Youtube Shorts: 60 ಸೆಕೆಂಡ್​ಗಳ ಶಾರ್ಟ್ಸ್​​ಗೆ ವಿದಾಯ! ಹೊಸ ಸರ್​ಪ್ರೈಸ್​​ ನೀಡಿದ ಯೂಟ್ಯೂಬ್​​

author-image
AS Harshith
Updated On
ಕಂಟೆಂಟ್ ಕ್ರಿಯೇಟರ್ಸ್​ಗೆ ಶಾಕ್ ಕೊಟ್ಟ ಯೂಟ್ಯೂಬ್.. ಹಣ ಗಳಿಸೋದು ಸುಲಭದ ಮಾತಲ್ಲ..!
Advertisment
  • 60 ಸೆಕೆಂಡ್​​ಗಳ ಶಾರ್ಟ್ಸ್​​ ಅವಧಿಗೆ ಯೂಟ್ಯೂಬ್​ ವಿದಾಯ
  • ಶಾರ್ಟ್ಸ್​​ ಬಳಕೆದಾರರಿಗೆ ಸರ್​ಪ್ರೈಸ್​ ನೀಡಿದ ಯೂಟ್ಯೂಬ್​
  • ಇಲ್ಲಿವರೆಗೆ ಒಂದು ಲೆಕ್ಕ.. ಅಕ್ಟೋಬರ್​ 15ರಿಂದ ಮತ್ತೊಂದು ಲೆಕ್ಕ

ಇನ್​​ಸ್ಟಾಗ್ರಾಂ ರೀಲ್ಸ್​ ಮತ್ತು ಬೈಟೆಡ್ಯಾನ್ಸ್​​ ಒಡೆತನದ ಟಿಕ್​ಟಾಕ್​ಗೆ ಯೂಟ್ಯೂಬ್ ಶಾರ್ಟ್ಸ್​​ ಪ್ರತಿಸ್ಪರ್ಧಿಯಾಗಿದೆ. ಅತಿ ವೇಗವಾಗಿ ಬಳಕೆದಾರರನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಹೆಚ್ಚಿನ ಯೂಟ್ಯೂಬ್​ ಬಳಕೆದಾರರು ಇದರ ​ ಮೂಲಕ ಶಾರ್ಟ್ಸ್​​ ಹಂಚಿಕೊಳ್ಳುತ್ತಾರೆ. ಈವರೆಗೆ 3 ನಿಮಿಷಗಳ ಕಾಲ ಶಾರ್ಟ್ಸ್​​ ಹಂಚಿಕೊಳ್ಳುವ ಅವಕಾಶ ಯೂಟ್ಯೂಬ್​ ನೀಡಿತ್ತು. ಆದರೀಗ ಯೂಟ್ಯೂಬ್​ ಅದರ ಕಾಲಮಿತಿಯನ್ನು ಹೆಚ್ಚಿಸುತ್ತಿದೆ. ಶಾರ್ಟ್ಸ್​ಗಾಗಿ 6 ನಿಮಿಷಗಳ ಕಾಲವಕಾಶವನ್ನು ಕೊಡುತ್ತಿದೆ.

ಅಕ್ಟೋಬರ್​ 15ರಿಂದ 3 ನಿಮಿಷಗಳ ಕಾಲ ಶಾರ್ಟ್ಸ್​​​ ವಿಡಿಯೋ ಪೋಸ್ಟ್​ ಮಾಡಲು ಯೂಟ್ಯೂಬ್​ ಅನುಮತಿಸುತ್ತಿದೆ. ಇದು ಜನಪ್ರಿಯತೆಯಲ್ಲಿರುವ ವೈಶಿಷ್ಟ್ಯವಾಗಿದೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.

ಇದನ್ನೂ ಓದಿ: ಇನ್ಮುಂದೆ ಆ್ಯಂಬುಲೆನ್ಸ್​​​ ಟ್ರಾಫಿಕ್​ನಲ್ಲಿ ಸಿಲುಕಲು ಸಾಧ್ಯವೇ ಇಲ್ಲ.. ಯಾಕಂದ್ರೆ E-Path App ಇದೆಯಲ್ಲ

ಯೂಟ್ಯೂಬ್​​ ಶಾರ್ಟ್ಸ್​​ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆಂದೇ ಹೆಚ್ಚಿನ ವೈಶಿಷ್ಟ್ಯ ಅಭಿವೃದ್ಧಿಪಡಿಸುತ್ತಿದೆ. ಟೆಂಪ್ಲೇಟ್​​ ಬಳಸಿಕೊಂಡು ಶಾರ್ಟ್ಸ್​​ ವಿಡಿಯೋ ತಯಾರಿಸುವ ಆಯ್ಕೆ ಸದ್ಯದಲ್ಲೇ ಪ್ರಾರಂಭವಾಗಲಿದೆ. ಜೊತೆಗೆ ಕ್ಲಿಪ್​ ರಿಮಿಕ್ಸ್​​ ಆಯ್ಕೆ ಕೂಡ ಶೀಫ್ರದದಲ್ಲೇ ಬರಲಿದೆ.

ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಭರ್ಜರಿ ಆಫರ್​​.. ಕೇವಲ 15 ಸಾವಿರಕ್ಕೆ ಸಿಗಲಿವೆ ಪ್ರೀಮಿಯಮ್​​ ಸ್ಮಾರ್ಟ್​ಫೋನ್ಸ್​​!

ಇದಲ್ಲದೆ AI ಸಂಯೋಜನೆಯೊಂದಿಗೆ ವಿಡಿಯೋ ಸಂಯೋಜನೆ ಮಾಡಲಿದೆ. ಸ್ವತಂತ್ರ ಕ್ಲಿಪ್​ ರಚಿಸಲು ಹೆಚ್ಚಿನ ಉತ್ತೇಜನ ನೀಡಲಿದೆ. ಒಟ್ಟಿನಲ್ಲಿ ಯೂಟ್ಯೂಬ್​ ಬಳಕೆದಾರರಿಗೆ ಅನುಗುಣವಾಗಿ ಹೊಸ ಹೊಸ ಫೀಚರ್​ ಪರಿಚಯಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment