newsfirstkannada.com

ಅಬ್ಬಾ.. ಬಿಸಿಲಿಗೆ ಬಸವಳಿದ ರಾಜ್ಯದ ಜನತೆಗೆ ಸಿಹಿ ಸುದ್ದಿ; ತಂಪೆರದ ಮಳೆರಾಯ!

Share :

Published April 7, 2024 at 10:29pm

    ಸತತ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು ಜನ ಫುಲ್ ಖುಷ್

    ಕಲಬುರಗಿ ಜಿಲ್ಲೆಯಲ್ಲಿ 43.1 ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು

    ಬೆಂಗಳೂರಲ್ಲಿ 37.6 ಸೆಲ್ಸಿಯಸ್ ತಾಪಮಾನದ ಮೂಲಕ ಹೊಸ ದಾಖಲೆ

ದಾವಣಗೆರೆ: ನೆತ್ತಿ ಸುಡುವ ಬಿಸಿಲು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತಾಪಮಾನಕ್ಕೆ ಸುಸ್ತಾಗಿದ್ದ ರಾಜ್ಯದ ಜನತೆಗೆ ಸಮಾಧಾನಕಾರ ಸುದ್ದಿ ಇದು. ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯದ ಕೆಲವೆಡೆ ಮಳೆಯ ವಾತಾವರಣ ಕಂಡು ಬಂದಿದ್ದು, ವರ್ಷದ ಮೊದಲ ಮಳೆ ಕೆಲವೆಡೆ ತಂಪೆರೆದಿದೆ.

ಹೊನ್ನಾಳಿಯಲ್ಲಿ ಬೇಸಿಗೆಯ ಮಧ್ಯೆ ಸತತ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು ಜನ ಫುಲ್ ಖುಷ್ ಆಗಿದ್ದಾರೆ. ಬಿಸಿಲಿನ ತಾಪಕ್ಕೆ ಬೆಂದಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ಕೆರೆ ಕಟ್ಟೆ ಖಾಲಿಯಾಗಿ ಮೋಡದ ಕಡೆ ಮುಖ ಮಾಡಿದ್ದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಒಂದು ಟ್ಯಾಂಕರ್ ನೀರಿಗೆ 1500 ರೂಪಾಯಿ ನೀಡಿ ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹೋರಾಟ ನಡೆಸುತ್ತಿದ್ದರು. ಈ ಹೊತ್ತಲ್ಲೆ ಮಳೆ ಸುರಿದಿದ್ದರಿಂದ ರೈತರ ಮನಸ್ಸಿಗೆ ಕೊಂಚ ನೆಮ್ಮದಿ ತಂದಿದೆ.

ಇದನ್ನೂ ಓದಿ: Heatwave: ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ.. 15 ವರ್ಷಗಳಲ್ಲೇ ಬಿಸಿಲಲ್ಲಿ ಹೊಸ ದಾಖಲೆ; ಮುಂದೇನು?

ರಾಜ್ಯದಲ್ಲಿ ದಿನೇ ದಿನೆ ರಣಬಿಸಿಲು ಏರಿಕೆ ಆಗ್ತಿದೆ. ಕಳೆದ ಹದಿನೈದು ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಹವಾಮಾನ ವೈಪರೀತ್ಯ ಆಗಿತ್ತು. ಕಲಬುರಗಿಯಲ್ಲಿ 43.1 ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇತ್ತ ರಾಜಧಾನಿ ಬೆಂಗಳೂರಲ್ಲೂ ನೆತ್ತಿಸುಡುವ ಬಿಸಿಲು ಇದ್ದು, 37.6 ಸೆಲ್ಸಿಯಸ್ ತಾಪಮಾನದ ಮೂಲಕ ದಾಖಲೆಯಾಗಿದೆ. ಏಪ್ರಿಲ್ ತಿಂಗಳ ಲೆಕ್ಕಾಚಾರದಲ್ಲಿ ಇದೇ ಮೊದಲ ಬಾರಿಗೆ ತಾಪಮಾನ ದಾಖಲೆ ಬರೆದಿದೆ.

ಇಂತಹ ವಾತಾವರಣದಲ್ಲಿ ವರ್ಷದ ಮೊದಲ ಮಳೆ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಯುಗಾದಿ ಹಬ್ಬದ ಬಳಿಕ ರಾಜ್ಯದ ಹಲವೆಡೆ ಮಳೆ ಸುರಿಯುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ಉಷ್ಣಾಂಶದ ಜೊತೆಗೆ ಏಪ್ರಿಲ್ ಕೊನೇ ವಾರದಲ್ಲಿ ಮಳೆ ಸುರಿಯುವ ಸುಳಿವು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಬಿಸಿಲಿಗೆ ಬಸವಳಿದ ರಾಜ್ಯದ ಜನತೆಗೆ ಸಿಹಿ ಸುದ್ದಿ; ತಂಪೆರದ ಮಳೆರಾಯ!

https://newsfirstlive.com/wp-content/uploads/2024/04/Davangere-Rain.jpg

Load More