮ್​ ಇಂಡಿಯಾಗೆ ಕೈ ಕೊಟ್ಟರು. ಕೊನೆಯ ಟೆಸ್ಟ್​ ಪಂದ್ಯದಲ್ಲಿ ಸರ್ಫರಾಜ್​ ಖಾನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ರು. ಕಳೆದ ಮೂರು ಇನ್ನಿಂಗ್ಸ್​ನಲ್ಲಿ ಸರ್ಫರಾಜ್​ ಖಾನ್​ 11(24), 9(15), 0(4) ಗಳಿಸೋ ಮೂಲಕ ಕಳಪೆ ಪ್ರದರ್ಶನ ನೀಡಿದ್ರು.
ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದಕ್ಕೆ ಕೆ.ಎಲ್​ ರಾಹುಲ್​ ಅವರನ್ನು 2 ಪಂದ್ಯಗಳಿಂದ ಬೆಂಚ್​​ ಕಾಯಿಸಲಾಗಿತ್ತು. ಇವರ ಬದಲಿಗೆ ಸರ್ಫರಾಜ್​ ಖಾನ್​ ಅವರಿಗೆ ಅವಕಾಶ ನೀಡಲಾಗಿತ್ತು. ಸರ್ಫರಾಜ್​ ಖಾನ್​ ಸಂಪೂರ್ಣ ಬ್ಯಾಟಿಂಗ್​ನಲ್ಲಿ ವೈಫಲ್ಯರಾಗಿದ್ದು, ಕೆ.ಎಲ್​ ರಾಹುಲ್​​ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್​ ತಂಡ ತಪ್ಪು ಮಾಡಿದ್ಯಾ? ಅನ್ನೋ ಪ್ರಶ್ನೆಗಳು ಕೇಳಿ ಬಂದಿದ್ದವು.
ಕೆ.ಎಲ್​ ರಾಹುಲ್​ಗೆ ಸುವರ್ಣಾವಕಾಶ
ನವೆಂಬರ್ 22ನೇ ತಾರೀಕಿನಿಂದಲೇ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಶುರುವಾಗಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಸರ್ಫರಾಜ್​ ಖಾನ್​ ಬದಲಿಗೆ ರಾಹುಲ್​​ ಅವರಿಗೆ ಮೊದಲ ಟೆಸ್ಟ್​ನಲ್ಲಿ ಅವಕಾಶ ನೀಡಲಾಗಿತ್ತು. ಮೊದಲ ಇನ್ನಿಂಗ್ಸ್​​ನಲ್ಲಿ 24 ರನ್​​ ಸಿಡಿಸಿದ್ದ ರಾಹುಲ್​​ 2ನೇ ಇನ್ನಿಂಗ್ಸ್​ನಲ್ಲಿ 77 ರನ್​ ಚಚ್ಚಿ ತಂಡಕ್ಕೆ ನೆರವಾದ್ರು. ಈ ಮೂಲಕ ಟೀಮ್​ ಇಂಡಿಯಾ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈಗ ಕೆ.ಎಲ್​ ರಾಹುಲ್​ಗೆ ಮತ್ತೆ ಸುವರ್ಣಾವಕಾಶ ಸಿಕ್ಕಿದೆ.
ಓಪನರ್​ ಆಗಿ ರಾಹುಲ್​ ಮುಂದುವರಿಕೆ
ರೋಹಿತ್​ ಶರ್ಮಾ ತಂಡ ಸೇರಿಕೊಂಡಿದ್ರೂ ಟೀಮ್​ ಇಂಡಿಯಾ ಪರ 2ನೇ ಟೆಸ್ಟ್​ ಪಂದ್ಯದಲ್ಲಿ ಕೆ.ಎಲ್​ ರಾಹುಲ್​​ ಓಪನರ್​ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ. ಯಶಸ್ವಿ ಜೈಸ್ವಾಲ್​​, ರಾಹುಲ್​ ಓಪನಿಂಗ್​​ ಪೇರ್​​​ ವರ್ಕೌಟ್​ ಆಗಿದ್ದು, ರೋಹಿತ್​ ಶರ್ಮಾ ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us