Advertisment

ಹವಾಮಾನ ಇಲಾಖೆಯಿಂದ ಗುಡ್​ ನ್ಯೂಸ್​​.. ಬೆಂಗಳೂರು ಸೇರಿ ರಾಜ್ಯದ ಈ ಭಾಗಗಳಲ್ಲಿ ಮಳೆಯ ಮುನ್ಸೂಚನೆ

author-image
AS Harshith
Updated On
ಇಂದಿನಿಂದ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ಯೆಲ್ಲೋ ಅಲರ್ಟ್ ಘೋಷಣೆ
Advertisment
  • ಕರುನಾಡ ಜನರಿಗೆ ಕೊನೆಗೂ ಒಂದು ಒಳ್ಳೆ ಸುದ್ದಿ ಸಿಕ್ಕಿದೆ
  • ಬಿಸಿಲಿನ ಬೇಗೆಯಲ್ಲಿ ಸಾಗುತ್ತಿದೆ ಜನರ ಬೆವರಿನ ಜೀವನ
  • ಎಲ್ಲರ ಮೇಲೆ ಕರುಣೆ ತೋರಲಿದ್ದಾನೆ ವರುಣ ದೇವ

ಸತತ ಮೂರು ತಿಂಗಳಿಂದ ಬೇಸಿಗೆಯ ಬೇಗೆಗೆ ಬೇಯುತ್ತಿರುವ ನಮ್ಮ ಕರುನಾಡ ಜನರಿಗೆ ಕೊನೆಗೂ ಒಂದು ಒಳ್ಳೆ ಸುದ್ದಿ ಸಿಕ್ಕಿದೆ. ಇಂದು ಯುಗಾದಿ ಅಂದ್ರೆ ಹೊಸ ವರ್ಷ ಆರಂಭ ಆಗ್ತಿದ್ದಂತೆ ವರುಣ ದೇವನಿಗೆ ಎಲ್ಲರ ಮೇಲೆ ಕರುಣೆ ತೋರಲಿದ್ದಾನೆ. ಹಾಗಾದ್ರೇ ಬಿಸಿಲಿನ ಬೇಗೆಗೆ ವರುಣರಾಯ ಕೊಟ್ಟ ಗುಡ್​​​ನ್ಯೂಸ್​​​ ಏನು? ಇಲ್ಲಿದೆ ನೋಡಿ ಮಾಹಿತಿ.

Advertisment

ಯಪ್ಪಾ ಎಂಥಾ ಸೆಕೆ. ಧಗೆ. ಬಿಸಿಲು ಸ್ವಾಮಿ, ಈ ಸೆಕೆಗೆ ಐಸ್ ಕ್ಯೂಬ್ ಮೇಲೆ ಹಾಕಿಕೊಂಡು ಮಲ್ಕೊಂಡ್ರೂ ಸಮಾಧಾನ ಆಗಲ್ಲ ಎನ್ನುವ ರೀತಿಯಾಗಿದೆ ಜನರ ಪರಿಸ್ಥಿತಿ. ಈಗ ವಸಂತ ಋತು ಅಂದ್ರೆ ಹೊಸ ವರ್ಷದ ಆದಿ ಪ್ರಾರಂಭವಾಗುತ್ತಿದಂತೆ ಕರುನಾಡ ಜನರಿಗೆ ತಂಪೆರೆಯುವ ಸಿಹಿ ಸುದ್ದಿ ಸಿಕ್ಕಿದೆ. ಬಿಸಿಲಿನ ಬೇಗೆಗೆ ಬೆಂದಿರುವ ಜನ್ರಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.

publive-image

ಧರೆಗೆ ತಂಪೆರೆಯಲು ವರುಣನ ಮುನ್ಸೂಚನೆಯ ಸಿಂಚನ

ಇಂದು ಯುಗಾದಿ ಹಬ್ಬ. ಈ ಹಬ್ಬದ ಕಳೆಗಟ್ಟೋಕೆ ಬಿಸಿಲು ಅಡ್ಡಿ ಮಾಡಿರೋದಂತು ನಿಜ. ಯಾಕಂದ್ರೇ ಹಬ್ಬಕ್ಕೆ ಬಟ್ಟೆ, ಹೂ-ಹಣ್ಣು ಖರೀದಿ ಮಾಡೋದಕ್ಕೆ ಜನ ರೋಡಲ್ಲಿ ಇಳಿಯೋದಕ್ಕೂ ಹಿಂದೇಟು ಹಾಕಿದ್ದಾರೆ. ಆದರೆ ಬಿಸಿಲಿನ ಬೇಗೆಯಲ್ಲಿ ಮಳೆಗಾಗಿ ಜನರು ಕಾಯ್ತಿದ್ದಾರೆ. ಅದರಂತೆ ಇದೇ ತಿಂಗಳ 12 ಮತ್ತೆ 13ಕ್ಕೆ ಭರ್ಜರಿ ಮಳೆ ಬರಲಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಯುಗಾದಿ ಹಬ್ಬದ ಬಳಿಕ ಭರ್ಜರಿ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ.. ಇನ್ನೂ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗುತ್ತೆ ಅಂತ ನೋಡೋದಾದ್ರೆ.

ಏಪ್ರಿಲ್ 12 ಮತ್ತು 13
01. ಕೊಡಗು
02. ಚಿಕ್ಕಮಗಳೂರು
03. ಮೈಸೂರು
04. ಮಂಡ್ಯ
05. ಹಾಸನ

ಏಪ್ರಿಲ್​ 10
01. ದಕ್ಷಿಣ ಕನ್ನಡ
02. ಉಡುಪಿ
03. ಬೀದರ್
04. ಕಲಬುರಗಿ
05. ವಿಜಯಪುರ
06. ಕೊಪ್ಪಳ
07. ಬಳ್ಳಾರಿ
08. ಚಿತ್ರದುರ್ಗ
09. ಚಿಕ್ಕಮಗಳೂರು
10. ಹಾಸನ
11. ಕೊಡಗು
12. ಮಂಡ್ಯ
13. ಶಿವಮೊಗ್ಗ
14. ಮೈಸೂರು

Advertisment

ಏಪ್ರಿಲ್ 13 ಹಾಗೂ 14

ಇನ್ನೂ ಏಪ್ರಿಲ್​ 13 ಹಾಗೂ 14 ರಂದು ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

publive-image

ಇದನ್ನೂ ಓದಿ: ಒಟ್ಟಿಗೆ 17 ಮೊಮ್ಮಕ್ಕಳಿಗೆ ಮದುವೆ ಮಾಡಿಸಿದ ಬುದ್ಧಿವಂತ ಅಜ್ಜ; ಎಲ್ಲಿ? ಯಾಕೆ?

ಜೊತೆಗೆ ಕಳೆದೆರಡು ದಿನಗಳಿಂದ ದಾವಣಗೆರೆಯ ಹೊನ್ನಾಳಿಯಲ್ಲಿ ವರ್ಷದ ಮೊದಲ ಮಳೆಯಾಗಿದೆ. ಅರ್ಧಗಂಟೆಗೂ ಅಧಿಕ ಕಾಲ ಸುರಿದಿದೆ.. ಮಳೆ ಸುರಿದಿದ್ದರಿಂದ ರೈತರ ಮನಸ್ಸಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಹೀಗೆ ಮಳೆದೇವ ಕೃಪೆ ತೋರಿದ್ರೆ ಮತ್ತೆ ಜನರ ಜೀವನದಲ್ಲಿ ಆಶಾ ಕಿರಣ ಮೂಡಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment