NEET-PG 2025 ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌.. ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

author-image
admin
Updated On
ಇನ್ಮುಂದೆ ಪರೀಕ್ಷೆಗಳಲ್ಲಿ ಅಕ್ರಮ, ಪೇಪರ್​ ಲೀಕ್ ಮಾಡಿದ್ರೆ 1 ಕೋಟಿ ರೂ ದಂಡ..! ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?
Advertisment
  • ಜೂನ್ 15ರಂದು ನಡೆಯುವ NEET-PG ಪರೀಕ್ಷೆಯಲ್ಲಿ ಬದಲಾವಣೆ
  • NEET-PG ಪರೀಕ್ಷೆ ಎರಡು ಪಾಳಿಗಳಲ್ಲಿ ನಡೆಸುವ ಅಧಿಸೂಚನೆ ರದ್ದು
  • NEET-PG ಅಭ್ಯರ್ಥಿಗಳ ಕಾನೂನು ಹೋರಾಟಕ್ಕೆ ಕೊನೆಗೂ ಜಯ

ನವದೆಹಲಿ: NEET-PG ಅಭ್ಯರ್ಥಿಗಳ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂಕೋರ್ಟ್‌ ನೀಟ್ ಪಿಜಿ ಪರೀಕ್ಷೆಯನ್ನು ಒಂದೇ ಶಿಫ್ಟ್‌ನಲ್ಲಿ ನಡೆಸಲು ಮಹತ್ವದ ಆದೇಶ ನೀಡಿದೆ.

ಈ ಬಾರಿಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) 2 ಶಿಫ್ಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅಭ್ಯರ್ಥಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನೀಟ್ ಪಿಜಿ ಪರೀಕ್ಷೆಯನ್ನು ಒಂದೇ ಶಿಫ್ಟ್‌ನಲ್ಲಿ ನಡೆಸಲು ಸುಪ್ರೀಂಕೋರ್ಟ್ ಆದೇಶಿಸಿದೆ.

publive-image

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಬಾರಿಯ NEET-PG ಪರೀಕ್ಷೆಯನ್ನು ಜೂನ್ 15 ರಂದು ನಡೆಸಲು ನಿರ್ಧರಿಸಿದೆ. ಸುಪ್ರೀಂಕೋರ್ಟ್ ಆದೇಶದಿಂದ NEET-PG 2025 ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸುವ ಅಧಿಸೂಚನೆ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಆರ್​ಸಿಬಿ ಸೆನ್ಸೇಷನಲ್ ನಾಯಕ ಜಿತೇಶ್ ಶರ್ಮಾ ಪ್ರೇಮಕತೆ ಗೊತ್ತಾ..? ಅವರ ಪತ್ನಿ ಏನು ಮಾಡ್ತಾರೆ..? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment