ಕನ್ನಡಿಗರಿಗೆ ಜಾಕ್​ಪಾಟ್​​; ಮಯಾಂಕ್​​​​, ಕರುಣ್​​ ನಾಯರ್​​ಗೆ ಟೀಮ್​ ಇಂಡಿಯಾದಿಂದ ಭರ್ಜರಿ ಗುಡ್​ನ್ಯೂಸ್​​

author-image
Ganesh Nachikethu
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್.. ಪ್ಲೇ ಆಫ್ ಹಂತದಲ್ಲಿ ಸ್ಟಾರ್ ಬ್ಯಾಟರ್ ಔಟ್‌; ಕಾರಣವೇನು?
Advertisment
  • ಇಂಗ್ಲೆಂಡ್​, ಟೀಮ್​ ಇಂಡಿಯಾ ಮಧ್ಯೆ ಏಕದಿನ ಸರಣಿ
  • ಟೀಮ್​ ಇಂಡಿಯಾದಿಂದ ಕನ್ನಡಿಗರಿಗೆ ಗುಡ್​ನ್ಯೂಸ್​!
  • ಕನ್ನಡಿಗ ಮಯಾಂಕ್​​, ಕರುಣ್​ ನಾಯರ್​​ಗೆ ಜಾಕ್​ಪಾಟ್​​

ಕರುಣ್​ ನಾಯರ್​, ಮಯಾಂಕ್​​ ಅಗರ್​ವಾಲ್​. ವಿಜಯ್​ ಹಜಾರೆ ಅಖಾಡದಲ್ಲಿ ಕನ್ನಡಿಗರು ಕಮಾಲ್​ ಮಾಡ್ತಿದ್ದಾರೆ. ಬೊಂಬಾಟ್​​ ಬ್ಯಾಟಿಂಗ್​ನಿಂದ ಗಮನ ಸೆಳೆದಿರೋ ಇಬ್ಬರು, ಟೀಮ್​ ಇಂಡಿಯಾ ಡೋರ್​ ತಟ್ತಿದ್ದಾರೆ. ಇವ್ರ ಆಟಕ್ಕೆ ಬಿಸಿಸಿಐ ಬಾಸ್​ಗಳು, ಸೆಲೆಕ್ಟರ್ಸ್​ ಇಂಪ್ರೆಸ್​ ಆಗಿದ್ದು, ಕನ್ನಡಿಗರ ಕಮ್​ಬ್ಯಾಕ್​ಗೆ ಮಹೂರ್ತ ಫಿಕ್ಸ್​ ಆಗಿದೆ.

ಇಂಡೋ- ಇಂಗ್ಲೆಂಡ್​ ಟಿ20 ಮಹಾಯುದ್ಧಕ್ಕೆ ಟೀಮ್​ ಇಂಡಿಯಾ ಪ್ರಕಟವಾಗಿದ್ದಾಯ್ತು. ಇದೀಗ ಏಕದಿನ ಸರಣಿಗೆ ಟೀಮ್​ ಸೆಲೆಕ್ಷನ್​ ಕಸರತ್ತು ಆರಂಭವಾಗಿದೆ. ಫೆಬ್ರವರಿ 6ರಿಂದ ಆರಂಭವಾಗೋ ಆಂಗ್ಲರ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗೆ ಕೆಲವೇ ದಿನಗಳಲ್ಲಿ ತಂಡ ಪ್ರಕಟವಾಗಲಿದ್ದು, ಕನ್ನಡಿಗನಿಗೆ ಗುಡ್​ನ್ಯೂಸ್​ ಕಾದಿದೆ.

ಕರುಣ್​ ನಾಯರ್ ಆಟಕ್ಕೆ ಸೆಲೆಕ್ಟರ್ಸ್​ ಕ್ಲೀನ್​​ಬೋಲ್ಡ್​.!

ಪ್ರಸಕ್ತ ನಡೀತಾ ಇರೋ ವಿಜಯ್​ ಹಜಾರೆ ಟೂರ್ನಿಯಲ್ಲಿ ಕನ್ನಡಿಗನ ಬ್ಯಾಟ್​ ಸಖತ್​ ಸೌಂಡ್​ ಮಾಡ್ತಿದೆ. ವಿದರ್ಭ ಪರ ಆಡ್ತಿರೋ ಕರುಣ್​ ನಾಯರ್​ ಕನ್ಸಿಸ್ಟೆಂಟ್​ ಆಟ ನೋಡಿ ಎಲ್ರೂ ಶಾಕ್​ ಆಗಿದ್ದಾರೆ. ಜಮ್ಮು ಕಾಶ್ಮೀರ ವಿರುದ್ಧ ಮೊದಲ ಪಂದ್ಯದಲ್ಲಿ ಶುರುವಾದ ಕರುಣ್​ ನಾಯರ್​ ಶತಕ ಬೇಟೆ ಇದೀಗ ರಾಜಸ್ಥಾನ ಎದುರಿನ 7ನೇ ಪಂದ್ಯದಲ್ಲೂ ಮುಂದುವರೆದಿದೆ. 6 ಪಂದ್ಯ, ಬರೋಬ್ಬರಿ 664ರ ಸರಾಸರಿ ಅಂದ್ರೆ ಏನು ಸಾಮಾನ್ಯಾನ.? ಈ ಬಾರಿಯ ವಿಜಯ್​ ಹಜಾರೆ ಟೂರ್ನಿಯಲ್ಲಿ ಕರುಣ್​ ಅಕ್ಷರಶಃ ‘ರನ್​ಮಷೀನ್​’ ಪದಕ್ಕೆ ಅರ್ಥ ಬರುವಂತೆ ಆಡಿದ್ದಾರೆ.

ಡ್ರೀಮ್​ ಫಾರ್ಮ್​ನಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸ್ತಿರೋ ಕರುಣ್​, 6 ಇನ್ನಿಂಗ್ಸ್​ಗಳಲ್ಲೇ 5 ಶತಕ ಸಹಿತ 664 ರನ್​ ಸಿಡಿಸಿದ್ದಾರೆ. ಈ ಸಾಲಿಡ್​ ಪರ್ಫಾಮೆನ್ಸ್​ಗೆ ಇದೀಗ ದೊಡ್ಡ ರಿವಾರ್ಡ್​ ಬರೋ ಸಾಧ್ಯತೆ ದಟ್ಟವಾಗಿದೆ. ಕರುಣ್​ ಆಡ್ತಿರೋ ಕನ್ಸಿಸ್ಟೆಂಟ್ ಆಟಕ್ಕೆ ಟೀಮ್​ ಇಂಡಿಯಾ ಸೀನಿಯರ್​ ಸೆಲೆಕ್ಟರ್ಸ್​ ಕ್ಲೀನ್​​ಬೋಲ್ಡ್​ ಆಗಿದ್ದಾರೆ. ಬಿಸಿಸಿಐ ವಲಯದಲ್ಲೂ ಕರುಣ್​ ಹೆಸ್ರು ಸಖತ್​ ಸೌಂಡ್​ ಮಾಡ್ತಿದೆ. ಸದ್ಯದ ಮಾಹಿತಿ ಪ್ರಕಾರ 8 ವರ್ಷಗಳ ಬಳಿಕ ಕರುಣ್​ ನಾಯರ್​ ಟೀಮ್​ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯ ತಂಡದಲ್ಲಿ ಕರುಣ್​​ಗೆ ಚಾನ್ಸ್ ನೀಡೋ ಸಾಧ್ಯತೆ ದಟ್ಟವಾಗಿದೆ.

ಟೆಸ್ಟ್​​ ತಂಡಕ್ಕೆ ಕನ್ನಡಿಗನ​ ಕಮ್​ಬ್ಯಾಕ್​ಗೆ ಕೌಂಟ್​ಡೌನ್​.?

ಕರುಣ್​ ನಾಯರ್​ ಜೊತೆಗೆ ಇನ್ನೊರ್ವ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಕೂಡ ವಿಜಯ್​ ಹಜಾರೆ ಟೂರ್ನಿಯಲ್ಲಿ ಆರ್ಭಟಿಸ್ತಿದ್ದಾರೆ. ಆಡಿದ ಎಲ್ಲಾ ಪಂದ್ಯಗಳಲ್ಲೂ ಕರ್ನಾಟಕದ ಸಾರಥಿ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. 4 ಶತಕ ಸಿಡಿಸಿ ಮಿಂಚಿರೋ ಮಯಾಂಕ್​ ಅಗರ್​ವಾಲ್​ ಆಟಕ್ಕೆ ಎದುರಾಳಿ ಬೌಲರ್​ಗಳು ಬೆಸ್ತು ಬಿದ್ದಿದ್ದಾರೆ.

ವಿಜಯ್​ ಹಜಾರೆ ಟೂರ್ನಿಯಲ್ಲಿ ಮಯಾಂಕ್​

ಈ ಬಾರಿಯ ವಿಜಯ್​ ಹಜಾರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಮಯಾಂಕ್​ ಅಗರ್​ವಾಲ್​, 619 ರನ್​ಗಳಿಸಿದ್ದಾರೆ. ಬರೋಬ್ಬರಿ 123.80ರ ಸರಾಸರಿಯಲ್ಲಿ ಬ್ಯಾಟ್ ಬೀಸಿರೋ ಮಯಾಂಕ್​​, 4 ಶತಕ ಸಿಡಿಸಿದ್ದಾರೆ.

ವಿಜಯ್ ಹಜಾರೆ ಟೂರ್ನಿಯ ಈ ಸಾಲಿಡ್​ ಪರ್ಫಾಮೆನ್ಸ್​ಗೆ ಮಯಾಂಕ್​ ಅಗರ್​ವಾಲ್​ಗೆ ರಿವಾರ್ಡ್ ಸಿಗೋ ಸಮಯ ಬಂದಂತಿದೆ. ಏಕದಿನ ಅಲ್ಲ.. ಟೆಸ್ಟ್​ ತಂಡದಲ್ಲಿ ಮಯಾಂಕ್​ಗೆ ಸ್ಥಾನ ಸಿಗೋ ಸಾಧ್ಯತೆ ದಟ್ಟವಾಗಿದೆ. ಜೂನ್​ನಲ್ಲಿ ಟೀಮ್​ ಇಂಡಿಯಾ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿದ್ದು, ಆ ಪ್ರವಾಸದ ತಂಡದಲ್ಲಿ ಮಯಾಂಕ್​ಗೆ ಸ್ಥಾನ ನೀಡಲು ಸೆಲೆಕ್ಟರ್ಸ್​ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಮುಖ್ಯ ಕೋಚ್​ಗೆ ಬಿಗ್​ ಶಾಕ್​​; ಗಂಭೀರ್​ ಪವರ್​ ಕಟ್​​ ಮಾಡಿದ ಬಿಸಿಸಿಐ ಬಾಸ್​ಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment