/newsfirstlive-kannada/media/post_attachments/wp-content/uploads/2024/05/KKR_SRH_RCB.jpg)
2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ 17ನೇ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಇಂಟರ್​​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ರೋಚಕ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್​​​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಸೆಣಸಾಡಲಿವೆ.
ಇನ್ನು, ಇಂದು ಗೆದ್ದ ತಂಡ ನೇರ ಫೈನಲ್​ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್​​ ಮತ್ತೆ ಕಣಕ್ಕಿಳಿಯಲಿದೆ.
ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​​ ಮತ್ತು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದವು. ಇಂದು ಫೈನಲ್​ಗಾಗಿ ಎರಡು ತಂಡಗಳು ಬಿಗ್​ ಫೈಟ್​ ಮಾಡಲಿದ್ದು, ಯಾರು ಸೋತ್ರೂ ಮತ್ತೊಂದು ಅವಕಾಶ ಇದೆ.
ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್​ಗೆ ಆಘಾತ..!
ಯೆಸ್​​, ಇಂದು ಹೈದರಾಬಾದ್​ ವಿರುದ್ಧ ಗೆದ್ದು ಫೈನಲ್​ಗೆ ಹೋಗಬೇಕು ಅಂತಿರೋ ಕೆಕೆಆರ್​ಗೆ ಶಾಕಿಂಗ್​ ನ್ಯೂಸ್​ ಇದೆ. ಕೆಕೆಆರ್ ಪರ ಸುನಿಲ್ ನರೈನ್ ಈ ವರ್ಷ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಇವರಿಗೆ ಸಾಥ್​ ನೀಡುತ್ತಿದ್ದ ಸ್ಫೋಟಕ ಆರಂಭಿಕ ಬ್ಯಾಟರ್​​​ ಕೈ ಕೊಟ್ಟಿದ್ದಾರೆ. ಕೆಕೆಆರ್ ಸುನಿಲ್ ನರೈನ್ ಅವರ ಆರಂಭಿಕ ಜೊತೆಗಾರ ಫಿಲಿಪ್ ಸಾಲ್ಟ್ ಅವರನ್ನು ಕಳೆದುಕೊಂಡಿದೆ. ಫಿಲಿಪ್​ ಸಾಲ್ಟ್​ ಅಂತಾರಾಷ್ಟ್ರೀಯ ಕರ್ತವ್ಯಕ್ಕಾಗಿ ತಮ್ಮ ತವರು ಇಂಗ್ಲೆಂಡ್‌ಗೆ ಮರಳಿದ್ದಾರೆ. ಇದು ಕೆಕೆಆರ್​ಗೆ ಆಘಾತದ ಸುದ್ದಿಯಾದ್ರೆ, ಹೈದರಾಬಾದ್​​, ಆರ್​​ಆರ್​, ಆರ್​​ಸಿಬಿಗೆ ಗುಡ್​ನ್ಯೂಸ್​ ಆಗಿದೆ. ಕಾರಣ ಕೆಕೆಆರ್​​ ಬ್ಯಾಟಿಂಗ್​​​​ ಮೇನ್​​ ಪಿಲ್ಲರ್​ ಫಿಲಿಪ್​ ಸಾಲ್ಟ್​ ಆಗಿದ್ರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us