RCB ಅಭಿಮಾನಿಗಳಿಗೆ ಐದು ಖುಷಿಯ ವಿಚಾರಗಳು.. ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಸಖತ್ ಬೂಸ್ಟ್..!

author-image
Ganesh
Updated On
22 ರನ್​ ನೀಡಿದ ಭುವಿ.. ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಹೇಜಲ್​ವುಡ್ ತಿರುವು ಕೊಟ್ಟ ರೋಚಕತೆ ಹೇಗಿತ್ತು..?
Advertisment
  • ಕೊಹ್ಲಿ ಕನ್ಸಿಸ್ಟೆಂಟ್ ರನ್​​ ಸ್ಕೋರಿಂಗ್, ಆರ್​ಸಿಬಿಗೆ ಬಲ
  • ಹೇಜಲ್​ವುಡ್ ​ಬ್ಯಾಕ್, ಬೌಲಿಂಗ್​ ಅಟ್ಯಾಕ್​​ಗೆ ಜೋಷ್ ​​​
  • ಹೊಸ ರೋಲ್​ನಲ್ಲಿ ಜಿತೇಶ್ ಶರ್ಮಾ ಸೂಪರ್​ಹಿಟ್

ಕ್ವಾಲಿಫೈಯರ್-1ಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಗುಡ್​​ನ್ಯೂಸ್ ಸಿಕ್ಕಿದೆ. ಗಾಯಗೊಂಡ ಪ್ರಮುಖ ಆಟಗಾರರು ಮಹತ್ವದ ಪಂದ್ಯಕ್ಕೂ ಮುನ್ನ ಫಿಟ್ ಅಂಡ್ ಫೈನ್ ಆಗಿದ್ದಾರೆ. ತಂಡಕ್ಕೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಫಾರ್ಮ್​​​ ಕಳೆದುಕೊಂಡಿದ್ದ ಆಟಗಾರರು ಫಾರ್ಮ್​ಗೆ ಮರಳಿದ್ದಾರೆ. ಆರ್​ಸಿಬಿ ತಂಡವನ್ನ ಫೈನಲ್​ಗೇರಿಸಲು ಕಾತರದಿಂದ ಕಾಯ್ತಿದ್ದಾರೆ.

ಐಪಿಎಲ್ ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಫಾಮೆನ್ಸ್​ಗೆ, ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. ಹೋಂ ಗ್ರೌಂಡ್​​ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ, ಮೂರು ಪಂದ್ಯಗಳಲ್ಲಿ ಸೋಲು ಅಭವಿಸಿದೆ. ಆದ್ರೆ AWAY ಮ್ಯಾಚ್​ಗಳಲ್ಲಿ ಬೆಂಗಳೂರು ತಂಡ, ಆಡಿರೋ 8 ಪಂದ್ಯಗಳಲ್ಲಿ 7ರಲ್ಲಿ ಗೆಲುವು ದಾಖಲಿಸಿದೆ. ಈ 7 ಗೆಲುವೇ, ಚಾಲೆಂಜರ್ಸ್​ ತಂಡದ ಪ್ಲೇ ಆಫ್ ಎಂಟ್ರಿಗೆ ಕಾರಣ. ಆಟಗಾರರ ಸಾಂಘಿಕ ಪ್ರದರ್ಶನ ಆರ್​ಸಿಬಿ ತಂಡವನ್ನ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಿಸಿದೆ.

ಕೊಹ್ಲಿ ಕನ್ಸಿಸ್ಟೆಂಟ್ ರನ್​​ ಸ್ಕೋರಿಂಗ್, ಆರ್​ಸಿಬಿಗೆ ಬಲ

ವಿರಾಟ್ ಕೊಹ್ಲಿಯನ್ನ ಕಿಂಗ್ ಕೊಹ್ಲಿ ಅನ್ನೋದು ಇದೇ ಕಾರಣಕ್ಕೆ. ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ನಡೆಸಿರುವ ಕೊಹ್ಲಿ ಪ್ರತಿ ಪಂದ್ಯದಲ್ಲೂ ರನ್​ ಕಾಣಿಕೆ ನೀಡುತ್ತಿದ್ದಾರೆ. ಈಗಾಗಲೇ 600ಕ್ಕಿಂತ ಹೆಚ್ಚು ರನ್​​ಗಳಿಸಿರುವ ಕೊಹ್ಲಿ 8 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಟಾಪ್ ಆರ್ಡರ್​​ನಲ್ಲಿ ವಿರಾಟ್, ಟಾಪ್ ಕ್ವಾಲಿಟಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: publive-imageRCB vs PBKS; ಮಳೆ ಬಂದು ಪಂದ್ಯ ವಾಶ್​ಔಟ್​ ಆದರೆ ನೇರ ಫೈನಲ್​ಗೆ ಹೋಗೋದು ಯಾರು..?

ಹೇಜಲ್​ವುಡ್ ಕಮ್​ಬ್ಯಾಕ್

ಶೋಲ್ಡರ್ ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಅನುಭವಿ ವೇಗಿ ಜೋಷ್ ಹೇಜಲ್​ವುಡ್, ಇಂದು ಕಣಕ್ಕಿಳಿಯೋದು ಬಹುತೇಕ ಖಚಿತ. ಹೇಜಲ್​ವುಡ್ ಎಂಟ್ರಿಯಿಂದ ತಂಡದ ಬೌಲಿಂಗ್ ಅಟ್ಯಾಕ್​ ಬಲ ಹೆಚ್ಚಿದೆ. ಈಗಾಗಲೇ ಟೂರ್ನಿಯಲ್ಲಿ 18 ವಿಕೆಟ್​ಗಳನ್ನ ಪಡೆದಿರೋ ಜೋಷ್, AWAY ಮ್ಯಾಚ್​ಗಳಲ್ಲಿ ಆರ್​ಸಿಬಿಯ ಟ್ರಂಪ್ ಕಾರ್ಡ್ ಬೌಲರ್​. ಹೇಜಲ್​ವುಡ್ ತಂಡದಲ್ಲಿದ್ರೆ ಕ್ಯಾಪ್ಟನ್​​​ ಟೆನ್ಶನ್ ಫ್ರೀ ಆಗಿರ್ತಾರೆ.

ಆಪತ್ಬಾಂಧವ ಟಿಮ್ ಫಿಟ್ ಌಂಡ್ ಫೈನ್

ಹ್ಯಾಮ್​ಸ್ಟ್ರಿಂಗ್ ಇಂಜುರಿಯಿಂದ ಲಕ್ನೋ ವಿರುದ್ಧದ ಪಂದ್ಯವನ್ನ ಮಿಸ್ ಮಾಡಿಕೊಂಡಿದ್ದ ಪವರ್​ಹಿಟ್ಟರ್ ಟಿಮ್ ಡೇವಿಡ್, ಕ್ವಾಲಿಫೈಯರ್-1 ಆಡಲಿದ್ದಾರೆ. ಟಿಮ್ ಡೇವಿಡ್​​​​​​​​​​​​ ಆಗಮನ, ಆರ್​ಸಿಬಿ ಕೆಳಕ್ರಮಾಂಕದ ಬ್ಯಾಟಿಂಗ್​​​ಗೆ ಶಕ್ತಿ ಬಂದಂತಾಗಿದೆ. ಈಗಾಗಲೇ ಸಾಕಷ್ಟು ಪಂದ್ಯಗಳಲ್ಲಿ ಗೇಮ್​ಚೇಂಜರ್ ಇನ್ನಿಂಗ್ಸ್ ಆಡಿರುವ ಆಸಿಸ್ ಬ್ಯಾಟ್ಸ್​ಮನ್​, ಆರ್​ಸಿಬಿಯ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಈ ಆಪತ್ಬಾಂಧವನ ಬ್ಯಾಟ್​​ನಿಂದ, ಉಳಿದ ಪಂದ್ಯಗಳಲ್ಲೂ ರನ್​​ ನಿರೀಕ್ಷಿಸಲಾಗಿದೆ.

 ಇದನ್ನೂ  ಓದಿ: RCB vs PBKS: ಇಂದು ಫೈನಲ್​​ಗೆ ಎಂಟ್ರಿ ನೀಡೋ ತಂಡ ಯಾವುದು..? ಹೇಗಿದೆ ಪಿಚ್​..?

ಹೊಸ ರೋಲ್​ನಲ್ಲಿ ಜಿತೇಶ್ ಶರ್ಮಾ ಸೂಪರ್​ಹಿಟ್​​​

ಮುಂಬೈ ಇಂಡಿಯನ್ಸ್​ ವಿರುದ್ಧ 19 ಎಸೆತಗಳಲ್ಲಿ 40 ರನ್​ಗಳಿಸಿದ್ದು ಬಿಟ್ರೆ ಹಂಗಾಮಿ ನಾಯಕ ಜಿತೇಶ್ ಶರ್ಮಾ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ರನ್​​​​​​ ಬಂದಿಲ್ಲ. ಲಕ್ನೋ ಸೂಪರ್​ಜೈಂಟ್ಸ್​​ ವಿರುದ್ಧ ಆಡಿದ ಆ ಒಂದು ಇನ್ನಿಂಗ್ಸ್​, ಜಿತೇಶ್ ವೈಫಲ್ಯವನ್ನೆಲ್ಲಾ ಮರೆಮಾಚಿಸಿದೆ. ಮಹತ್ವದ ಹಂತದಲ್ಲಿ ಫಾರ್ಮ್​​ ಕಂಡುಕೊಂಡಿರುವ ಜಿತೇಶ್​​​, ಆರ್​ಸಿಬಿಯ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.

ಪಡಿಕ್ಕಲ್​ ಸ್ಥಾನಕ್ಕೆ ಮಯಾಂಕ್ ಪರ್ಫೆಕ್ಟ್ ರೀಪ್ಲೇಸ್

ಎಡಗೈ ಬ್ಯಾಟ್ಸ್​ಮನ್​​ ದೇವದತ್ ಪಡಿಕ್ಕಲ್, ಟಾಪ್ ಆರ್ಡರ್​​ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ರನ್​ ಸ್ಕೋರ್ ಮಾಡಿದ್ರು. ಪಡಿಕ್ಕಲ್ ಇಂಜುರಿಯಿಂದ ತಂಡದಿಂದ ಹೊರನಡೆಯುತ್ತಿದ್ದಂತೆ, ಇವರ ಸ್ಥಾನ ತುಂಬೋರು ಯಾರು ಅಂತ ಆರ್​ಸಿಬಿ ಮ್ಯಾನೇಜ್ಮೆಂಟ್ ತಲೆಕೆಡಿಸಿಕೊಂಡಿತ್ತು. ಮಯಾಂಕ್ ಅಗರ್​ವಾಲ್, ಪಡಿಕ್ಕಲ್​​ಗೆ ಬೆಸ್ಟ್ ರೀಪ್ಲೇಸ್​ಮೆಂಟ್ ಅಂತ ತೋರಿಸಿಕೊಟ್ಟಿದ್ದಾರೆ. ಎಲ್​ಎಸ್​​ಜಿ ವಿರುದ್ಧ ಆಡಿದ ಇನ್ನಿಂಗ್ಸ್​, ಇದಕ್ಕೆ ಬೆಸ್ಟ್ ಎಕ್ಸಾಂಪಲ್.

ಲಕ್ನೋ ವಿರುದ್ಧದ ಗೆಲುವು ಆರ್​ಸಿಬಿಗೆ ಬಿಗ್​​ಬೂಸ್ಟ್ ಸಿಕ್ಕಂತಾಗಿದೆ. ಹೀಗಾಗಿ ಇಂದು ಪಂಜಾಬ್ ಕಿಂಗ್ಸ್​ ವಿರುದ್ಧವೂ ಗೆದ್ದು, ಡೈರೆಕ್ಟ್​ ಫೈನಲ್ ಎಂಟ್ರಿ ಕೊಡೋಕೆ ಬೆಂಗಳೂರು ತಂಡ ರೆಡಿಯಾಗಿದೆ. ​

ಇದನ್ನೂ ಓದಿ: Qualifier-1: ಬೆಂಗಳೂರು ತಂಡ ಸಂಪೂರ್ಣ ಬದಲಾಗಲಿದೆಯೇ..? RCB ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment