/newsfirstlive-kannada/media/post_attachments/wp-content/uploads/2024/07/tungabhadra-dam.jpg)
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಡ್ಯಾಂ ತಜ್ಞ ಕನ್ನಯ್ಯ ಅವರ ಸಹಾಯದಿಂದ ಅಧಿಕಾರಿಗಳು ತಾತ್ಕಾಲಿಕ ಗೇಟ್ ಕೂರಿಸುವ ಮೂಲಕ ಪೋಲಾಗುತ್ತಿರುವ ನೀರನ್ನು ತಡೆದಿದ್ದಾರೆ. ತಾತ್ಕಾಲಿಕ ಗೇಟ್​ ಅಳವಡಿಕೆ ಸಕ್ಸಸ್​ ಆದ ಕಾರಣ ಜಲಾಶಯದಲ್ಲಿ ನೀರು ಶೇಖರಣೆಯಾಗುತ್ತಿದೆ. ಮಾತ್ರವಲ್ಲದೆ ಒಳಹರಿವು ಪ್ರಮಾಣದಲ್ಲೂ ಏರಿಕೆ ಕಂಡಿದೆ.
ಇದನ್ನೂ ಓದಿ:ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಭಾರೀ ಇಳಿಕೆ; ಎಷ್ಟು ಅಡಿಗೆ ಬಂದು ನಿಂತಿದೆ ಗೊತ್ತಾ..?
ಈ ಹಿಂದೆ ತುಂಗಭದ್ರಾ ಜಲಾಶಯ 19ನೇ ಕ್ರಸ್ಟ್ ಕಿತ್ತುಹೋಗಿದ್ದರಿಂದ ಕಾನೂನು ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸರು ಸೆಕ್ಷನ್ 144 ಅನ್ನು ಜಾರಿ ಮಾಡಿದ್ದರು. ಆದರೆ ಈಗ ಅಧಿಕಾರಿಗಳು ವಿಧಿಸಲಾಗಿದ್ದ ಸೆಕ್ಷನ್ 144 ವಾಪಸ್ ಪಡೆದುಕೊಂಡಿದ್ದಾರೆ. ಗೇಟ್ ಕುಸಿತದ ಸುದ್ದಿ ಹರಡಿದಾಗ ಜನರು ದೊಡ್ಡ ಸಂಖ್ಯೆಯಲ್ಲಿ ಡ್ಯಾಂ ವೀಕ್ಷಣೆಗೆ ಬರಬಹುದು. ಇದರಿಂದ ಅಪಾಯ ಉಂಟಾಗಬಹುದು ಎಂಬ ಅನುಮಾನದಿಂದ ಜಲಾಶಯದ ಸುತ್ತ ಮುತ್ತ ಸೆಕ್ಷನ್ 144 ಜಾರಿ ಮಾಡಿದ್ದರು.
ಆಗಸ್ಟ್ 12ರಿಂದ ನಿರ್ಬಂಧ ಹೇರಿ ಆದೇಶಿಸಿದ್ದ ವಿಜಯನಗರ ಜಿಲ್ಲಾಡಳಿತ ಗೇಟ್ ದುರಸ್ತಿ ಆದ ಬೆನ್ನಲ್ಲೇ ಸೆಕ್ಷನ್ 144 ವಾಪಸ್ ಪಡೆದುಕೊಂಡಿದೆ. ಇದೀಗ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಿದೆ. ನಿನ್ನೆ 75 ಟಿಎಂಸಿ ನೀರು ಸಂಗ್ರಹವಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವಿದೆ. 10,201 ಕ್ಯೂಸೆಕ್ ನೀರು ಹೊರ ಹರಿವಿದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ