/newsfirstlive-kannada/media/post_attachments/wp-content/uploads/2025/05/RCB-IPL-2025.jpg)
ಪ್ರತಿ ದಿನ ಸಂಜೆಯಾದ್ರೆ ಎಂಟರ್ಟೈನ್‌ಮೆಂಟ್ ಮಿಸ್ ಮಾಡಿಕೊಳ್ಳುತ್ತಾ ಇರೋ IPL ಫ್ಯಾನ್ಸ್‌ಗೆ ಇಂದು ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆ. ಮತ್ತೆ ಸಂಜೆ 7.30ಕ್ಕೆ ಸರಿಯಾಗಿ IPL ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿದೆ. ಸೀಸನ್ 18ರ ಮೇಲೆ ಅತಿ ಹೆಚ್ಚು ನಂಬಿಕೆ ಇಟ್ಟಿದ್ದ RCB ಅಭಿಮಾನಿಗಳಿಗೂ ಇಂದೇ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ.
ಭಾರತ, ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ ಐಪಿಎಲ್ ಸೀಸನ್ 18ರ ಟೂರ್ನಿಯನ್ನು ಒಂದು ವಾರಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಭಾರತ, ಪಾಕಿಸ್ತಾನದ ಮಧ್ಯೆ ಕದನ ವಿರಾಮದ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ, ಪಾಕ್ ಗಡಿಯಲ್ಲೂ ವಾತಾವರಣ ತಿಳಿಯಾಗುವ ಲಕ್ಷಣಗಳು ಕಾಣುತ್ತಿವೆ.
BCCI ಹೊಸ ದಿನಾಂಕ ಘೋಷಣೆ!
ಭಾರತ, ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ. ಆ ಸಭೆಯಲ್ಲಿ IPL 2025ಕ್ಕೆ ಹೊಸ ದಿನಾಂಕವನ್ನ ಘೋಷಣೆ ಮಾಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಬಿಸಿಸಿಐ ಐಪಿಎಲ್ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿಪಡಿಸಲು ಮುಂದಾಗಿದೆ.
ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆದಷ್ಟು ಬೇಗ ಐಪಿಎಲ್ ಕ್ರಿಕೆಟ್ ಮುಂದುವರಿಸುವ ಯೋಜನೆಯಲ್ಲಿದೆ. ಅಷ್ಟೇ ಅಲ್ಲ ಐಪಿಎಲ್‌ನ 10 ತಂಡದ ಫ್ರಾಂಚೈಸಿಗಳು ತಮ್ಮ ವಿದೇಶಿ ಆಟಗಾರರನ್ನು ಮತ್ತೆ ಅಭ್ಯಾಸದಲ್ಲಿ ಭಾಗಿಯಾಗುವಂತೆ ಸೂಚನೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಕದನ ವಿರಾಮದ ಕಳ್ಳಾಟ.. ಪಾಕ್ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ
ಐಪಿಎಲ್ ಫ್ರಾಂಚೈಸಿಗಳು ವಿದೇಶಿ ಆಟಗಾರರ ಭದ್ರತೆಯ ವಿಚಾರದಲ್ಲಿ ಆತಂಕದಲ್ಲಿದ್ದರು. ಆದರೆ ಈಗ ಮತ್ತೆ ಐಪಿಎಲ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರನ್ನು ತಂಡಕ್ಕೆ ಮರಳಿ ಸೇರಿಸಿಕೊಳ್ಳುತ್ತಿದ್ದಾರೆ. ಒಂದು ವಾರದ ಬಳಿಕ ಮತ್ತೆ ಐಪಿಎಲ್ ಪಂದ್ಯಗಳು ಆರಂಭವಾಗುವ ಸುಳಿವು ಇದರಿಂದಲೇ ಸಿಗುತ್ತಿದೆ.
RCB ಫ್ಯಾನ್ಸ್‌ಗೆ ಡಬಲ್ ಖುಷಿಯ ಸುದ್ದಿ!
ಐಪಿಎಲ್ ಸೀಸನ್ 18 ಮತ್ತೆ ಶುರುವಾದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾದಿದೆ. ಮತ್ತೆ ಐಪಿಎಲ್ ಆರಂಭವಾದರೆ ಮೊದಲ ಪಂದ್ಯವೇ RCB ಹಾಗೂ ಲಕ್ನೋ ತಂಡದ ಪಂದ್ಯವಾಗಲಿದೆ.
ಭಾರತ, ಪಾಕಿಸ್ತಾನದ ಗಡಿ ಸಂಘರ್ಷದಲ್ಲಿ ಬಿಸಿಸಿಐ ಮುಂದಿನ ಐಪಿಎಲ್ ಪಂದ್ಯಗಳನ್ನು ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ಬೆಂಗಳೂರು, ಚೆನ್ನೈ, ಹೈದರಾಬಾದ್‌ನ ಸ್ಟೇಡಿಯಂಗಳಲ್ಲಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ.
ಐಪಿಎಲ್ ಸೀಸನ್ 18ರ ಉಳಿದ ಪಂದ್ಯಗಳು ಬೆಂಗಳೂರು, ಚೆನ್ನೈ, ಹೈದರಾಬಾದ್ ಕ್ರೀಡಾಂಗಣದಲ್ಲಿ ನಿಗದಿಯಾಗುವ ಸಾಧ್ಯತೆ ಇದೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ಹೋಗಿರುವ RCB ಹೆಚ್ಚು ಪಂದ್ಯಗಳನ್ನ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಚಿಂತನೆಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ