Advertisment

RCB ವಿಜಯೋತ್ಸವ: ಚಿನ್ನಸ್ವಾಮಿ ಸ್ಟೇಡಿಯಂ ಎಂಟ್ರಿಗೆ ಉಚಿತ ಪಾಸ್‌ ಘೋಷಣೆ

author-image
admin
Updated On
RCB ವಿಜಯೋತ್ಸವ: ಚಿನ್ನಸ್ವಾಮಿ ಸ್ಟೇಡಿಯಂ ಎಂಟ್ರಿಗೆ ಉಚಿತ ಪಾಸ್‌ ಘೋಷಣೆ
Advertisment
  • ಆರ್‌ಸಿಬಿ ಆಟಗಾರರನ್ನ ಸ್ವಾಗತಿಸಿದ ಡಿಸಿಎಂ ಡಿ.ಕೆ ಶಿವಕುಮಾರ್
  • ಇಂದು ಸಂಜೆ ಚಿನ್ನಸ್ವಾಮಿ ಸ್ಟೇಡಿಯಂಗೆ ಉಚಿತ ಪಾಸ್ ಘೋಷಣೆ
  • ಪಾಸ್‌ಗೆ ಯಾವುದೇ ಅಮೌಂಟ್ ಇಲ್ಲ ಎಂದ RCB ಮ್ಯಾನೇಜ್‌ಮೆಂಟ್

ಬೆಂಗಳೂರು: ಐಪಿಎಲ್ ಕಿಂಗ್‌ RCB ತಂಡಕ್ಕೆ ಸನ್ಮಾನ, ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಂದು ಸಂಜೆ ವಿಧಾನಸೌಧದ ಮೇಲೆ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಅಹ್ಮದಾಬಾದ್‌ನಿಂದ ಬೆಂಗಳೂರು HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆರ್‌ಸಿಬಿ ಆಟಗಾರರನ್ನ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸ್ವಾಗತಿಸಿದರು.

Advertisment

publive-image

ವಿಜಯೋತ್ಸವದ ಹಿನ್ನೆಲೆಯಲ್ಲಿ RCB ಮ್ಯಾನೇಜ್‌ಮೆಂಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇಂದು ಸಂಜೆ ಚಿನ್ನಸ್ವಾಮಿ ಸ್ಟೇಡಿಯಂಗೆ ಉಚಿತ ಪಾಸ್ ನೀಡಲಾಗುತ್ತಿದ್ದು, ವೆಬ್‌ಸೈಟ್ ಮೂಲಕ ಪಾಸ್ ಬುಕ್ ಮಾಡಲು ಅವಕಾಶ ನೀಡಿದೆ. ಪಾಸ್‌ಗೆ ಯಾವುದೇ ಅಮೌಂಟ್ ಇಲ್ಲ ಎಂದು RCB ಮ್ಯಾನೇಜ್‌ಮೆಂಟ್ ಘೋಷಣೆ ಮಾಡಿದೆ.

publive-image

RCB ವಿಜಯೋತ್ಸವ ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳ ದಂಡೇ ಹರಿದು ಬರ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನವೇ ಅಭಿಮಾನಿಗಳು ಕಿಲೋ ಮೀಟರ್‌ಗಟ್ಟಲೇ ನಿಂತು ಪಾಸ್‌ಗಾಗಿ ಕಾಯುತ್ತಿದ್ದರು.
ಸ್ಟೇಡಿಯಂ ಒಳಗಡೆ ಹೋಗಲು ಜಾತಕಪಕ್ಷಿಯಂತೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಪಾಸ್ ಕೊಡ್ತಾರಾ? ಫ್ರೀ ಎಂಟ್ರಿನಾ ಅನ್ನೋ ಬಗ್ಗೆ ಕ್ಲಾರಿಟಿ ಇರಲಿಲ್ಲ. ಸ್ಟೇಡಿಯಂ ಮಂದೆ ಕಾಯುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಟಿಕೆಟ್ ಅಥವಾ ಪಾಸ್ ಕೊಡಿ ಎಂದು ಒತ್ತಾಯಿಸಿದ್ದಾರೆ. ಟಿಕೆಟ್, ಪಾಸ್‌ ಬಗ್ಗೆ ಕ್ಲಾರಿಟಿ ಸಿಗದ ಹಿನ್ನೆಲೆಯಲ್ಲಿ ಕೆಲ ಫ್ಯಾನ್ಸ್ ಕಾಂಪೌಂಡ್ ಹತ್ತಲು ಯತ್ನಿಸಿದರು.

publive-image

ಕ್ಷಣ, ಕ್ಷಣಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಹೊರ ಭಾಗದಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಒಬ್ಬರನ್ನ ನೋಡಿ ಮತ್ತೊಂದಿಷ್ಟು ಜನ ಗೇಟ್ ಹತ್ತುವ ಪ್ರಯತ್ನ ಮಾಡಿದ್ದು, ಸ್ಟೇಡಿಯಂ ಭದ್ರತಾ ಟೀಮ್ ಮನವೊಲಿಸೋ ಯತ್ನ ಮಾಡಿದರು.

Advertisment

ಇದನ್ನೂ ಓದಿ: RCB ವಿಜಯೋತ್ಸವ.. ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಭಾರೀ ಟ್ರಾಫಿಕ್ ಜಾಮ್‌; ಮೆಟ್ರೋ ಬಳಸಲು ಸಲಹೆ! 

ಅಭಿಮಾನಿಗಳ ಸಾಗರ ಹೆಚ್ಚಾಗುತ್ತಿದ್ದಂತೆ ಆರ್‌ಸಿಬಿ ಅಧಿಕೃತ ಪೇಜ್‌ನಲ್ಲಿ shop.royalchallengers.com ಟಿಕೆಟ್ಸ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಯಿತು. ಆದ್ರೆ ನೆಟ್ ವರ್ಕ್ ಇಲ್ಲದೇ ಪಾಸ್ ಬುಕ್ ಮಾಡಲು ಅಭಿಮಾನಿಗಳು ಪರದಾಟ ನಡೆಸಬೇಕಾಯಿತು. ಕೆಲವೇ ಕ್ಷಣಗಳಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಲಿಂಕ್ ಅಪ್ಡೇಟ್ ಮಾಡಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment