newsfirstkannada.com

ಲೋಕೋ ಪೈಲಟ್ ಇಲ್ಲದೇ 70 ಕಿಮೀ ಪ್ರಯಾಣಿಸಿದ ರೈಲು; ಪಂಜಾಬ್​ನಲ್ಲಿ ತಪ್ಪಿದ ಭಾರೀ ದುರಂತ -Video

Share :

Published February 25, 2024 at 12:33pm

    ಪಠಾಣ್ ಕೋಟ್​ ರೈಲ್ವೇ ನಿಲ್ದಾಣದಲ್ಲಿ ಡ್ರೈವರ್​​ ಪ್ರಮಾದ

    ಐದು ರೈಲ್ವೇ ನಿಲ್ದಾಣಗಳನ್ನು ದಾಟಿ ಹೋಗಿದ್ದ ಟ್ರೈನ್

    ವೇಗವಾಗಿ ಹೋಗ್ತಿದ್ದ ರೈಲುನ್ನು ತಡೆದು ನಿಲ್ಲಿಸಿದ್ದು ಯಾರು?

ಪಂಜಾಬ್​ನಲ್ಲಿ ಇವತ್ತು ಗ್ರೂಡ್ಸ್​ ಟ್ರೈನ್ ಯಾವುದೇ ಡ್ರೈವರ್ (ಲೋಕೋ ಪೈಲೆಟ್) ಇಲ್ಲದೇ ಬರೋಬ್ಬರಿ 70 ಕಿಲೋ ಮೀಟರ್ ದೂರ ಪ್ರಯಾಣಿಸಿದೆ. ಬೆಚ್ಚಿ ಬೀಳಿಸುವ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ರೈಲ್ವೇ ಇಲಾಖೆ ನಿಟ್ಟುಸಿರುಬಿಟ್ಟಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡ್ರೈವರ್ ಪಠಾಣ್ ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದಲು ಹ್ಯಾಂಡ್ ಬ್ರೇಕ್ ಹಾಕೋದನ್ನು ಮರೆತಿದ್ದಾರೆ. ಪರಿಣಾಮ ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ.

ಗೂಡ್ಸ್​ ಟ್ರೈನ್​ನಲ್ಲಿ ​ ಕಲ್ಲುಗಳು ಇದ್ದವು. ಡ್ರೈವರ್ ಇಲ್ಲದೇ ಹಳಿಯಲ್ಲಿ ಓಡಲು ಶುರುಮಾಡಿದ ಟ್ರೈನು ಬರೋಬ್ಬರಿ ಐದು ನಿಲ್ದಾಣಗಳನ್ನು ದಾಟಿ ಹೋಗಿದೆ. ನಂತರ ಉಚಿ ಬಸ್ಸಿನಲ್ಲಿ (Uchi Bassi) ನಿಲ್ಲಿಸಲಾಗಿದೆ. ಮರದ ತುಂಡುಗಳನ್ನು ಇಟ್ಟು ರೈಲನ್ನು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ. ಇನ್ನು ಡ್ರೈವರ್ ಇಲ್ಲದೇ ಪ್ರಯಾಣಿಸಿದ ಗೂಡ್ಸ್​ ಟೈನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕೋ ಪೈಲಟ್ ಇಲ್ಲದೇ 70 ಕಿಮೀ ಪ್ರಯಾಣಿಸಿದ ರೈಲು; ಪಂಜಾಬ್​ನಲ್ಲಿ ತಪ್ಪಿದ ಭಾರೀ ದುರಂತ -Video

https://newsfirstlive.com/wp-content/uploads/2024/02/TRAIN-10.jpg

Load More