ಕೊನೆಗೂ ಬಂತು ಸಿಹಿ ಸುದ್ದಿ.. ಹಾರ್ಟ್​ ಅಟ್ಯಾಕ್​​ಗೆ ಸಿಕ್ಕೇ ಬಿಡ್ತಾ ಮದ್ದು..?

author-image
Ganesh
Updated On
ಯುವಕರಲ್ಲೇ ಹಾರ್ಟ್ ಅಟ್ಯಾಕ್ ಹೆಚ್ಚು; ಕಾರಣವೇನು? ನೀವು ಓದಲೇಬೇಕಾದ ಸ್ಟೋರಿ..!
Advertisment
  • ವೈದ್ಯಕೀಯ ಲೋಕದಿಂದ ಬಂತು ಗುಡ್​ನ್ಯೂಸ್
  • ಹೃದಯಕ್ಕೆ ಆಪತ್ತು ತರುವ ಕಾಯಿಲೆಗೆ ಸಿಕ್ಕಿದೆ ಮದ್ದು
  • ಪ್ರಯೋಗ ಯಶಸ್ವಿಯಾದರೆ ಹೃದಯಾಘಾತ ಕಂಟ್ರೋಲ್

ಹಾರ್ಟ್​​ ಅಟ್ಯಾಕ್​.. ಈಗೀಗ ಈ ಶಬ್ದ ಕೇಳಿದ್ರೂ ಜನ ಬೆಚ್ಚಿಬೀಳ್ತಿದ್ದಾರೆ.. ಕೆಲವ್ರ ನೆತ್ತರು ಕುದಿಯುತ್ತೆ.. ಕಾರಣ ನಮ್ಮ ಪ್ರೀತಿ ಪಾತ್ರರನ್ನ ಕಸಿದುಕೊಂಡಿದ್ದೇ ಈ ಕಾಯಿಲೆ. ಇತ್ತೀಚಿಗಂತೂ ಎಲ್ಲಾ ಏಜ್​​​​​ ಗ್ರೂಪ್​ನಲ್ಲೂ ಹೃದಯಾಘಾತ ಕಾಣಿಸಿಕೊಳ್ತಿದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ವಿಜ್ಞಾನ ಸಂಶೋಧಕರು ಕೊನೆಗೂ ಮದ್ದು ಕಂಡು ಹಿಡಿದಿದ್ದಾರೆ. ಆದ್ರೆ ಹೃದಯಾಘಾತಕ್ಕೆ ಪಲ್ಮನರಿ ಎಂಬಾಲಿಸಮ್ ಅನ್ನೋ ಕಾಯಿಲೆ ಕಾರಣ ಅನ್ನೋದು ಗೊತ್ತಾಗಿದೆ.

ಏನಿದು ಪಲ್ಮರಿ ಎಂಬಾಲಿಸಮ್..?

ಪಲ್ಮನರಿ ಎಂಬಾಲಿಸಮ್​ ಅಂದ್ರೆ ಶ್ವಾಸಕೋಶದಲ್ಲಿ ಎಂಬಾಲಿಸಮ್​ ಅನ್ನೋ ದ್ರವ್ಯದ ಮೂಲಕ ರಕ್ತ ಹೆಪ್ಪುಗಟ್ಟುವಂತೆ ಮಾಡಿ, ದೇಹದಲ್ಲಿ ರಕ್ತ ಸಂಚರಿಸದಂತೆ ತಡೆಗಟ್ಟಿ ಆಪತ್ತು ತರೋ ಕಾಯಿಲೆ.

ಪಲ್ಮನರಿ ಎಂಬಾಲಿಸಮ್​ ಲಕ್ಷಣ

  • ಉಸಿರಾಡುವಾಗ ಎದೆನೋವು, ಕಿರಿಕಿರಿ
  •  ಗಾಳಿ ಅಲಭ್ಯತೆ ರೀತಿ ವೇಗವಾಗಿ ಉಸಿರಾಟ
  •  ಉಸಿರಾಟದ ಕಡಿಮೆ, ಕಡಿಮೆ ರಕ್ತದ ಒತ್ತಡ
  •  ಬೆರಳುಗಳು ನೀಲಿಗಟ್ಟುವಿಕೆ, ಆಯಾಸ

ಕೋವಿಡ್​​ ಸೋಂಕು ತಗಲಿದ ಅನೇಕ್ರು ಇದೇ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಅನ್ನೋದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿ ತಲೆಕೆಡಿಸಿಕೊಂಡಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು, ಹೃದಯಘಾತಕ್ಕೆ ನ್ಯಾನೊಜೈಮ್​ ಅನ್ನೋ ಮದ್ದನ್ನ ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: NHM ವೈದ್ಯರಿಗೆ, ನರ್ಸ್​ಗಳಿಗೆ ಭರ್ಜರಿ ಗುಡ್​ನ್ಯೂಸ್​.. ಕೊರೊನಾ ಉಲ್ಬಣ ಬೆನ್ನಲ್ಲೇ ವೇತನ ಹೆಚ್ಚಳ..!

publive-image

ಏನಿದು ‘ನ್ಯಾನೊಜೈಮ್’ ​ಔಷಧಿ

ಇತ್ತೀಚಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನ್ಯಾನೊಜೈಮ್​ ಅನ್ನೋ ಔಷಧಿಯನ್ನ ಇಲಿಗಳ ಮೇಲೆ ಪ್ರಯೋಗ ಮಾಡಿದ್ರು.. ಆಗ ಯಾವುದೇ ಅಡ್ಡಪರಿಣಾಮವಿಲ್ಲದೆ ಪವರ್​​ಫುಲ್​​​ ಫಲಿತಾಂಶ ಸಿಕ್ಕಿತ್ತು.. ಹೀಗಾಗಿ ಪಲ್ಮನರಿ ಥ್ರಂಬೋ ಎಂಬಾಲಿಸಮ್​​ನಿಂದಾಗಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಈ ನ್ಯಾನೋಜೈಮ್ ಅನ್ನೋ ಔಷಧಿ ಸಹಾಯ ಮಾಡಲಿದೆ ಅಂತ ಸಂಶೋಧಕರು ತಿಳಿಸಿದ್ದಾರೆ.. ಇದೀಗ ಈ ಪ್ರಯೋಗವನ್ನು ಮಾನವನ ಮೇಲೆ ಮಾಡಬೇಕಿದೆ. ಇದು ಯಶಸ್ವಿ ಆದರೆ ಹೃದಯಘಾತ, ಮತ್ತು ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಆಗ್ತಿದ್ದ ತೊಂದರೆಗಳಿಂದ ಪ್ರತಿಯೊಬ್ಬ ರೋಗಿಯನ್ನು ಪಾರು ಮಾಡಬಹುದು ಅಂತ ಖಚಿತಪಡಿಸಿದ್ದಾರೆ. ಈ ಪ್ರಯೋಗ ಮಾನವನ ಮೇಲೆ ನಡೆದ್ರೆ ಹೆಚ್ಚಾಗ್ತಿರೋ ಹೃದಯಾಘಾತವನ್ನ ತಡೆಯಬಹುದುದಾಗಿದೆ.

ಇದನ್ನೂ ಓದಿ: ಪಿರಿಯಡ್ಸ್ ಟೈಮ್​ನಲ್ಲಿ ಅಪ್ಪಿತಪ್ಪಿಯೂ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ; ಗಂಭೀರ ಸಮಸ್ಯೆಗೆ ಕಾರಣವಾಗಬಹುದು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment