ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್​ಡೇಟ್ ಕೊಟ್ಟ NASA

author-image
Ganesh
Updated On
ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್​ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
Advertisment
  • ಜೂನ್ 5 ರಂದು ಗಗನಯಾನ ಕೈಗೊಂಡಿದ್ದ ಸುನಿತಾ ವಿಲಿಯಮ್ಸ್​
  • ಜೂನ್​​ ತಿಂಗಳ ಮಧ್ಯದಲ್ಲೇ ಭೂಮಿಗೆ ಬರಬೇಕಿದ್ದ ಗಗನಯಾತ್ರಿಗಳು
  • ಸುರಕ್ಷಿತವಾಗಿ ವಾಪಸ್ ಕರೆ ತರಲು ನಾಸಾ ದಿಂದ ಕಸರತ್ತು

ಕಳೆದ ಒಂದೂವರೆ ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ವಾಪಸಾತಿಗೆ ಸಂಬಂಧಿಸಿ NASA ಅಪ್‌ಡೇಟ್ ನೀಡಿದೆ. ಶೀಘ್ರದಲ್ಲೇ ಅವರು ಬಾಹ್ಯಾಕಾಶದಿಂದ ಭೂಮಿಗೆ ಬರುವ ಸೂಚನೆಯನ್ನು ನಾಸಾ ನೀಡಿದೆ.

ಸುನಿತಾ ವಿಲಿಯಮ್ಸ್​ ಇರುವ ಬೋಯಿಂಗ್ ಕ್ಯಾಪ್ಸುಲ್‌ನಲ್ಲಿನ (Boeing's CST-100 ) ಸಮಸ್ಯೆ ಇದೆ. ಅದನ್ನು ಇಂಜಿನಿಯರ್​​ಗಳು ಸರಿಪಡಿಸುವವರೆಗೂ ಅವರು ಐಎಸ್‌ಎಸ್‌ನಲ್ಲಿ (International Space Station) ಇರುತ್ತಾರೆ ಎಂದು ನಾಸಾ ಹೇಳಿದೆ.

ಇದನ್ನೂ ಓದಿ:ಮಾಡ್ರನ್ ಕ್ರಿಕೆಟ್​ನಲ್ಲಿ ಸೂರ್ಯ ಯಾಕೆ ಡೇಂಜರಸ್ ಗೊತ್ತಾ? ದಂಡಂ ದಶಗುಣಂ ಕತೆ..!

publive-image

ಪರೀಕ್ಷಾ ಪೈಲಟ್‌ಗಳಾದ ಬುಚ್ ವಿಲ್ಮೋರ್ (Butch Wilmore) ಮತ್ತು ಸುನೀತಾ ವಿಲಿಯಮ್ಸ್ ಒಂದು ವಾರದವರೆಗೆ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಉಳಿದು ಜೂನ್ ಮಧ್ಯದಲ್ಲಿ ಹಿಂತಿರುಗಬೇಕಿತ್ತು. ಆದರೆ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ದೋಷ ಕಂಡು ಬಂದಿದೆ. ಜೊತೆಗೆ ಹೀಲಿಯಂ ಸೋರಿಕೆ ಉಂಟಾದ ಹಿನ್ನೆಯಲ್ಲಿ ಬಾಹ್ಯಾಕಾಶದಲ್ಲಿಯೇ ಸಿಲುಕಿಕೊಂಡಿದ್ದಾರೆ.

ಆದರೆ ನಾಸಾದ ಅಧಿಕಾರಿಗಳು ಸುನಿತಾ ವಿಲಿಯಮ್ಸ್ ಯಾವಾಗ ವಾಪಸ್​ ಭೂಮಿಗೆ ಬರುತ್ತಾರೆ ಅನ್ನೋವ ಬಗ್ಗೆ ಅಧಿಕೃತವಾಗಿ ದಿನಾಂಕ ನಿಗಧಿ ಮಾಡಿಲ್ಲ. ನಮ್ಮ ತಜ್ಞರು, ಬಾಹ್ಯಾಕಾಶದಲ್ಲಿ ಏನು ಸಮಸ್ಯೆ ಆಗಿದೆ. ಅದನ್ನು ಹೇಗೆ ಸರಿಮಾಡಬೇಕು ಅನ್ನೋದ್ರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಶೀಘ್ರದಲ್ಲೇ ವಾಪಸ್ ಆಗುವ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ:ಹೀಲಿಯಂ ಸಿಸ್ಟಂ ಸೋರಿಕೆ! ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್!

publive-image

ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. ನೌಕೆಯಲ್ಲಿ 45 ದಿನಕ್ಕಾಗುವಷ್ಟು ಇಂಧನ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸೋರಿಕೆಯಾದ್ರೆ ಮುಂದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ಸುಳಿವು.. NEET ಅಕ್ರಮದ ರಹಸ್ಯ ಬಯಲು ಮಾಡಿದ ಸಿಬಿಐ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment