/newsfirstlive-kannada/media/post_attachments/wp-content/uploads/2024/12/GOOGLE-MAP.jpg)
ನಮಗೆ ಅಪರಿಚಿತ ಊರುಗಳಿಗೆ ನಮ್ಮದೇ ವಾಹನದೊಂದಿಗೆ ಹೋದಾಗ ಸಾಮಾನ್ಯವಾಗಿ ಗೂಗಲ್ ಮ್ಯಾಪ್​ನ ಸಹಾಯ ತೆಗೆದುಕೊಳ್ಳುವುತ್ತೇವೆ. ಇದು ಸಹಜ ಹಾಗೂ ಅನಿವಾರ್ಯ ಎಂಬಂತಹ ಸ್ಥಿತಿ ಸದ್ಯಕ್ಕೆ ಇದೆ. ಆದ್ರೆ ಒಂದೊಂದು ಸಾರಿ ಗೂಗಲ್ ಮ್ಯಾಪ್​ ನಮ್ಮನ್ನು ಅಪಾಯದ ಅಂಚಿಗೆ ತಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಅದೇ ಮಾದರಿಯ ಘಟನೆ ಉತ್ತರಪ್ರದೇಶದ ಮಥುರಾ-ಬರೇಲಿ ಹೆದ್ದಾರಿಯಲ್ಲಿ ನಡೆದಿದೆ.
ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ಜೊತೆ ಕೊರೆಯುವ ಚಳಿ! ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರಗಳು
ಮಥುರಾ-ಬರೇಲಿ ಹೆದ್ದಾರಿಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಗೂಗಲ್ ಮ್ಯಾಪ್​ನ ಸಹಾಯ ಪಡೆದು ಪ್ರಯಾಣ ಮಾಡುತ್ತಿದ್ದ ಇಬ್ಬರು ಗೆಳೆಯರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ರಸ್ತೆ ಇನ್ನೂ ಕೂಡ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿ ಇರಲಿಲ್ಲ. ಆದ್ರೆ ಅಮಾಯಕರು ಅದನ್ನೇ ನಂಬಿಕೊಂಡು ಕಾರ್​ನಲ್ಲಿ ಹೋದಾಗ ಒಂದು ಕಡೆ ಕಾಮಗಾರಿ ಸಂಪೂರ್ಣವಾಗದ ಕಡೆ ಇವರ ಕಾರು ಮಣ್ಣಿನಲ್ಲಿ ಮುಗುಚಿಕೊಂಡಿದೆ. ಕಾರ್​ನಲ್ಲಿದ್ದ ಇಬ್ಬರಿಗೂ ಕೂಡ ಗಾಯಗಳಾಗಿವೆ.
ಹೀಗೆ ಗೂಗಲ್ ಮ್ಯಾಪ್ ನಂಬಿ ಅಪಾಯಕ್ಕೆ ಸಿಲುಕಿದವರನ್ನು ವಿಮಲೇಶ್ ಶ್ರೀವಾತ್ಸವ್ ಮತ್ತು ಕುಶಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮಥುರಾ ಕಡೆಗೆ ಪ್ರಯಾಣ ಬೆಳೆಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹತ್ರಾಸ್​ ಜಂಕ್ಷನ್ ಬಳಿ ಈ ಒಂದು ಅಪಘಾತ ನಡೆದಿದೆ. ರಸ್ತೆಯ ಕಾಮಗಾರಿ ಇನ್ನೂ ಕೂಡ ನಡೆಯುತ್ತಿದ್ದು. ಅದರ ಬಗ್ಗ ಎಚ್ಚರಿಕೆಯ ಫಲಕ ಅಥವಾ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ಬೋರ್ಡ್​ ಕೂಡ ಅಲ್ಲಿ ಕಂಡು ಬಂದಿಲ್ಲ. ಹೀಗಾಗಿ ಕಾರು ಅಪಘಾತಕ್ಕೀಡಾಯಿತು ಎಂದು ವಿಮಲೇಶ್ ಹಾಗೂ ಕುಶಾಲ್ ಹೇಳಿದ್ದಾರೆ. ಅಪಘಾತಕ್ಕೆ ಒಳಗಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us