/newsfirstlive-kannada/media/post_attachments/wp-content/uploads/2023/11/namma-metro-1.jpg)
ಸಿಲಿಕಾನ್ ಸಿಟಿಯ ಶರವೇಗದ ಪ್ರಯಾಣಕ್ಕೆ ಬೆಂಗಳೂರಿಗರು ಫಿದಾ ಆಗಿದ್ದಾರೆ. ಇದಕ್ಕೆ ಸಾಕ್ಷಿನೇ ಮೆಟ್ರೋ ಸಂಚಾರ ದಾಖಲೆ ಬರೆಯುತ್ತಿರೋದು. ಯಾವಾಗ ಆದಾಯ ಉತ್ತಂಗಕ್ಕೆ ಏರ್ತೋ BMRCL ಕೂಡ ಹೊಸ ಪ್ಲ್ಯಾನ್ ಒಂದನ್ನ ಮಾಡ್ಕೊಂಡಿದೆ.
ಇದನ್ನೂ ಓದಿ:ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ
ಟ್ರಾಫಿಕ್ ಏಟಿನಿಂದ ಸುಸ್ತಾಗಿರುವ ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ಅಂದ್ರೇ ಬೆಸ್ಟ್ ಸಂಗಾತಿ. ಇದೇ ಕಾರಣಕ್ಕೆ ತಿಂಗಳಿಂದ ತಿಂಗಳಿಗೆ ಮೆಟ್ರೋ ಸಂಚಾರ ದಾಖಲೆ ಬರೆಯುತ್ತಿದೆ. ಈ ದಾಖಲೆಯ ಪ್ರಯಾಣದಿಂದಲೇ ಮೇ ತಿಂಗಳಲ್ಲಿ BMRCL ಬೊಕ್ಕಸಕ್ಕೆ ₹58,13,47,539 ರೂಪಾಯಿ ಹರಿದು ಬಂದಿದೆ. ಈ ನಿಟ್ಟಿನಲ್ಲಿಯೇ BMRCL ಹೊಸ ಪ್ಲ್ಯಾನ್ ಮಾಡ್ಕೊಂಡಿದ್ದು, ಇಂಟರ್ ಚೇಂಜ್ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಿದೆ.
ಹೌದು, ಮೆಜೆಸ್ಟಿಕ್ ಕೆಂಪೇಗೌಡ ಸದ್ಯ ಇರುವ ಏಕೈಕ ಇಂಟರ್ ಚೇಂಜ್ ಮೆಟ್ರೋ ಸ್ಟೇಷನ್. ನೇರಳೆ - ಹಸಿರು ಮಾರ್ಗಗಳ ನಡುವೆ ಕೊಂಡಿಯಾಗಿರುವ ಮೆಜೆಸ್ಟಿಕ್ ನಿಲ್ದಾಣದ ಮೂಲಕ ನಿತ್ಯ 50,000 ಪ್ರಯಾಣಿಕರು ಇಲ್ಲಿ ರೈಲು ಬದಲಿಸುತ್ತಾರೆ. ಹಸಿರು ಮಾರ್ಗ ಹಾಗೂ ನೇರಳೆ ಮಾರ್ಗಗಳು ಸೇರುವ ಮೆಜೆಸ್ಟಿಕ್ ನಿಲ್ದಾಣ ಸದ್ಯ ಮೆಟ್ರೋ ಹಾಟ್ ಸ್ಪಾಟ್ ಆಗಿದೆ. ಇದೇ ರೀತಿಯಲ್ಲಿ ಇಂಟರ್ ಚೇಂಜ್ ನಿಲ್ದಾಣಗಳನ್ನ ನಿರ್ಮಾಣ ಮಾಡೋ ಮೂಲಕ, ಮೆಟ್ರೋ ಮಾರ್ಗಗಳ ನಡುವೆ ತಡೆರಹಿತ ಸಂಪರ್ಕ ಒದಗಿಸುವ ಉದ್ದೇಶದಿಂದ,16 ಇಂಟರ್‌ಚೇಂಜ್ ನಿಲ್ದಾಣಗಳನ್ನು ನಿರ್ಮಿಸಲು BMRCL ಯೋಜನೆ ಮಾಡ್ಕೊಂಡಿದೆ.
ಇದನ್ನೂ ಓದಿ:ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ
ಒಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನ ಹೆಚ್ಚು ಬಳಕೆ ಮಾಡೋದರಿಂದಲೇ ನಗರದ ಟ್ರಾಫಿಕ್ ಗೆ ಬ್ರೇಕ್ ಹಾಕಲು ಸಾಧ್ಯ. ಸದ್ಯ ಮೆಟ್ರೋದತ್ತ ಜನರು ಹೆಚ್ಚು ಒಲವು ತೋರ್ತಿದ್ದು, ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು BMRCL ಆದಷ್ಟು ಬೇಗ ಇಂಟರ್ ಚೇಂಜ್ ನಿಲ್ದಾಣಗಳನ್ನ ನಿರ್ಮಾಣ ಮಾಡಲಿ ಅನ್ನೋದೆ ಪ್ರಯಾಣಿಕರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ