/newsfirstlive-kannada/media/post_attachments/wp-content/uploads/2024/05/Nokia-3201.jpg)
ವಾರೆ ವ್ಹಾ.. ಓಲ್ಡ್ ಈಸ್ ಗೋಲ್ಡ್ ಎಂಬ ಮಾತಿದೆ. ಹಳೆಯದು ಈಗ ಹೊಸತಾಗಿ ಜನ್ಮ ತಾಳಿದರೆ ಹೇಗಿರುತ್ತೆ?. ಅದರಂತೆಯೇ ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್ ಫೋನ್ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ 3210 ಇದೀಗ ಗ್ರಾಹಕರ ಗಮನ ಸೆಳೆಯಲು ಮುಂದಾಗಿದೆ.
25 ವರ್ಷಗಳ ನಂತರ
ಅಚ್ಚರಿ ಸಂಗತಿ ಎಂದರೆ 25 ವರ್ಷಗಳ ನಂತರ ನೋಕಿಯಾ 3210 ಫೋನನ್ನು ಮಾರುಕಟ್ಟೆಗೆ ಮರು ಪರಿಚಯಿಸಿದೆ. 4ಜಿ ಸಂಪರ್ಕದೊಂದಿಗೆ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಯೂಟ್ಯೂಬ್ ಶಾರ್ಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ಔಟ್ ಆಫ್ ಸ್ಟಾಕ್
ನೋಕಿಯಾ 3210 ಫೋನನ್ನು ಪರಿಚಯಿಸಿದ್ದೇ ತಡ ಸದ್ಯ ಕಂಪನಿ ‘ಔಟ್ ಆಫ್ ಸ್ಟಾಕ್’ ಎಂದು ವರದಿ ಮಾಡಿದೆ. ನೋಕಿಯಾ ಅಧಿಕೃತ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಸ್ಟಾಕ್ ಖಾಲಿಯಾಗಿದೆ ಎಂದಿದೆ.
ಸ್ಟಾಕ್ ಹೆಚ್ಚಿಸಲು ನೋಕಿಯಾ ಪ್ಲಾನ್
ಸ್ಟಾಕ್ ಖಾಲಿಯಾದ ಕಾರಣ ಇನ್ನೂ ಹೆಚ್ಚು ನೋಕಿಯಾ 3210 ಫೋನ್ ಉತ್ಪಾದಿಸಲು ಕಂಪನಿ ಮುಂದಾಗಿದೆ. ಅಂದಹಾಗೆ ಈ ಬಾರಿ ಇದನ್ನು ಮೂರು ಬಣ್ಣದಲ್ಲಿ (ಕಪ್ಪು, ನೀಲಿ, ಚಿನ್ನದ ಬಣ್ಣ) ಕಂಪನಿ ಪರಿಚಯಿಸಲಿದೆ.
ನೋಕಿಯಾ 3210 ವಿಶೇಷತೆ
25 ವರ್ಷಗಳ ಬಳಿಕ ರಿಲೀಸ್ ಆದ ನೋಕಿಯಾ 3210 ಫೋನ್ 4ಜಿ ಸಾಮರ್ಥ್ಯದೊಂದಿಗೆ ಬಂದಿದೆ. ಇದು 2.4 ಇಂಚಿನ QVGA ಡಿಸ್ಪ್ಲೇಯನ್ನು ಹೊಂದಿದೆ. Unisoc T107 ಪ್ರೊಸೆಸರ್ನಿಂದ ಚಾಲಿತವಾಗಿದೆ. 64MB RAM ಮತ್ತು 128MB ಸ್ಟೊರೇಜ್ನೊಂದಿಗೆ ಬಂದಿದೆ. ಮೈಕ್ರೋ ಎಸ್ಡಿ ಕಾರ್ಡ್ ಅನ್ನು 32ಜಿಬಿ ತನಕ ಕೂಡ ಬಳಸಬಹುದಾಗಿದೆ.
ಬೆಲೆ ಎಷ್ಟು?
ಅಂದಹಾಗೆಯೇ ನೋಕಿಯಾ 3210 ಫೊನ್ ಎಸ್30+ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹೊಂದಿದ್ದು, 1,450mAh ಬ್ಯಾಟರಿ ಬೆಂಬಲಿತವಾಗಿದೆ. ಇನ್ನು ಗ್ರಾಹಕರಿಗಾಗಿ ಈ ಫೋನ್ 4 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ:2025ರ ಐಪಿಎಲ್; KKR ವಿರುದ್ಧ ಬಲಿಷ್ಠ RCB ತಂಡ ಕಣಕ್ಕೆ; ಯಾರಿಗೆ ಸ್ಥಾನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ