newsfirstkannada.com

ಐಪಿಎಲ್​​ಗೆ ಮುನ್ನವೇ ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​​ ಪ್ಲೇಯರ್​​​!

Share :

Published February 10, 2024 at 4:19pm

  2024ರ ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್ 17

  ಮಾರ್ಚ್ ಕೊನೇ ವಾರದಿಂದ ಐಪಿಎಲ್​ ಟೂರ್ನಿ ಶುರು

  ಐಪಿಎಲ್​​ಗೆ ಮುನ್ನವೇ ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್ 17 ಮಾರ್ಚ್ ಕೊನೇ ವಾರದಿಂದ ಶುರುವಾಗಲಿದೆ. ಈ ಮೆಗಾ ಟೂರ್ನಿಗೆ ಈಗಿನಿಂದಲೇ ಎಲ್ಲಾ ತಂಡಗಳು ಭಾರೀ ತಯಾರಿ ನಡೆಸಿಕೊಂಡಿವೆ. ಅದೇ ರೀತಿ ಈ ಬಾರಿಯಾದ್ರೂ ಕಪ್​ ಗೆಲ್ಲಲೇಬೇಕು ಎಂದು ಆರ್​​ಸಿಬಿ ತಂಡ ಮೈದಾನಕ್ಕಿಳಿಯುತ್ತಿದೆ. ಈ ಮಧ್ಯೆ ಆರ್‌ಸಿಬಿ ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಸಿಕ್ಕಿದೆ.

ಹೌದು, ಆರ್‌ಸಿಬಿ ವೇಗದ ಬೌಲರ್ ಲಾಕಿ ಫರ್ಗುಸನ್ ತಮ್ಮ ಗೆಳತಿ ಎಮ್ಮಾ ಕೊಮೊಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕಿ ಫರ್ಗುಸನ್ ಮದುವೆ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದ್ದು, ಆರ್​​ಸಿಬಿ ಫ್ಯಾನ್ಸ್​​​ ದಂಪತಿಗೆ ಶುಭಾಶಯ ಕೋರಿದ್ದಾರೆ.

ಯಾರು ಈ ಎಮ್ಮಾ ಕೊಮೊಕಿ?

ಎಮ್ಮಾ ಕೊಮೊಕಿ ಮತ್ತು ಲಾಕಿ ಫರ್ಗುಸನ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗೆ ಫೆಬ್ರವರಿ 2ನೇ ತಾರೀಕಿನಂದು ಇಬ್ಬರು ಮದುವೆ ಆಗಿದ್ದಾರೆ. ಎಮಾ ಕೊಮೊಕಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಲಾಕಿ ಫರ್ಗುಸನ್ ಅವರನ್ನು ಆರ್​​ಸಿಬಿ ತಂಡ ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿತ್ತು. ಲಾಕಿ ಫರ್ಗುಸನ್ ಐಪಿಎಲ್‌ನಲ್ಲಿ 38 ಪಂದ್ಯಗಳನ್ನು ಆಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐಪಿಎಲ್​​ಗೆ ಮುನ್ನವೇ ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​​ ಪ್ಲೇಯರ್​​​!

https://newsfirstlive.com/wp-content/uploads/2024/02/Lockie-Ferguson.jpg

Load More