/newsfirstlive-kannada/media/post_attachments/wp-content/uploads/2024/02/EPFO-Interest-Rate.jpg)
ಉದ್ಯೋಗಿಗಳ ಪಿಎಫ್ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಿದೆ. 2024-25ನೇ ಸಾಲಿಗೆ ಶೇ.8.25 ರಷ್ಚು ಬಡ್ಡಿದರ ನಿಗದಿಪಡಿಸಿದೆ.
ಉದ್ಯೋಗಿಗಳ ಪಿಎಫ್ ಖಾತೆಗೆ ವಾರ್ಷಿಕ ಬಡ್ಡಿ ಮೊತ್ತ ಪಾವತಿಸಲು ಸೂಚನೆ ನೀಡಿದೆ. ಸದ್ಯ ದೇಶದಲ್ಲಿ 7 ಕೋಟಿ ಪಿಎಫ್ ಖಾತೆದಾರರಿದ್ದಾರೆ.. ಹಣಕಾಸು ಇಲಾಖೆಯ ಒಪ್ಪಿಗೆ ಮೇರೆಗೆ ಕೇಂದ್ರದ ಕಾರ್ಮಿಕ ಇಲಾಖೆ ಬಡ್ಡಿದರ ನಿಗದಿಯ ಬಗ್ಗೆ ಇಪಿಎಫ್‌ಓಗೆ ಸೂಚನೆ ನೀಡಿದೆ..
ಫೆಬ್ರವರಿಯ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಆಗಿದೆ. ಈ ತೀರ್ಮಾನವನ್ನು ಕೇಂದ್ರದ ಹಣಕಾಸು ಇಲಾಖೆಯ ಒಪ್ಪಿಗೆಗೆ ರವಾನಿಸಲಾಗಿತ್ತು. ಸದ್ಯ ಈಗ ಈ ತೀರ್ಮಾನಕ್ಕೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: 150 ವರ್ಷ ಇತಿಹಾಸದ ಮರ ನೆನಪು ಮಾತ್ರ.. ಬೆಂಗಳೂರಿನ ಸಸ್ಯಕಾಶಿಯಲ್ಲಿ ಗಿಡ, ಮರಗಳ ಮೂಕ ರೋಧನ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ