newsfirstkannada.com

ಶನಿವಾರ ಚೆನ್ನೈ, ಬೆಂಗಳೂರು ಮಧ್ಯೆ ರೋಚಕ ಪಂದ್ಯ.. ಆರ್​​ಸಿಬಿಗೆ ಗುಡ್​ನ್ಯೂಸ್​​!

Share :

Published May 16, 2024 at 8:22pm

Update May 16, 2024 at 8:25pm

  ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

  ಶನಿವಾರ ಚೆನ್ನೈ ಕಿಂಗ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ..!

  ಅಂದು ನಿಜವಾಗ್ಲೂ ಮಳೆ ಬರುತ್ತಾ? ಹವಾಮಾನ ಇಲಾಖೆ ಹೇಳೋದೇನು?

ಇಂಡಿಯನ್​ ಪ್ರೀಮಿಯರ್​ ಲೀಗ್​ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೆಕೆಆರ್​​, ರಾಜಸ್ತಾನ್​ ರಾಯಲ್ಸ್​ ಈಗಾಗಲೇ ಪ್ಲೇ ಆಫ್​ಗೆ ಹೋಗಿದ್ದು, ಉಳಿದ 2 ಸ್ಥಾನಗಳಿಗಾಗಿ ಐದು ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಮೇ 18ಕ್ಕೆ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್​ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್​​ಸಿಬಿ ತಂಡಗಳು ಎದುರು ನೋಡುತ್ತಿವೆ.

ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್​​ ಕ್ಯಾನ್ಸಲ್​ ಆದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್​​ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್​​ ಮಾತಾಡೋಕೆ ಕಾರಣ ಮಳೆ. ಅದರಲ್ಲೂ ಬೆಂಗಳೂರಲ್ಲಿ ಮುಂದಿನ 5 ದಿನ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ಮಾಹಿತಿ.

ಯೆಸ್​​, ಮೇ 18ಕ್ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ನಡೆಯಲಿರೋ ಕೊನೆ ಲೀಗ್​ ಪಂದ್ಯ ಆರ್​ಸಿಬಿ ಪ್ಲೇಆಫ್​ ಸ್ಥಾನ ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ನಡೆಯಲೇಬೇಕು ಎಂಬುದು ಫ್ಯಾನ್ಸ್​ ಆಸೆ. ರಾಜ್ಯ ಹವಾಮಾನ ಇಲಾಖೆ ಪ್ರಕಾರ ಮೇ 17-21 ರವರೆಗೂ ಅಂದರೆ ಮುಂದಿನ 5 ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯ ನಡೆಯೋ ದಿನ ಮೇ 18ಕ್ಕೆ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಮಳೆ ಬಂದರೆ ಬರಬಹುದು, ಇಲ್ಲದೆ ಹೋಗಬಹುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚೆನ್ನೈ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​ಸಿಬಿಗೆ ಬಂತು ಆನೆಬಲ; ಪ್ಲೇ ಆಫ್​ಗೆ ಹೋಗೋದು ಗ್ಯಾರಂಟಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶನಿವಾರ ಚೆನ್ನೈ, ಬೆಂಗಳೂರು ಮಧ್ಯೆ ರೋಚಕ ಪಂದ್ಯ.. ಆರ್​​ಸಿಬಿಗೆ ಗುಡ್​ನ್ಯೂಸ್​​!

https://newsfirstlive.com/wp-content/uploads/2024/05/RCB_CSK_1.jpg

Load More