/newsfirstlive-kannada/media/post_attachments/wp-content/uploads/2025/02/NAMMA_METRO-1.jpg)
ಬೆಂಗಳೂರು: ಟ್ರಾಫಿಕ್ನಿಂದ ಬೇಸತ್ತು ಹೋಗಿರುವ ಬೆಂಗಳೂರು ಜನರಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. ಬಹು ನಿರೀಕ್ಷೆಯ ನಮ್ಮ ಮೆಟ್ರೋದ ಪಿಂಕ್ ಲೈನ್ ಓಪನ್ ಆಗಲಿದೆ.
ಎಂಜಿ ರೋಡ್ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ವರೆಗೆ ಸುರಂಗ ಮಾರ್ಗದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಟಿಬಿಎಂ ಮಷಿನ್ (TBM ಸುರಂಗ ಕೊರೆಯುವ ಯಂತ್ರ) ಸುರಂಗ ಕೊರೆದು ಹೊರ ಬರಲಿದೆ. ಅಂಡರ್ ಗ್ರೌಂಡ್ ಮೆಟ್ರೋ ಕಾಮಗಾರಿಗಾಗಿ 9 ಟಿಬಿಎಂ ಮೆಷಿನ್ಗಳನ್ನು ಭೂಮಿಗಿಳಿಸಲಾಗಿತ್ತು.
ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಮದುವೆಗೆ ದಿನಾಂಕ ನಿಗದಿ; ವಿವಾಹ, ಆರತಕ್ಷತೆ ಎಲ್ಲಿ, ಯಾವಾಗ ನಡೆಯಲಿವೆ?
ಅದರಲ್ಲಿ ಈಗಾಗಲೇ 8 ಟಿಬಿಎಂ ಮೆಷಿನ್ ಸುರಂಗ ಕೊರೆದು ಹೊರಗೆ ಬಂದಿವೆ. ಉಳಿದಿರುವ ಒಂದು ಟಿಬಿಎಂ ಮೆಷಿನ್ ಮಾತ್ರ ಇಂದು ಹೊರ ಬರಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗವನ್ನು ಹೊಂದಿರುವ ಪಿಂಕ್ ಲೈನ್ ಯೋಜನೆ ಇದೆ. ಪಿಂಕ್ ಲೈನ್ 2 ಹಂತಗಳನ್ನು ಹೊಂದಿದೆ. 21.26 ಕಿಲೋ ಮೀಟರ್ ಉದ್ದದ ಈ ಮಾರ್ಗ ಕಾಳೇನ ಅಗ್ರಹಾರ, ನಾಗವಾರ ನಡುವೆ ಬರೋಬ್ಬರಿ 12 ಭೂಗತ ನಿಲ್ದಾಣಗಳು ಹಾಗೂ 6 ಎತ್ತರಿಸಿದ ನಿಲ್ದಾಣಗಳಿವೆ.
ಇದನ್ನೂ ಓದಿ: ‘LIC ಪಾಲಿಸಿ ಹಣ, ಸೈಟ್ ನನ್ನ ಹೆಂಡತಿಗೆ ಕೊಡಬೇಡಿ’- ದಾವಣಗೆರೆಯಲ್ಲಿ ನೊಂದ ಪತಿ ದುರಂತ ಅಂತ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ