newsfirstkannada.com

ಪಾಕ್​​, ಭಾರತ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ; ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​!

Share :

Published May 29, 2024 at 10:41pm

Update May 29, 2024 at 10:44pm

    2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​ ಮುಕ್ತಾಯ

    ಇದೇ ಜೂನ್ 2ರಿಂದ 2024ರ ಐಸಿಸಿ ವಿಶ್ವಕಪ್ ಪಂದ್ಯಾವಳಿ ಶುರು..!

    ಪಾಕಿಸ್ತಾನ​​ ವಿರುದ್ಧ ಗೆಲ್ಲಲು ಎದುರು ನೋಡುತ್ತಿರೋ ಭಾರತ ತಂಡ

ಯುಎಸ್​​​ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ಗೆ ಕ್ಷಣಗಣನೆ ಶುರುವಾಗಲಿದೆ. ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ನಂತರ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್‌ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಭಾರೀ ತಯಾರಿ ನಡೆಸಿಕೊಂಡಿವೆ.

ಈ ಸಂಬಂಧ ಮಾತಾಡಿರೋ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್, ಈ ಹೈ-ವೋಲ್ಟೇಜ್ ಪಂದ್ಯ ನಮಗೆ ಯಾರಿಗೂ ಹೊಸದಲ್ಲ. ಈ ಹಿಂದೆ ಕೂಡ ಪಾಕ್​ ಮತ್ತು ಭಾರತದ ನಡುವೆ ಪೈಪೋಟಿ ಇತ್ತು. 2024ರ ಟಿ20 ವಿಶ್ವಕಪ್‌ನಲ್ಲಿ ಮುಂಬರುವ ಹಣಾಹಣಿಯಲ್ಲೂ ಭಾರತವೇ ಗೆಲ್ಲಲಿದೆ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. 35,000 ಪ್ರೇಕ್ಷಕರು ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ತುಂಬುವ ನಿರೀಕ್ಷೆ ಇದೆ. ಈ ಪಂದ್ಯವೂ ಬಹಳ ರೋಚಕತೆಯಿಂದ ಕೂಡಿರುತ್ತದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಂತು ಆನೆಬಲ; ಸ್ಟಾರ್​ ಪ್ಲೇಯರ್​ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್​​, ಭಾರತ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ; ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​!

https://newsfirstlive.com/wp-content/uploads/2024/05/Pak_IND.jpg

Load More