/newsfirstlive-kannada/media/post_attachments/wp-content/uploads/2025/01/TEAM_INDIA-1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಮೇ 25ನೇ ತಾರೀಕು ನಡೆಯಲಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್ ಒಂದಿದೆ.
ಟೀಮ್ ಇಂಡಿಯಾ ಆಟಗಾರರನ್ನು ತನ್ನ ಬೌಲಿಂಗ್ನಿಂದಲೇ ಕಾಡಬಲ್ಲ ಇಂಗ್ಲೆಂಡ್ ಪ್ಲೇಯರ್ ಮಾರ್ಕ್ವುಡ್. ಬಲಗೈ ವೇಗದ ಬೌಲರ್ ಆಗಿರೋ ಮಾರ್ಕ್ ವುಡ್ ಟೆಸ್ಟ್ ಸರಣಿ ಆಡುವುದು ಡೌಟ್. ಎಡ ಮೊಣಕಾಲಿಗೆ ಸರ್ಜರಿ ಆಗಿರೋ ಕಾರಣ ಇವರು 4 ತಿಂಗಳು ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಇದು ಭಾರತ ತಂಡದ ಆಟಗಾರರಿಗೆ ಪ್ಲಸ್ ಆಗಲಿದೆ.
ಅಸಲಿಗೆ ಆಗಿದ್ದೇನು?
ಮಾರ್ಕ್ ವುಡ್ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ತೀವ್ರ ಗಾಯಕ್ಕೆ ಒಳಗಾಗಿದ್ದರು. ಇವರ ಕಾಲಿಗೆ ಈಗ ಸರ್ಜರಿ ಆಗಿದ್ದು, ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಇವರು ಅಫ್ಘಾನಿಸ್ತಾನ ವಿರುದ್ಧ ಆಡುವಾಗ ಮೊಣಕಾಲಿಗೆ ಗಾಯ ಆದ ಕಾರಣ ಮೈದಾನದಿಂದ ಹೊರ ನಡೆದಿದ್ದರು.
ಏನಂದ್ರು ಮಾರ್ಕ್ವುಡ್?
ಕಳೆದ ವರ್ಷದಿಂದ ನಾನು ಎಲ್ಲಾ ಫಾರ್ಮೇಟ್ನಲ್ಲೂ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಈಗ ದೀರ್ಘ ಕಾಲ ಕ್ರಿಕೆಟ್ನಿಂದ ದೂರ ಉಳಿಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನನಗೆ ಬಹಳ ಬೇಸರ ತಂದಿದೆ. ಆದಷ್ಟು ಬೇಗ ಸಂಪೂರ್ಣ ಫಿಟ್ ಆಗಿ ಕಮ್ಬ್ಯಾಕ್ ಮಾಡುತ್ತೇನೆ ಎಂದು ಮಾರ್ಕ್ವುಡ್ ತಿಳಿಸಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಸಿಗದ ಸ್ಥಾನ; ಚಹಾಲ್ ಅವರಿಂದ ಮಹತ್ವದ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ