BBK11 Finale: ಬಿಗ್​ಬಾಸ್ ಫಿನಾಲೆಗೂ ಮುನ್ನವೇ ಭವ್ಯಾ, ರಜತ್​, ಹನುಮನಿಗೆ ಒಲಿದ ಅದೃಷ್ಟ; ಏನದು?

author-image
Veena Gangani
Updated On
BBK11 Finale: ಬಿಗ್​ಬಾಸ್ ಫಿನಾಲೆಗೂ ಮುನ್ನವೇ ಭವ್ಯಾ, ರಜತ್​, ಹನುಮನಿಗೆ ಒಲಿದ ಅದೃಷ್ಟ; ಏನದು?
Advertisment
  • ಬಿಗ್​ಬಾಸ್​ ಗ್ರ್ಯಾಂಡ್ ಮೂವರು ಸ್ಪರ್ಧಿಗಳು ಮಾತ್ರ ಹಾರ ಹಾಕಿ ನಿಂತಿದ್ದು ಏಕೆ?
  • ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ ಹೊತ್ತಲ್ಲೇ ಈ ಮೂವರಿಗೆ ಒಲಿತು ಬಂತು ಅದೃಷ್ಟ
  • ಕೊನೆಯ ಹಂತಕ್ಕೆ ಬಂದು ತಲುಪಿದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ ಬಿಗ್​ಬಾಸ್​ ಮನೆಯಲ್ಲಿರೋ ಆರು ಸ್ಪರ್ಧಿಗಳ ಪೈಕಿ ಮೂವರಿಗೆ ದೊಡ್ಡ ಸರ್ ಆಫರ್​ ಒಂದು ಸಿಕ್ಕಿದೆ. ಹೌದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಮುಕ್ತಾಯದ ಹಂತದಲ್ಲಿದೆ.

ಇದನ್ನೂ ಓದಿ: BBK11GrandFinale: 5 ಕೋಟಿ ವೋಟ್, ಅರ್ಧ ಕೋಟಿ ನೋಟ್ ಗೆಲ್ಲೋ ಅದೃಷ್ಟವಂತ ಇವರೇನಾ?

publive-image

ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದರು. ಈ 6ರಲ್ಲಿ 5 ಸ್ಪರ್ಧಿಗಳು ಕೊನೆಯ ಹಂತದಲ್ಲಿ ಇದ್ದಾರೆ. ಶನಿವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಅವರು ಬಿಗ್​ಬಾಸ್​ ಮನೆಯಿಂದ 5ನೇ ಫೈನಲಿಸ್ಟ್​ ಆಗಿ ಆಚೆ ಬಂದಿದ್ದರು. ಇನ್ನೂ, ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳಿಗೆ ಬಿಗ್​ಬಾಸ್​ ಸರ್​ಪ್ರೈಸ್​ವೊಂದನ್ನು​ ಕೊಟ್ಟಿದ್ದರು. ಅದರಲ್ಲೂ ಸೀಸನ್ 11ರ ಸ್ಪರ್ಧಿಗಳನ್ನು ಮತ್ತೆ ಬಿಗ್​ಬಾಸ್​ ಮನೆಯಲ್ಲಿ ಕಾಣಸಿಕ್ಕಿತ್ತು. ಇದಕ್ಕೆ ಕಾರಣ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ.

publive-image

ಹೌದು, ಮುಂದಿನ ತಿಂಗಳು ಅಂದ್ರೆ ಫೆಬ್ರವರಿ 1 ಕಲರ್ಸ್​ ಕನ್ನಡದಲ್ಲಿ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಇದರ ಪ್ರಮೋಷನ್​ಗೆ ಬಾಯ್ಸ್ ವರ್ಸಸ್ ಗರ್ಲ್ಸ್ ಟೀಂ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿತ್ತು. ಅದರಲ್ಲಿ ಧನರಾಜ್ ಆಚಾರ್, ಲಾಯರ್ ಜಗದೀಶ್, ಐಶ್ವರ್ಯ ಹಾಗೂ ಶೋಭಾ ಶೆಟ್ಟಿ ಮೊದಲು ಬಂದಿದ್ದರು. ಇದಾದ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಟೀಂ ಸದಸ್ಯರೆಲ್ಲಾ ಎಂಟ್ರಿ ಕೊಟ್ಟು ಎಲ್ಲರಿಗೂ ಸರ್ಪ್ರೈಸ್​ ಕೊಟ್ಟಿದ್ದಾರೆ.

publive-image

ಇನ್ನೂ, ವಿಶೇಷ ಎಂದರೆ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಆರು ಸ್ಪರ್ಧಿಗಳಲ್ಲಿ 3ವರಿಗೆ ಬಾಯ್ಸ್ ವರ್ಸಸ್ ಗರ್ಲ್ಸ್ ಟೀಂ ಸರ್ಪ್ರೈಸ್ ಹೊತ್ತು ತಂದಿತ್ತು. ಮೊದಲು ರಜತ್ ಅವರಿಗೆ ಶೋಭಾ ಶೆಟ್ಟಿ ಅವರು ಹಾರ ಹಾಕಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗೆ ಆಯ್ಕೆ ಮಾಡಿದರು. ಇದಾದ ಬಳಿಕ ಐಶ್ವರ್ಯಾ ಅವರು ಭವ್ಯಾ ಗೌಡ ಅವರಿಗೆ ಹಾರ ಹಾಕುವ ಮೂಲಕ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗೆ ಬರಮಾಡಿಕೊಂಡರು. ಇದಾದ ಬಳಿಕ ಧನರಾಜ್ ಆಚಾರ್​ ಅವರು ಹನುಮಂತನಿಗೆ ಹಾರ ಹಾಕಿ ಹೊಸ ರಿಯಾಲಿಟಿ ಶೋಗೆ ಸ್ವಾಗತಿಸಿದರು. ಸದ್ಯ ಬಿಗ್​ಬಾಸ್​ ಮುಗಿಯುತ್ತಿದ್ದಂತೆ ಭವ್ಯಾ ಗೌಡ, ರಜತ್ ಹಾಗೂ ಹನುಮಂತ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment