/newsfirstlive-kannada/media/post_attachments/wp-content/uploads/2024/07/SUNITA-1.jpg)
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಭೂಮಿಗೆ ವಾಪಸ್ ಆಗಲು ದಾರಿ ಮುಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಸುನಿತಾ ವಿಲಿಯಮ್ಸ್ ವಾಪಸಾತಿಗೆ ಸಂಬಂಧಿಸಿ ಅಪ್‌ಡೇಟ್ ನೀಡುತ್ತಿರುವ NASA ಇದೀಗ ಖಷಿಯ ಸುದ್ದಿಯನ್ನ ನೀಡಿದೆ.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್​ಡೇಟ್ ಕೊಟ್ಟ NASA
ಬೋಯಿಂಗ್​ನ ಸ್ಟಾರ್​ಲೈನ್ ಬಾಹ್ಯಾಕಾಶ ನೌಕೆ ಶೀಘ್ರದಲ್ಲೇ ವಾಪಸ್ ಆಗಲು ಹಾರಾಟ ನಡೆಸಲಿದೆ. ಸಂಕಷ್ಟಕ್ಕೆ ಸಿಲುಕಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ (Butch Wilmore) ಆರ್​ಸಿಆರ್​ (Reaction Control System) ಪರೀಕ್ಷೆಯು ಯಶಸ್ವಿಯಾಗಿದೆ. ಇಬ್ಬರು ಸರಿಯಾಗಿಯೇ ರೆಸ್ಪಾನ್ಸ್ ಮಾಡಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ನೌಕೆಗೆ ಸಂಬಂಧಿಸಿ ಕೆಲವು ಪರೀಕ್ಷೆಗಳನ್ನು ಮಾಡಲಾಯಿತು. ಅದು ಕೂಡ ಯಶಸ್ವಿಯಾಗಿದೆ ಎಂದು ನಾಸಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..
ಫ್ಲೈಟ್ ಡೈರೆಕ್ಟರ್ ಕೋಲ್ ಮಹ್ರಿಂಗ್ (Chloe Mehring) ಮಾರ್ಗದರ್ಶನದಲ್ಲಿ ಬಾಹ್ಯಾಕಾಶ ನೌಕೆಯ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗಳೆಲ್ಲ ಸಕಾರಾತ್ಮಕವಾಗಿವೆ. ಸ್ಟಾರ್ ಲೈನರ್ ಮತ್ತು ಐಎಸ್​ಎಸ್ ತಂಡ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಪರೀಕ್ಷೆ ವೇಳೆ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ Boeing's CST-100ನಲ್ಲಿ ಇದ್ದಾರೆ.
ಇವರು ಸರಿಯಾದ ಸಮಯಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಾಪಸ್ ಆಗುವ ಇವರು ಇನ್ನೂ ಎರಡು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಆ ಪರೀಕ್ಷೆಯು ಮುಂದಿನ ವಾರ ನಡೆಯಲಿದೆ. ನಂತರ ಸುರಕ್ಷಿತ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ಮಾಡಲಾಗುವುದು. ಗಗನಯಾನಿಗಳು ಶೀಘ್ರದಲ್ಲೇ ಮರಳುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!
ಮಾಹಿತಿಗಳ ಪ್ರಕಾರ, ಮುಂದಿನ ವಾರ ನಡೆಯಲಿರುವ ಹಾರಾಟದ ಪರೀಕ್ಷಾ ಸಿದ್ಧತೆಯೂ ಪೂರ್ಣಗೊಂಡಿದೆ. ಹಾಟ್​ ಫೈರ್​ ಟೆಸ್ಟ್​ನ ಡೇಟಾವನ್ನೂ ಪರಿಶೀಲನೆ ಮಾಡಲಾಗಿದೆ. ಆದರೆ ಅವರು ವಾಪಸ್ ಆಗುವ ದಿನಾಂಕವನ್ನು ಇನ್ನೂ ಪ್ರಕಟವಾಗಿಲ್ಲ. ಆಗಸ್ಟ್​ನಲ್ಲಿ ಸುನಿತಾ ವಿಲಿಯಮ್ಸ್​ ಭೂಮಿಗೆ ಮರಳಲಿದ್ದಾರೆ.
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.
ಇದನ್ನೂ ಓದಿ:60 ಲಕ್ಷ ರೂಪಾಯಿ ಬೆಲೆಯ ಪ್ಲಾಟ್​ 30 ಕೋಟಿಗೆ ಬಿಡ್; ಬೆಚ್ಚಿಬಿದ್ರು ಹರಾಜು ನಡೆಸಿದ ಅಧಿಕಾರಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ