ಶಿವರಾಜ್‌ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್‌.. ಹೊಸ ಫೋಟೋ ವೈರಲ್‌!

author-image
admin
Updated On
ಶಿವರಾಜ್‌ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್‌.. ಹೊಸ ಫೋಟೋ ವೈರಲ್‌!
Advertisment
  • ಕ್ಯಾನ್ಸರ್ ಫ್ರೀ ಆದ ಬಳಿಕ ನಟ ಶಿವರಾಜ್ ಕುಮಾರ್ ಪ್ರತ್ಯಕ್ಷ
  • ಅಮೆರಿಕಾದ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಈಗ ರೆಗ್ಯುಲರ್ ಚೆಕಪ್‌!
  • ತವರಿಗೆ ವಾಪಸ್ ಬರೋ ಬಗ್ಗೆ ಅಪ್ಡೇಟ್ ಕೊಟ್ಟ ಶಿವಣ್ಣ ಕುಟುಂಬ

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿ. ಅಮೆರಿಕಾದ ಮಿಯಾಮಿ ಇನ್ಸ್ಟಿಟ್ಯೂಟ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಶಿವಣ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾನ್ಸರ್ ಫ್ರೀ ಆದ ಬಳಿಕ ಶಿವರಾಜ್ ಕುಮಾರ್ ಅವರು ಸೆಲ್ಫಿ ಫೋಟೋ ಕೊಟ್ಟಿದ್ದಾರೆ. ಶಿವಣ್ಣ ಅವರ ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಖುಷಿ ಆಗಿದ್ದಾರೆ.

publive-image

ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಮೊನ್ನೆಯಷ್ಟೇ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಶಿವಣ್ಣ ಈಗ ಕ್ಯಾನ್ಸರ್ ಫ್ರೀ ಅನ್ನೋ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಶಿವರಾಜ್‌ ಕುಮಾರ್ ಅವರು ರೆಗ್ಯುಲರ್ ಚೆಕಪ್‌ಗಾಗಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕ್ಯಾನ್ಸರ್ ಫ್ರೀ ಆದ ಶಿವಣ್ಣ ಅವರ ರೆಗ್ಯುಲರ್ ಚೆಕಪ್‌ ಇನ್ನು ಕೆಲ ದಿನಗಳ ಕಾಲ ಮುಂದುವರಿಯಲಿದೆ. ಇದೇ ಜನವರಿ 24ರಂದು ಶಿವರಾಜ್ ಕುಮಾರ್ ಕುಟುಂಬ ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ಶಿವಣ್ಣ.. ಅಮೆರಿಕದಿಂದಲೇ I will back ಎಂದ ಸೆಂಚುರಿ ಸ್ಟಾರ್​ 

ಕೆಲವು ದಿನಗಳಿಂದ ನಟ ಶಿವರಾಜ್ ಕುಮಾರ್‌ ಅವರು ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ರು. ಕಳೆದ ವಾರ ಆಪರೇಷನ್‌ಗೆ ಶಿವಣ್ಣ ಕುಟುಂಬ ಅಮೆರಿಕಕ್ಕೆ ಪಯಣ ಬೆಳೆಸಿತ್ತು. ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಭಿಮಾನಿಗಳ ಆತಂಕದಲ್ಲೇ ಅಮೆರಿಕಾಕ್ಕೆ ತೆರಳಿದ್ದ ಶಿವರಾಜ್‌ ಕುಮಾರ್ ಮತ್ತೆ ತಮ್ಮ ಹಳೇ ಜೋಶ್‌ನಲ್ಲೇ ವಾಪಸ್ ಆಗಲು ರೆಡಿಯಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment