/newsfirstlive-kannada/media/post_attachments/wp-content/uploads/2025/04/RCB_TEAM-2.jpg)
ಸೀಸನ್-18ರಲ್ಲಿ ಆರ್ಸಿಬಿಯದ್ದೇ ಅಬ್ಬರ. ಫುಲ್ ಜೋಷ್ನಲ್ಲಿ ಸಾಲಿಡ್ ಆಟವಾಡ್ತಿರೋ ಆರ್ಸಿಬಿ ಅಭಿಮಾನಿಗಳಿಗೆ ಸಖತ್ ಎಂಟರ್ಟೈನ್ಮೆಂಟ್ ನೀಡ್ತಿದೆ. ಆರ್ಸಿಬಿ ಆಟಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ರೆ, ಎದುರಾಳಿ ತಂಡಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಅವರ ಹೋಮ್ಗ್ರೌಂಡ್ಗಳಲ್ಲೇ ಆರ್ಸಿಬಿಯನ್ನ ಎದುರಿಸೋಕೆ ಭಯಪಡ್ತಿವೆ.
ಆರ್ಸಿಬಿ ಅಜೇಯ ಓಟ..
ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಂದಾಸ್ ಆಟವಾಡ್ತಿದೆ. ದಂಡಂದಶಗುಣಂ ಎಂಬಂತೆ ಆನ್ಫೀಲ್ಡ್ನಲ್ಲಿ ಅಬ್ಬರಿಸ್ತಿರುವ ಆರ್ಸಿಬಿಗೆ ಎದುರಾಳಿ ಯಾರು? ಪಿಚ್ ಯಾವುದು? ಕಂಡೀಷನ್ಸ್ ಏನು? ಅನ್ನೋದು ಮ್ಯಾಟರ್ರೆ ಆಗ್ತಿಲ್ಲ. ರನ್ಭೂಮಿಯಲ್ಲಿ ವೀರ ಸೈನಿಕರಂತೆ ಆಟಗಾರರು ಹೋರಾಡ್ತಿದ್ದಾರೆ. ತವರಿನ ಆಚೆ ಈ ಸೀಸನ್ನಲ್ಲಿ ಆಡಿದ 6 ಪಂದ್ಯಗಳಲ್ಲೂ ಆರ್ಸಿಬಿ ಗೆದ್ದು ಬೀಗಿದೆ. ಎದುರಾಳಿಗಳ ಭದ್ರಕೋಟೆಗಳನ್ನ ಆರ್ಸಿಬಿ ಛಿದ್ರ ಛಿದ್ರ ಮಾಡ್ತಿರೋದನ್ನ ಲಾಯಲ್ ಅಭಿಮಾನಿಗಳು ಫುಲ್ ಜೋಷ್ನಲ್ಲಿ ಸಂಭ್ರಮಿಸ್ತಿದ್ದಾರೆ. ಆರ್ಸಿಬಿಯ ಅಜೇಯ ಓಟ ಎದುರಾಳಿ ಪಡೆಗಳಲ್ಲಿ ನಡುಕ ಹುಟ್ಟಿಸಿದೆ.
ಇದನ್ನೂ ಓದಿ: ಅಪ್ಪನ ಕನಸು ನನಸು.. ಸೆಂಚುರಿ ಬಾರಿಸಿದ ವೈಭವ್ ಸೂರ್ಯವಂಶಿ ಮೊದಲು ಕರೆ ಮಾಡಿದ್ದು ಯಾರಿಗೆ?
ತವರಿನಾಚೆ ಆರ್ಸಿಬಿಗೆ ಸತತ 9 ಗೆಲುವು
ಪ್ರಸಕ್ತ ಆವೃತ್ತಿಯಲ್ಲಿ ಆರ್ಸಿಬಿ ತವರಿನ ಆಚೆ ಸತತ 6 ಗೆಲುವು ದಾಖಲಿಸಿದೆ. ತವರಿನ ಹೊರಗೆ ಲೀಗ್ ಸ್ಟೇಜ್ನಲ್ಲಿ ಆರ್ಸಿಬಿ ಹೀಗೆ ಸೋಲಿಲ್ಲದ ಸರದಾರನಾಗಿ ಈ ಹಿಂದಿನ ಸೀಸನ್ನಲ್ಲೂ ಮುನ್ನುಗ್ಗಿತ್ತು. ಅದನ್ನ ಲೆಕ್ಕ ಹಾಕಿದ್ರೆ, ಲೀಗ್ಸ್ಟೇಜ್ನಲ್ಲಿ ಸತತವಾಗಿ 9 ಪಂದ್ಯ ಗೆದ್ದ ದಾಖಲೆಯನ್ನ ಆರ್ಸಿಬಿ ಬರೆದಿದೆ. ಬೇರೆ ಯಾವ ತಂಡವೂ ಈ ಸಾಧನೆ ಮಾಡಿಲ್ಲ.
ತವರಿನ ಹೊರಗೆ ಲೀಗ್ ಸ್ಟೇಜ್ನಲ್ಲಿ ಸತತ ಗೆಲುವು
2024ರ ಐಪಿಎಲ್ನ ಲೀಗ್ ಸ್ಟೇಜ್ನ ಕೊನೆಯ 3 ಅವೇ ಪಂದ್ಯಗಳಲ್ಲಿ ಗೆದ್ದಿದ್ದ ಆರ್ಸಿಬಿ ಈ ಸೀಸನ್ನಲ್ಲಿ ಸತತ 6 ಪಂದ್ಯ ಗೆದ್ದಿದೆ. ಒಟ್ಟಾರೆ 9 ಪಂದ್ಯಗಳನ್ನ ಸತತವಾಗಿ ಆರ್ಸಿಬಿ ಗೆದ್ದಿದೆ. 2012ರಲ್ಲಿ ಕೊಲ್ಕತ್ತಾ ತಂಡ ಸತತ 7 ಅವೇ ಮ್ಯಾಚ್ಗಳಲ್ಲಿ ಗೆಲುವಿನ ನಾಗಲೋಟ ನಡೆಸಿತ್ತು. ರಾಜಸ್ಥಾನ್ ರಾಯಲ್ಸ್ 2023-24ರ ಸೀಸನ್ನಲ್ಲಿ ಸತತವಾಗಿ 6 ಅವೇ ಪಂದ್ಯಗಳನ್ನು ಗೆದ್ದು ಬೀಗಿತ್ತು.
ತವರಿನ ಹೊರಗೆ ಗೆದ್ದವರಿಗೆ ಖುಲಾಯಿಸಿದೆ ಅದೃಷ್ಟ
ಅದೃಷ್ಟವೋ.. ಆಟದ ಬಲವೋ.. ಅವೇ ಮ್ಯಾಚ್ನಲ್ಲಿ ಹೀಗೆ ಸತತವಾಗಿ ಗೆಲ್ಲೋ ತಂಡಕ್ಕೆ ಫೈನಲ್ಗೆ ಎಂಟ್ರಿಯಂತೂ ಸುಲಭವಾಗುತ್ತೆ. ಈ ಹಿಂದಿನ ಸೀಸನ್ಗಳ ಆಟಗಳಲ್ಲಿ ಹೀಗೆ ಸತತವಾಗಿ ಗೆದ್ದ ತಂಡಗಳಿಗೆ ಫೈನಲ್ ಟಿಕೆಟ್ ಸುಲಭಕ್ಕೆ ಸಿಕ್ಕಿದೆ. 2012ರ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನ್ಯೂಸ್ ಫಸ್ಟ್ ಕ್ರಿಕೆಟ್ ಟೂರ್ನಿಗೆ ಅದ್ಧೂರಿ ಚಾಲನೆ; ಕಪ್ ಅನಾವರಣ!
2012 ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ ಸತತ 7 ಅವೇ ಮ್ಯಾಚ್ ಗೆದ್ದು ಬೀಗಿತ್ತು. ಈ ಸೀಸನ್ನಲ್ಲಿ ಐಪಿಎಲ್ ಫೈನಲ್ಗೂ ಎಂಟ್ರಿ ನೀಡಿದ್ದ ಗೌತಮ್ ಗಂಭೀರ್ ನಾಯಕತ್ವದ ಕೊಲ್ಕತ್ತಾ ಚಾಂಪಿಯನ್ ಆಗಿ ಮರೆದಾಡಿತ್ತು. ಕೊಲ್ಕತ್ತಾ ಮಾತ್ರವಲ್ಲ, 2022ರಲ್ಲಿ 6 ಅವೇ ಮ್ಯಾಚ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿತ್ತು. 2023ರಲ್ಲಿ ಸತತ 6 ಅವೇ ಮ್ಯಾಚ್ ಗೆದ್ದಿದ್ದ ಗುಜರಾತ್ ಟೈಟನ್ಸ್ ಕೂಡ ಫೈನಲ್ಗೆ ಸಲೀಸಾಗಿ ಲಗ್ಗೆ ಇಟ್ಟಿತ್ತು. ಆದರೆ ಕಪ್ ಗೆಲ್ಲುವಲ್ಲಿ ಎರಡೂ ತಂಡಗಳು ಎಡವಿದ್ದವು.
ಇದನ್ನೂ ಓದಿ: RCB ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡೆಲ್ಲಿಗೆ ಮುಖಭಂಗ.. ಕೋಲ್ಕತ್ತ ಪ್ಲೇ ಆಫ್ ಕನಸಿಗೆ ಜೀವ ತುಂಬಿದ ನರೈನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್