6,6,6,6,6,6; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ RCB ಸ್ಫೋಟಕ ಬ್ಯಾಟರ್​​ ರಜತ್ ಪಾಟಿದಾರ್​

author-image
Ganesh Nachikethu
Updated On
6,6,6,6,6,6; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ RCB ಸ್ಫೋಟಕ ಬ್ಯಾಟರ್​​ ರಜತ್ ಪಾಟಿದಾರ್​
Advertisment
  • ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿ!
  • ಸೆಮಿಫೈನಲ್​ನಲ್ಲಿ ದೆಹಲಿ ವಿರುದ್ಧ ಗೆದ್ದ ಮಧ್ಯಪ್ರದೇಶ
  • ಆರ್​ಸಿಬಿ ಸ್ಟಾರ್​ ಬ್ಯಾಟರ್​​ ರಜತ್​ ಪಾಟಿದಾರ್​ ಅಬ್ಬರ

ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ದೆಹಲಿ ತಂಡದ ವಿರುದ್ಧ ಮಧ್ಯಪ್ರದೇಶ ಗೆದ್ದು ಬೀಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ರಜತ್​ ಪಾಟಿದಾರ್​ ಸ್ಫೋಟಕ ಬ್ಯಾಟಿಂಗ್​​ ಫಲವಾಗಿ 7 ವಿಕೆಟ್​​ಗಳಿಂದ ಗೆಲುವು ಸಾಧಿಸಿರೋ ಮಧ್ಯಪ್ರದೇಶ ಫೈನಲ್ಸ್​​ಗೆ ಎಂಟ್ರಿ ನೀಡಿದೆ.

ಇನ್ನು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಫಸ್ಟ್​ ಬ್ಯಾಟಿಂಗ್​ ಮಾಡಿದ ದೆಹಲಿ ಟೀಮ್​​​ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 146 ರನ್‌ ಸೇರಿಸಿತು. ಈ ರನ್​ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ ಕೇವಲ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 152 ರನ್‌ ಸೇರಿಸಿ ಗೆಲುವು ಸಾಧಿಸಿದೆ.

ಕಳಪೆ ಆರಂಭ

ದೆಹಲಿ ತಂಡದ ಗುರಿ ಬೆನ್ನತ್ತಿದ ಮಧ್ಯಪ್ರದೇಶ ಕಳಪೆ ಆರಂಭ ಪಡೆದುಕೊಂಡಿತು. ಮಧ್ಯಪ್ರದೇಶದ ಪರ ಓಪನಿಂಗ್​ ಮಾಡಿದ ಅರ್ಪಿತ್ ಗೌಡ , ಸುಭ್ರಾಂಶು ಸೇನಾಪತಿ ಸಿಂಗಲ್‌ ಡಿಜಿಟ್​​ಗೆ ಔಟಾದ್ರು. ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಪ್ರದೇಶಕ್ಕೆ ಹರ್ಪ್ರಿತ್ ಸಿಂಗ್‌ ಹಾಗೂ ಆರ್‌ಸಿಬಿ ತಂಡದ ರಜತ್ ಪಾಟಿದಾರ್ ಶತಕದ ಜೊತೆಯಾಟವಾಡಿ ನೆರವಾದ್ರು. ಹರ್ಪ್ರಿತ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್‌ ಸಿಡಿಸಿದರು.

ರಜತ್​ ಪಾಟಿದಾರ್​ ಅಬ್ಬರದ ಬ್ಯಾಟಿಂಗ್​​

ಆರ್​​ಸಿಬಿಯ ಭರವಸೆಯ ಆಟಗಾರ ರಜತ್​ ಪಾಟಿದಾರ್​​ ಅವರು ದೆಹಲಿ ಬೌಲರ್​ಗಳ ಬೆಂಡೆತ್ತಿದ್ರು. ಬರೋಬ್ಬರಿ 227 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ್ರು. ತಾನು ಎದುರಿಸಿದ 29 ಎಸೆತಗಳಲ್ಲಿ ಸುಮಾರು 4 ಬೌಂಡರಿ ಮತ್ತು 6 ಸಿಕ್ಸರ್​ಗಳ ಸಮೇತ 66 ರನ್​ ಚಚ್ಚಿದ್ರು.

ಫೈನಲ್​​ನಲ್ಲಿ ಮುಂಬೈ, ಮಧ್ಯಪ್ರದೇಶ ಕಾದಾಟ

ರಜತ್​ ಪಾಟಿದಾರ್​ ನಾಯಕತ್ವದ ಮಧ್ಯಪ್ರದೇಶ ಈಗ ಫೈನಲ್​ ಪ್ರವೇಶ ಮಾಡಿದೆ. ಇಂದು ನಡೆಯಲಿರೋ ಫೈನಲ್​ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​​ ನೇತೃತ್ವದ ಮುಂಬೈ ವಿರುದ್ಧ ಮಧ್ಯಪ್ರದೇಶ ಸೆಣಸಾಡಲಿದೆ.

ಇದನ್ನೂ ಓದಿ:ರಿಷಬ್ ಪಂತ್ ಅಂದರೆ ಆಸ್ಟ್ರೇಲಿಯಾಗೆ ಭಯ.. ಅದರ ಹಿಂದಿನ ಕಾರಣ ರಿವೀಲ್..!​​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment