13 ಭರ್ಜರಿ ಸಿಕ್ಸರ್​​.. 25 ಫೋರ್​​.. ಆಕ್ಷನ್​​ಗೆ ಮುನ್ನ ಅಬ್ಬರಿಸಿದ ಆರ್​​ಸಿಬಿ ಸ್ಟಾರ್​ ಬ್ಯಾಟರ್​

author-image
Ganesh Nachikethu
Updated On
Watch: ಧೋನಿ ಎಂಟ್ರಿಗಿಂತ RCB ಫೀಲ್ಡಿಂಗ್​​ಗೇ ಹೆಚ್ಚು ‘ಸೌಂಡ್’ ಮಾಡ್ತಿದೆ.. ಏನದು..?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್
  • ಲೀಗ್ ಶುರುವಾಗಲು ಇನ್ನೇನು ಮೂರು ತಿಂಗಳು ಮಾತ್ರ ಬಾಕಿ
  • ಐಪಿಎಲ್​​ ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದೆ ಆರ್​​ಸಿಬಿ ಟೀಮ್​​​!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಶುರುವಾಗಲು ಇನ್ನೇನು ಮೂರು ತಿಂಗಳು ಮಾತ್ರ ಬಾಕಿ ಇದೆ. ಮುಂದಿನ ಸೀಸನ್​​ನಲ್ಲಿ ಹೇಗಾದ್ರೂ ಮಾಡಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್​​ ಗೆಲ್ಲೋ ನಿರೀಕ್ಷೆಯಲ್ಲಿದೆ. ಹಾಗಾಗಿ ವರ್ಷದ ಕೊನೆಗೆ ಎದುರಾಗಲಿರೋ ಮೆಗಾ ಆಕ್ಷನ್​ಗೆ ಮುನ್ನ ಆರ್​​ಸಿಬಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​​ ಗೇಟ್​ಪಾಸ್​​ ನೀಡಿದೆ. ಮೆಗಾ ಹರಾಜಿನಲ್ಲಿ ಸ್ಟಾರ್​ ಆಲ್​ರೌಂಡರ್​​ ಮಹಿಪಾಲ್​ ಲೋಮ್ರೋರ್​​ ಮೇಲೆ ಆರ್​​​ಸಿಬಿ ಆರ್​ಟಿಎಂ ಕಾರ್ಡ್​ ಬಳಸಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ಮಧ್ಯೆ ಇವ್ರು ಅಮೋಘ ಪ್ರದರ್ಶನ ನೀಡಿದ್ದಾರೆ.

publive-image

ತಂಡದಿಂದ ಕೈ ಬಿಟ್ಟ ಬೆನ್ನಲ್ಲೇ ಅಬ್ಬರ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​ ಮಹಿಪಾಲ್ ಲೊಮ್ರೋರ್. ಮುಂದಿನ ಸೀಸನ್​ಗೆ ಇವರನ್ನು ಆರ್​​​ಸಿಬಿ ರೀಟೈನ್​ ಲಿಸ್ಟ್​ನಿಂದ ಕೈ ಬಿಟ್ಟಿದೆ. ಮೆಗಾ ಆಕ್ಷನ್​​ಗೆ ಮುನ್ನವೇ ಸ್ಟಾರ್​ ಆಲ್​ರೌಂಡರ್​ ಮಹಿಪಾಲ್ ಲೊಮ್ರೋರ್ ಅಬ್ಬರಿಸಿದ್ದಾರೆ.

ಸದ್ಯ ನಡೆಯುತ್ತಿರೋ ರಣಜಿ ಟ್ರೋಫಿಯಲ್ಲಿ ರಾಜಸ್ಥಾನದ ಪರ ಆಡುತ್ತಿರೋ ಬ್ಯಾಟರ್​​ ಮಹಿಪಾಲ್ ಲೊಮ್ರೋರ್ ಅಮೋಘ ಪ್ರದರ್ಶನ ನೀಡಿದ್ರು. ಉತ್ತರಾಖಂಡ ವಿರುದ್ಧ ಆರ್​​ಸಿಬಿ ಸ್ಟಾರ್​ ಬ್ಯಾಟರ್​​ ಟ್ರಿಪಲ್​ ಸೆಂಚೂರಿ ಸಿಡಿಸಿ ಗಮನ ಸೆಳೆದ್ರು.

ಮೊದಲ ತ್ರಿಶತಕ ಸಿಡಿಸಿದ ಮಹಿಪಾಲ್​​

ಇನ್ನು, ಮಹಿಪಾಲ್ ಲೊಮ್ರೋರ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲೇ ಮೊದಲ ಟ್ರಿಪಲ್ ಸೆಂಚುರಿ ಬಾರಿಸಿದ್ರು. ಮೊದಲ 253 ಬಾಲ್​ನಲ್ಲಿ ಡಬಲ್​ ಸೆಂಚೂರಿ ಪೂರೈಸಿದ್ರು. ಬಳಿಕ ಅಗ್ರೆಸ್ಸಿವ್​ ಆಗಿ ಬ್ಯಾಟ್​ ಬೀಸಿ ಇವರು 357 ಎಸೆತಗಳಲ್ಲಿ ತ್ರಿಶತಕ ಚಚ್ಚಿದ್ರು.

ಬೌಂಡರಿಗಳ ಸುರಿಮಳೆ

ಮಹಿಪಾಲ್ ಇನ್ನಿಂಗ್ಸ್​ ಉದ್ಧಕ್ಕೂ ಎದುರಾಳಿ ಬೌಲರ್​ಗಳ ಕಾಡಿದ್ರು. ತಾನು ಎದುರಿಸಿದ 360 ಎಸೆತಗಳಲ್ಲಿ ಬರೋಬ್ಬರಿ 13 ಸಿಕ್ಸರ್ ಹಾಗೂ 25 ಫೋರ್​ಗಳು ಚಚ್ಚಿದ್ರು. ರಾಜಸ್ಥಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 660 ರನ್ ಗಳಿಸಿದೆ. ಮಹಿಪಾಲ್ ಲೊಮ್ರೋರ್ ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ 43ನೇ ಆಟಗಾರ ಎನಿಸಿಕೊಂಡರು.

ಆರ್​​ಸಿಬಿ ಬ್ಯಾಟರ್​​ ಮೇಲೆ ಬೇರೆಯವ್ರ ಕಣ್ಣು

ಮಹಿಪಾಲ್​ ಲೋಮ್ರೋರ್​ ಮೇಲೆ ಎಲ್ಲಾ ತಂಡಗಳು ಹದ್ದಿನ ಕಣ್ಣಿಟ್ಟಿವೆ. ರಣಜಿಯಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿರೋ ಇವರನ್ನು ಖರೀದಿ ಮಾಡಲು ಮುಗಿಬೀಳುವ ಸಾಧ್ಯತೆ ಇದೆ. ಇವ್ರು ಕೇವಲ ಬ್ಯಾಟಿಂಗ್​ ಮಾತ್ರವಲ್ಲ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರ.

ಇದನ್ನೂ ಓದಿ: 6,6,6,6,6,6,6,6,6,6,6,6,6; ಬರೋಬ್ಬರಿ 300 ರನ್​ ಚಚ್ಚಿದ ಟೀಮ್​ ಇಂಡಿಯಾ ಯುವ ಬ್ಯಾಟರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment