/newsfirstlive-kannada/media/post_attachments/wp-content/uploads/2024/10/TEAM-INDIA-1.jpg)
ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಮ್ ಇಂಡಿಯಾ ಆಡುತ್ತಿರೋ 5 ಪಂದ್ಯಗಳ ಟೆಸ್ಟ್ ಸರಣಿ ಇದಾಗಿದೆ. ಬ್ರಿಸ್ಟೇನ್ನಲ್ಲಿ 3ನೇ ಟೆಸ್ಟ್ ನಡೆಯುತ್ತಿದ್ದು, ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಈ ಮಧ್ಯೆ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
ಆಡಿಲೇಡ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಅದರಲ್ಲೂ ಡೇ ಅಂಡ್ ನೈಟ್ ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊಹಮ್ಮದ್ ಶಮಿ ಅನುಪಸ್ಥಿತಿ ಎದ್ದು ಕಾಡಿತ್ತು. ಹೀಗಾಗಿ ಶಮಿ ಕಮ್ಬ್ಯಾಕ್ ಯಾವಾಗ? ಎಂದು ಫ್ಯಾನ್ಸ್ ಕೇಳುತ್ತಲೇ ಇದ್ದರು. ಇದರ ನಡುವೆಯೇ ಶಮಿ ತಂಡದವೊಂದರಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಗೆ ತಂಡದಲ್ಲಿ ಸ್ಥಾನ
ಸದ್ಯ ದೇಶೀಯ ಟೂರ್ನಿಯ ಅಬ್ಬರ ಜೋರಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಶಮಿ ಪ್ರತಿನಿಧಿಸುತ್ತಿದ್ದಾರೆ. ಇದರ ಮಧ್ಯೆ ವಿಜಯ್ ಹಜಾರೆ ಟ್ರೋಫಿಗೆ ಬಂಗಾಳ ತಂಡ ಪ್ರಕಟವಾಗಿದ್ದು, ಶಮಿ ಸ್ಥಾನ ಪಡೆದಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಟೀಮ್ ಇಂಡಿಯಾ ಸೇರಲು ಶಮಿ ಫಿಟ್ನೆಸ್ ಸಾಬೀತು ಮಾಡಬೇಕು. 4ನೇ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಶಮಿ ಸ್ಥಾನ ಪಡೆಯಬಹುದು.
ಶಮಿ ಭರ್ಜರಿ ಕಮ್ಬ್ಯಾಕ್
ಕಳೆದ ವರ್ಷ ಏಕದಿನ ಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದ ಶಮಿ ಬಳಿಕ ಸರ್ಜರಿಗೆ ಒಳಗಾಗಿದ್ರು. ಅಂದಿನಿಂದ ಇಂದಿನವರೆಗೂ ಟೀಮ್ ಇಂಡಿಯಾ ಪರ ಕಣಕ್ಕಿಳಿದಿಲ್ಲ. ಸದ್ಯ ತೀವ್ರ ಗಾಯದಿಂದ ಚೇತರಿಸಿಕೊಂಡ ಶಮಿ ಮಧ್ಯಪ್ರದೇಶ ವಿರುದ್ಧ ಪಂದ್ಯದಲ್ಲಿ 7 ವಿಕೆಟ್ ತೆಗೆದು ಸುದ್ದಿಯಾಗಿದ್ರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ:6,6,4,4,4,4,4,4,4,4,4,4; ದ್ರಾವಿಡ್ ಪುತ್ರ ಅನ್ವಯ್ ಸ್ಫೋಟಕ ಶತಕ; ಬೆಚ್ಚಿಬಿದ್ದ ಕ್ರೀಡಾಲೋಕ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್