/newsfirstlive-kannada/media/post_attachments/wp-content/uploads/2024/08/RCB-4.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ ಶುರುವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಇದರ ಮಧ್ಯೆ ಎಲ್ಲಾ ಐಪಿಎಲ್​ ತಂಡಗಳು ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಯಾರನ್ನು ಕೈ ಬಿಡಬೇಕು ಎಂದು ಪ್ಲಾನ್​​ ಮಾಡಿಕೊಳ್ಳುತ್ತಿವೆ. ಆರ್​​ಸಿಬಿಗೂ ಇದೇ ಚಿಂತೆ ಕಾಡುತ್ತಿದೆ. ಇದರ ಮಧ್ಯೆ ಆರ್​​ಸಿಬಿ ತಂಡಕ್ಕೆ ಗುಡ್​ನ್ಯೂಸ್​ ಒಂದು ಸಿಕ್ಕಿದೆ.
ಐಪಿಎಲ್​ ತಂಡಗಳ ಮಾಲೀಕರು ಮೆಗಾ ಆಕ್ಷನ್​​ನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ಅದಕ್ಕಾಗಿ ಇಡೀ ವಿಶ್ವಾದ್ಯಂತ ನಡೆಯುತ್ತಿರುವ ಟಿ20 ಲೀಗ್‌ಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಯಾವ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಪರಿಶೀಲಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವು ಆರ್​​ಸಿಬಿ ಮುಖದಲ್ಲಿ ಭರವಸೆ ಮೂಡಿಸಿದೆ.
ಫಾಫ್ ನಾಯಕತ್ವದ ತಂಡ ಚಾಂಪಿಯನ್
ಈ ಬಾರಿ ಸಿಪಿಎಲ್ ಟೂರ್ನಿಯಲ್ಲಿ ಫಾಫ್​ ನಾಯಕತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ಸ್​​ ಆಗಿದೆ. ಫೈನಲ್​​ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಗೆಲ್ಲೋ ಮೂಲಕ ಕಪ್​ ಗೆದ್ದಿದೆ. ಸೇಂಟ್ ಲೂಸಿಯಾ ಕಿಂಗ್ಸ್ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಡುಪ್ಲೆಸಿಸ್​ ಅವರನ್ನು ಉಳಿಸಿಕೊಳ್ಳುತ್ತಾ ಆರ್‌ಸಿಬಿ?
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್​ಗೆ 40 ವರ್ಷ. ಇದನ್ನೇ ಕಾರಣ ನೀಡಿ ಆರ್​​ಸಿಬಿ ಕೈ ಬಿಡೋ ಯೋಚನೆ ಮಾಡಿತ್ತು. ಆದರೆ ಫಾಫ್ ಸಿಪಿಎಲ್‌ನಲ್ಲಿ ನೀಡಿದ ಪ್ರದರ್ಶನ ಆರ್‌ಸಿಬಿ ಮ್ಯಾನೇಜ್ಮೆಂಟ್ ಗಮನ ಸೆಳೆದಿದೆ. ಹಾಗಾಗಿ ಫಾಫ್​ ಅವರನ್ನೇ ಈ ಸೀಸನ್​ಗೆ ಆರ್​​ಸಿಬಿ ಉಳಿಸಿಕೊಳ್ಳೋ ಸಾಧ್ಯತೆ ಇದೆ.
ಇದನ್ನೂ ಓದಿ: ಪ್ರತಿಭಾವಂತ ವಿದ್ಯಾರ್ಥಿ ಕಾಲೇಜು ಫೀಸು ಕಟ್ಟಿದ KL ರಾಹುಲ್; ನೂರಾರು ಬಡವರಿಗೆ ನೆರವಾದ ಕನ್ನಡಿಗ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us