ಮಂಡ್ಯ ರೈತರಿಗೆ ಸಿಹಿ ಸುದ್ದಿ.. KRS ಡ್ಯಾಂಗೆ ಇಂದು ಒಳಹರಿವು ಭಾರೀ ಹೆಚ್ಚಳ; ಭರ್ತಿಯಾಗಲು ಇನ್ನೆಷ್ಟು ಬಾಕಿ?

author-image
admin
Updated On
ದಿನದಿಂದ ದಿನಕ್ಕೆ ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ಎಷ್ಟಿದೆ ಗೊತ್ತಾ ನೀರಿನ ಮಟ್ಟ?
Advertisment
  • ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಧಾರಾಕಾರ ಮಳೆ
  • ಕೃಷ್ಣರಾಜ ಅಣೆಕಟ್ಟೆ ಭರ್ತಿಯಾಗುವ ಶುಭ ಕಾಲ ಹತ್ತಿರವಾಗುತ್ತಿದೆ
  • ಕಾವೇರಿ ನದಿಗೆ 1 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾರ್ಭಟ ಜೋರಾಗಿದೆ. ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಕೃಷ್ಣರಾಜ ಅಣೆಕಟ್ಟೆ ಭರ್ತಿಯಾಗುವ ಶುಭ ಕಾಲ ಹತ್ತಿರವಾಗುತ್ತಿದೆ.

publive-image

ಕೆಆರ್‌ಎಸ್ ಡ್ಯಾಂಗೆ ಇಂದಿನ ಒಳ ಹರಿವು 46,165 ಕ್ಯೂಸೆಕ್ ನೀರು ಇದ್ರೆ ಹೊರ ಹರಿವು 2,732 ಕ್ಯೂಸೆಕ್ ಇದೆ. ಮುಂಜಾಗೃತ ಕ್ರಮವಾಗಿ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಪ್ರವಾಸ ಪ್ರಿಯರೇ, ದಯವಿಟ್ಟು ಗಮನಿಸಿ: ಕೆಲವು ದಿನ ಈ ಕ್ಷೇತ್ರಗಳತ್ತ ಪ್ರವಾಸ ಹೋಗಬೇಡಿ; ತಪ್ಪದೇ ಸ್ಟೋರಿ ಓದಿ! 

ಇಂದು ಶುಕ್ರವಾರ ಆಗಿದ್ದರಿಂದ ಪೂಜೆ ಸಲ್ಲಿಸಿ ಸಾಂಪ್ರದಾಯಕವಾಗಿ ನೀರು ಬಿಡುಗಡೆ ಮಾಡಲಾಗಿದೆ. ನಾಳೆಯಿಂದ ಕಾವೇರಿ ನದಿಗೆ 1 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಾಳೆ ನದಿಗೆ ಮತ್ತಷ್ಟು ನೀರು ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಗುಡ್​​ನ್ಯೂಸ್.. ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ.. 

ಇಂದಿನ KRS ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ - 118.10 ಅಡಿ
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 40.688 ಟಿಎಂಸಿ
ಒಳ ಹರಿವು - 46,165 ಕ್ಯೂಸೆಕ್
ಹೊರ ಹರಿವು - 2,732 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment