/newsfirstlive-kannada/media/post_attachments/wp-content/uploads/2025/05/SMARTPHONE.jpg)
ಈಗ ನಿಮ್ಮ ಫೋನ್ ಮನುಷ್ಯರಂತೆ ನಿಮ್ಮೊಂದಿಗೆ ಮಾತನಾಡುತ್ತದೆ! ಇದಕ್ಕಾಗಿ ನೀವು ದುಬಾರಿ ಪ್ರೀಮಿಯಂ ಫೋನ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮೂಲ ಸ್ಮಾರ್ಟ್‌ಫೋನ್ ಸಾಕು.
ಗೂಗಲ್ I/O 2025 ರಲ್ಲಿ AIನ ಹೊಸ ಫೀಚರ್ ಬಿಡುಗಡೆ ಮಾಡಿದೆ. ಅದರ ಮೂಲಕ ನೀವು ಫೋನ್‌ನಿಂದ ಸಂಭಾಷಣೆಗಳನ್ನ ನಡೆಸಬಹುದು. ನಿಮ್ಮ ಫೋನ್‌ನ ಕ್ಯಾಮೆರಾ ಆನ್ ಮಾಡಿ ಅದು ನೋಡುವ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಅಯ್ಯರ್ ಪ್ಲಾನ್ ಉಲ್ಟಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್.. RCB, GTಗೆ ಇನ್ನೊಂದು ಚಾನ್ಸ್..!
ಅದಕ್ಕೆ ಗೂಗಲ್ ‘Gemini Live’ ಎಂದು ಹೆಸರು ನೀಡಿದೆ. ಇದು ಕಂಪನಿಯ ಬಹುನಿರೀಕ್ಷಿತ ಪ್ರಾಜೆಕ್ಟ್ ಅಸ್ಟ್ರಾದ ಭಾಗವಾಗಿದೆ. ಈ ವೈಶಿಷ್ಟ್ಯದ ಮೇಲೆ ಗೂಗಲ್ ತುಂಬಾ ಸಮಯದಿಂದ ಕೆಲಸ ಮಾಡುತ್ತಿತ್ತು. ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ Gemini Live ಬಗ್ಗೆ ಹೇಳಿಕೊಂಡಿತ್ತು. ಮುಂಬರುವ ದಿನಗಳಲ್ಲಿ ಇದರಲ್ಲಿ ಕ್ಯಾಲೆಂಡರ್, ಕೀಪ್ ನೋಟ್ಸ್, ಟಾಸ್ಕ್‌ಗಳು ಮತ್ತು ಮ್ಯಾಪ್‌ಗಳಂತಹ ಹಲವಾರು ಗೂಗಲ್ ಅಪ್ಲಿಕೇಶನ್‌ಗಳು ಲಭ್ಯ ಇರೋದಾಗಿ ತಿಳಿಸಿದೆ.
ಜೆಮಿನಿ ಲೈವ್ ಬಳಸುವುದು ಹೇಗೆ?
- ಸ್ಮಾರ್ಟ್‌ಫೋನ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ
- ಗೂಗಲ್‌ನ ಈ AI ಟೂಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ
- ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಇನ್ಸ್ಟಾಲ್ ಮಾಡಿ
- ಒಂದಷ್ಟು ಪ್ರಕ್ರಿಯೆಗಳ ಬಳಿಕ ಅದು ನಿಮ್ಮೊಂದಿಗೆ ಮಾತನಾಡಲು ಸಿದ್ಧವಾಗುತ್ತದೆ
- ನಂತರ ಜೆಮಿನಿ ಅಪ್ಲಿಕೇಶನ್ ಓಪನ್ ಮಾಡಿ. ಮೈಕ್ ಪಕ್ಕದಲ್ಲಿರುವ ಐಕಾನ್ ಮೇಲೆ ಟ್ಯಾಪ್ ಮಾಡಬೇಕು
- ನಂತರ ಜೆಮಿನಿ ಲೈವ್ ತೆರೆಯುತ್ತದೆ. ನಿಮ್ಮ ಫೋನ್ ನಿಮ್ಮೊಂದಿಗೆ ಮಾತನಾಡ್ತದೆ
ಇದನ್ನೂ ಓದಿ: SRH ವಿರುದ್ಧ ಸೋಲಿನಿಂದ ಅಂಕಪಟ್ಟಿಯಲ್ಲಿ ಕುಸಿತ.. ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ