/newsfirstlive-kannada/media/post_attachments/wp-content/uploads/2024/07/MS-DHONI.jpg)
ಚೆನ್ನೈ: ಧೋನಿ ಅಭಿಮಾನಿಗಳಿಗೆ ಬಿಸಿಸಿಐ ದೊಡ್ಡ ಸಂತಸದ ಸುದ್ದಿಯನ್ನು ನೀಡಲು ಹೊರಟಿದೆ. ಹಳೆಯ ನಿಯಮವೊಂದನ್ನು ಮತ್ತೆ ಜಾರಿಗೆ ತಂದು ಆ ಮೂಲಕ ಮರಳಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ಚೆನ್ನೈನಲ್ಲಿ ಆಡಿಸುವ ಸಾಧ್ಯತೆಗೆ ವೇದಿಕೆ ರಚನೆ ಮಾಡುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ವಿದಾಯ ಹೇಳಿದ ಆಟಗಾರರನ್ನು ಅನ್​ ಕ್ಯಾಪ್ಡ್​ ವಿಭಾಗದಲ್ಲಿ ಆಡಿಸುವ ಒಂದು ನಿಯಮ ಈ ಹಿಂದೆ ಜಾರಿಯಲ್ಲಿತ್ತು. 2021ರಲ್ಲಿ ಆ ನಿಯಮವನ್ನು ಯಾರು ಅಳವಡಿಸಿಕೊಳ್ಳದ ಕಾರಣ ಅದನ್ನು ರದ್ದು ಮಾಡಲಾಗಿತ್ತು. ಮುಂದಿನ ಐಪಿಎಲ್​​ನಲ್ಲಿ ಮರಳಿ ಆ ನಿಯಮವನ್ನು ತರುವ ಬಗ್ಗೆ ಐಪಿಎಲ್ ಫ್ರ್ಯಾಂಚೈಸಿಗಳು ಚರ್ಚೆ ಮಾಡಿದ್ದಾರೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ ಈ ನಿಯಮ ಮರಳಿ ಅಳವಡಿಸುವಂತೆ ಹೆಚ್ಚು ಒತ್ತಡ ಹಾಕಿದೆ.
ಚೆನ್ನೈ ಸೂಪರ್​ಕಿಂಗ್ಸ್​ನ ಈ ನಡೆಯಿಂದ ಒಂದಂತೂ ಸ್ಪಷ್ಟವಾಗಿದೆ. ಐಪಿಎಲ್​ನಲ್ಲಿ ಚೆನ್ನೈ ಪರ ಇನ್ನಷ್ಟು ವರ್ಷ ಧೋನಿ ಆಡಲಿದ್ದಾರೆ ಅನ್ನೋದು. ಒಂದು ವೇಳೆ ಈ ಹಳೆ ನಿಯಮ ಮತ್ತೆ ಜಾರಿಯಲ್ಲಿ ಬಂದಿದ್ದೇ ಆದರೆ ಸಿಎಸ್​ಕೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ ಕ್ಯಾಪ್ಡ್ ಪ್ಲೇಯರ್ ಕೆಟಾಗರಿಯಲ್ಲಿ ಆಡಿಸಲು ಸಜ್ಜಾಗಿದೆ.
ಕಳೆದ ತಿಂಗಳು ಈ ಹಳೆಯ ನಿಯಮ ವಾಪಸ್ ಜಾರಿಗೆ ತರುವಂತೆಯೇ ಹೆಚ್ಚು ಚರ್ಚೆಗಳು ಫ್ರಾಂಚೈಸಿಗಳ ನಡುವೆ ನಡೆದಿದೆ. ಹಳೆಯ ನಿಯಮದ ಪ್ರಕಾರ ಅನ್​ ಕ್ಯಾಪ್ಡ್​ ಆಟಗಾರರಿಗೆ ಫ್ರಾಂಚೈಸಿಗಳು ಕೇವಲ 4 ಕೋಟಿ ರೂಪಾಯಿ ಕೊಟ್ಟು ಖರೀದಿಸಬಹುದು. ಇದು ಧೋನಿಯನ್ನು ಸಿಎಸ್​ಕೆಯಲ್ಲಿ ಆಡಿಸಲು ಫ್ರಾಂಚೈಸಿಗೆ ಮತ್ತಷ್ಟು ಸರಳವಾಗುತ್ತದೆ. ಏಕಂದರೆ, ಕಳೆದ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ಧೋನಿಯನ್ನು 12 ಕೋಟಿ ರೂಪಾಯಿ ನೀಡಿ ಮರಳಿ ಸಿಎಸ್​ಕೆಗೆ ಸೇರಿಸಿಕೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us