ರಾಮಾಚಾರಿ ಸೀರಿಯಲ್​ ವೀಕ್ಷಕರಿ​ಗೆ​ ಗುಡ್​ನ್ಯೂಸ್; ಸದ್ಯದಲ್ಲೇ ಮರಿ ರಾಮಾಚಾರಿ ಆಗಮನ!

author-image
Veena Gangani
Updated On
ರಾಮಾಚಾರಿ ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯ ಹಂತದಲ್ಲಿದೆ ಟಾಪ್​ ಸೀರಿಯಲ್​..!
Advertisment
  • ಕಥೆಯಲ್ಲಿ ಹೊಸ ತಿರುವು ಪಡೆದುಕೊಂಡ ರಾಮಾಚಾರಿ ಸೀರಿಯಲ್​
  • ರಾಮಾಚಾರಿ ವೀಕ್ಷಕರಿಗೆ ಗುಡ್​ನ್ಯೂಸ್​ ಕೊಟ್ಟ ಸೀರಿಯಲ್ ನಿರ್ದೇಶಕರು
  • ಸದ್ಯದಲ್ಲೇ ಚಾರು ಮನೆಗೆ ಕ್ಯೂಟ್​ ಆಗಿರೋ ಮರಿ ರಾಮಾಚಾರಿ ಆಗಮನ!

ಕನ್ನಡ ಕಿರುತೆರೆಯಲ್ಲೇ ರಾಮಾಚಾರಿ ಸೀರಿಯಲ್​ ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದ ಸೀರಿಯಲ್​ನಲ್ಲಿ ಟ್ವಿಸ್ಟ್​ವೊಂದು ಎದುರಾಗಿದೆ.

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್

publive-image

ಹೌದು, ಧಾರಾವಾಹಿ ಮುಕ್ತಾಯವಾಗುತ್ತಾ ಅನ್ನೋ ಡೌಟ್​ನಲ್ಲಿದ್ದ ವೀಕ್ಷಕರಿಗೆ ನಿರ್ದೇಶಕರು ಸರ್​ಪ್ರೈಸ್​ ಕೊಟ್ಟಿದ್ದಾರೆ. ಅದೇನೆಂದರೆ ರಾಮಾಚಾರಿ ಪತ್ನಿ ಅಂದ್ರೆ ಚಾರುಲತಾ ಗುಡ್​ನ್ಯೂಸ್​​ ಕೊಟ್ಟಿದ್ದಾಳೆ. ಹೀಗಾಗಿ ಸದ್ಯದಲ್ಲೇ ಚಾರು ಮನೆಗೆ ಮರಿ ರಾಮಾಚಾರಿ ಆಗಮನ ಆಗಲಿದೆ.

publive-image

ಇನ್ನೂ, ಚಾರು ಮನೆಯಿಂದ ಆಚೆ ಬಂದು ಒಂದೇ ಸಮಾ ವಾಂತಿ ಮಾಡುತ್ತಿದ್ದಳು. ಇದನ್ನೂ ನೋಡಿದ ಅತ್ತೆ, ಚಾರುಗೆ ಏನಾಯ್ತು ಅಂತ ಕೇಳಿದ್ದಾರೆ. ಆಗ ಚಾರು ನನಗೆ ಬೆಳಗ್ಗೆಯಿಂದ ಹೊಟ್ಟೆ ತೊಳಿಸೋ ತರ ಆಗ್ತಾ ಇತ್ತು, ತಲೆ ಸುತ್ತೋ ತರ ಕೂಡ ಆಗಿದೆ ಅಂತ ಹೇಳಿದ್ದಾಳೆ. ಆಗ ಅನುಮಾನಗೊಂಡ ಅತ್ತೆ ಚಾರು ಕೈ ಹಿಡಿದು ನೋಡಿ, ಇದು ಮಸಾಲೆಯಿಂದ ಬಂದಿರೋ ವಾಂತಿ ಅಲ್ಲಮ್ಮ.. ನಾನು ಅಜ್ಜಿ ಆಗ್ತಾ ಇದ್ದೀನಿ ಅಂತ ಹೇಳಿದ್ದಾರೆ. ಆದ್ರೆ ಈ ವಿಚಾರ ಚಾರುಗೆ ಅರ್ಥನೇ  ಆಗಲ್ಲ. ನೀವು ಅಜ್ಜಿ ಆದ್ರೆ ನನಗೆ ಏಕೆ ವಾಂತಿ ಬರುತ್ತೆ ಅಂತ ಹೇಳಿಬಿಟ್ಟಿದ್ದಾಳೆ. ಆಗ ತಿಳಿಸಿ ಹೇಳಿದ ಅತ್ತೆ ಚಾರು ನೀನು ಅಮ್ಮಾ ಆಗ್ತಾ ಇದ್ದೀಯ ಅಂತ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಇದೇ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಚಾರು ಫುಲ್​ ಖುಷಿಪಟ್ಟಿದ್ದಾಳೆ. ಮುಂದಿನ ಸಂಚಿಕೆಯಲ್ಲಿ ಚಾರು ರಾಮಾಚಾರಿಗೆ ಹೇಳುತ್ತಾಳಾ? ಚಾರು ಮಾತಿಗೆ ರಾಮಾಚಾರಿ ಹೇಗೆ ರಿಯಾಕ್ಟ್ ಮಾಡ್ತಾನೆ ಅಂತ ಗೊತ್ತಾಗಲಿದೆ.

ಸದ್ಯ ರಾಮಾಚಾರಿ ಕಥೆಯಲ್ಲಿ ರಾಮಾಚಾರಿಯನ್ನ ಪ್ರೀತಿಸುತ್ತಿದ್ದ ಸೀತಾಲಕ್ಷ್ಮೀ ಹಾಗೂ ಚಾರುಲತಾ ನುಡವೆ ಜಿದ್ದಾಜಿದ್ದಿ ಶುರುವಾಗಿದೆ. ಪೊರಕೆ ಹಿಡಿದು ಏಕಾಏಕಿ ಸೀತಾಲಕ್ಷ್ಮೀ ಮನೆಗೆ ಚಾರುಲತಾ ನುಗ್ಗಿ ರಾಮಾಚಾರಿ ನನ್ನ ಗಂಡ ಅಂತ ಎದೆತಟ್ಟಿಕೊಂಡು ಹೇಳಿದ್ದಳು. ರಾಮಾಚಾರಿ ತಂಟೆಗಾಗಲಿ, ನನ್ನ ತಂಟೆಗಾಗಲಿ ಇನ್ಮುಂದೆ ಬಂದರೆ ಇದೇ ಪೊರಕೆಯಲ್ಲಿ ನಿನ್ನ ಚರ್ಮ ಸುಲಿದುಬಿಡ್ತೀನಿ ಅಂತ ವಾರ್ನಿಂಗ್​ ಕೂಡ ಕೊಟ್ಟಿದ್ದಳು. ಜೊತೆಗೆ ರಾಮಾಚಾರಿ ಹಾಗೂ ಸೀತಾಲಕ್ಷ್ಮೀ ಜೊತೆಗಿರುವ ಫೋಟೋಗಳನ್ನ ಪೀಸ್ ಪೀಸ್‌ ಮಾಡಿ ಬೆಂಕಿ ಹಚ್ಚಿದ್ದಳು ಚಾರುಲತಾ. ಇಷ್ಟಾದ್ಮೇಲೂ ಸೀತಾಲಕ್ಷ್ಮೀ ರಾಮಾಚಾರಿನೇ ನನ್ನ ಗಂಡ ಆಗಬೇಕು ಅಂತ ಹಠ ಹಿಡಿದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment