/newsfirstlive-kannada/media/post_attachments/wp-content/uploads/2025/06/PYA_APPS.jpg)
ನವದೆಹಲಿ: ಯುನಿಫೈಯಿಡ್​ ಪೇಮೆಂಟ್ಸ್​ ಇಂಟರ್​​ಫೇಸ್​ (ಯುಪಿಐ) ಭಾರತದ ಡಿಜಿಟಲ್​ ವಹಿವಾಟುಗಳು ಹಿಂದೆಂದಿಗಿಂತಲೂ ಈಗ ವೇಗವಾಗಿ ಹಾಗೂ ಹೆಚ್ಚು ಅನುಕೂಲಕರವಾಗಿ ಸೇವೆ ಒದಗಿಸಲಿವೆ. ಹಣ ಕಳಿಸುವುದು, ಸ್ವೀಕರಿಸುವುದು ಇಂದಿನಿಂದಲೇ ಮತ್ತಷ್ಟು ವೇಗದಲ್ಲಿ ಆಗಲಿದೆ ಎಂದು ಹೇಳಲಾಗಿದೆ.
ಹಣ ಕಳಿಸುವುದು, ಸ್ವೀಕರಿಸುವುದು ಇಂದಿನಿಂದಲೇ ಮತ್ತಷ್ಟು ವೇಗ ಪಡೆದುಕೊಂಡರೇ ಬ್ಯಾಲೆನ್ಸ್​​ಚೆಕ್, ಆಟೋ ಪೇಮೆಂಟ್​ ಸೇರಿದಂತೆ ಇನ್ನು ಕೆಲವು ಕೆಲ ಕೀ ಫ್ಯೂಚರ್​ಗಳು ಜುಲೈನಿಂದ ಬದಲಾಣೆಗಳೊಂದಿಗೆ ಸೇವೆ ನೀಡಲಿವೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್​​​ಪಿಸಿಐ) ಯುಪಿಐ ಅನ್ನು ನಿರ್ವಹಣೆ ಮಾಡುತ್ತಿದೆ. ಆನ್​ಲೈನ್​ ಹಣ ಪಾವತಿ ಇನ್ನಷ್ಟು ವೇಗದಲ್ಲಿ ಕೆಲಸ ಮಾಡಲಿವೆ ಎಂದು ಈ ಹಿಂದೆ ಅಂದರೆ 2025ರ ಏಪ್ರಿಲ್​ 26 ರಂದು ಹೇಳಿತ್ತು.
ಇದನ್ನೂ ಓದಿ: ಸೇತುವೆ ಮೇಲೆ ನಿಂತು ನೋಡುವಾಗಲೇ ನದಿಗೆ ಬಿದ್ದ ಬ್ರಿಡ್ಜ್​.. ಇಬ್ಬರು ನಿಧನ, ಕಾಣೆ ಆದವರಿಗಾಗಿ ಹುಡುಕಾಟ
ಅದರಂತೆ ಇಂದಿನಿಂದ ಆನ್​ಲೈನ್​ ಪೇಮೆಂಟ್ಸ್​​ನಲ್ಲಿ ವೇಗ ಇರಲಿದ್ದು ಬ್ಯಾಂಕುಗಳು, ಫಲಾನುಭವಿ ಬ್ಯಾಂಕುಗಳು ಇದರ ಲಾಭ ಪಡೆಯಲಿವೆ. ಜೊತೆಗೆ ಜನಪ್ರಿಯ ಪೇಮೆಂಟ್ಸ್​ ಆ್ಯಪ್​ಗಳು ಆಗಿರುವ ಫೋನ್​ ಪೇ, ಗೂಗಲ್​ ಪೇ ಪೇಟಿಎಂ ಪ್ರಯೋಜನಾ ಪಡೆಯುತ್ತವೆ. ಹೊಸ ಮಾರ್ಗಸೂಚಿಗಳು ಹಲವಾರು ಪ್ರಮುಖ ಬದಲಾವಣೆಗಳನ್ನು ತರುತ್ತವೆ. ಬ್ಯಾಲೆನ್ಸ್ ಚೆಕ್​ ಮಾಡುವುದರಿಂದ ಹಿಡಿದು ಹಿಂದಿನ ವಹಿವಾಟುಗಳನ್ನು ವೀಕ್ಷಿಸುವುದನ್ನು ಒಳಗೊಂಡಿವೆ.
- ಯುಪಿಐ ಆ್ಯಪ್​ಗಳಲ್ಲಿ ದಿನಕ್ಕೆ 50 ಬಾರಿ ಬ್ಯಾಲೆನ್ಸ್ ಚೆಕ್​ ಮಾಡಬಹುದು
- ನಿಮ್ಮ ಫೋನ್​ ನಂಬರ್​ಗೆ ಲಿಂಕ್ ಆಗಿರುವ ಎಲ್ಲ ಅಕೌಂಟ್​ಗಳ ನೋಡಲು ಅನುಮತಿ ಇರುತ್ತದೆ. ಜೊತೆಗೆ ಪ್ರತಿ ಬಳಕೆದಾರನು ದಿನಕ್ಕೆ ಪ್ರತಿ
- ಅಪ್ಲಿಕೇಶನ್‌ಗೆ 25 ವಿನಂತಿ (Requests)ಗಳನ್ನು ಪಡೆಯುತ್ತಾರೆ.
- ಸ್ವಯಂಚಾಲಿತ ಪಾವತಿ ಆದೇಶ ಕಾರ್ಯಗತಗೊಳಿಸುವಿಕೆ-
1. ಆಟೋ ಪೇಗೆ 1ರ ಬದಲಾಗಿ 3 ಮರುಪ್ರಯತ್ನ (retries)ಗಳನ್ನು ಅನುಮತಿಸಲಾಗಿದೆ.
2. ಸಿಸ್ಟಮ್ ಓವರ್‌ಲೋಡ್ ಅನ್ನು ತಪ್ಪಿಸಲು ಈ ಪ್ರಯತ್ನಗಳನ್ನು ಪೀಕ್ ಹವರ್‌ನ ಹೊರಗೆ ನೀಡಲಾಗುತ್ತದೆ.
3. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9:30 ರವರೆಗೆ ಪೀಕ್ ಹವರ್ ಎಂದು ಗುರುತಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ