ಹೊಸ ಸ್ಮಾರ್ಟ್​ ಫೋನ್ ಪರಿಚಯಿಸಿದ ಗೂಗಲ್; ಭಾರತದಲ್ಲಿ ಎಷ್ಟು ರೂಪಾಯಿಗೆ ಸಿಗುತ್ತೆ Pixel 9a?

author-image
Ganesh
Updated On
ಹೊಸ ಸ್ಮಾರ್ಟ್​ ಫೋನ್ ಪರಿಚಯಿಸಿದ ಗೂಗಲ್; ಭಾರತದಲ್ಲಿ ಎಷ್ಟು ರೂಪಾಯಿಗೆ ಸಿಗುತ್ತೆ Pixel 9a?
Advertisment
  • ಮೊಬೈಲ್ ಕೊಳ್ಳುವ ಪ್ಲಾನ್​​ನಲ್ಲಿದ್ದರೆ, ಇಲ್ಲಿದೆ ಅವಕಾಶ
  • ಈ ಫೋನ್ ಭಾರತದಲ್ಲಿ ಮಾರುಕಟ್ಟೆಗೆ ಬರೋದು ಯಾವಾಗ?
  • Google pixel 9a ಸ್ಮಾರ್ಟ್​​ಫೋನ್ ವಿಶೇಷತೆ ಏನು?​

ಜನಪ್ರಿಯ ಗೂಗಲ್ (Google) ಕಂಪನಿ ತನ್ನ ಹೊಸ ಗೂಗಲ್ ಪಿಕ್ಸೆಲ್ 9a (Google pixel 9a) ಸ್ಮಾರ್ಟ್‌ಫೋನ್ ಪರಿಚಯಿಸಿದೆ.
48-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. 5,100mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 30 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗಲಿದೆ ಎಂದು ಕಂಪನಿ ಹೇಳಿದೆ. ಕಳೆದ ವರ್ಷ ಪಿಕ್ಸೆಲ್ 9 ಸರಣಿ ಬಿಡುಗಡೆ ಮಾಡಿತ್ತು, ಇದು ಅದೇ ಟೆನ್ಸರ್ G4 ಚಿಪ್ ಒಳಗೊಂಡಿದೆ.

ಭಾರತದಲ್ಲಿ ಬೆಲೆ ಎಷ್ಟು?

ಭಾರತದಲ್ಲಿ Google pixel 9a ಬೆಲೆ ರೂ. 49,999 ರೂಪಾಯಿ. ಈ ಹ್ಯಾಂಡ್‌ಸೆಟ್ 8GB RAM + 256GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಪಿಕ್ಸೆಲ್ 9ಎ ಏಪ್ರಿಲ್‌ನಲ್ಲಿ ಭಾರತದ ಮಾರುಕಟ್ಟೆಗಳಲ್ಲಿ ಸಿಗಲಿದೆ.

ಫೋನ್ ವಿಶೇಷತೆ ಏನು..?

  • ಪಿಕ್ಸೆಲ್ 9a ಡ್ಯುಯಲ್-ಸಿಮ್ ಹ್ಯಾಂಡ್‌ಸೆಟ್
  •  ಏಳು ವರ್ಷಗಳ OS ಮತ್ತು ಸೆಕ್ಯೂರಿಟಿ ಅಪ್​ಡೇಟ್ಸ್​ ಹೊಂದಿದೆ
  •  6.3-ಇಂಚಿನ (1,080×2,424 ಪಿಕ್ಸೆಲ್‌ಗಳು) ಆಕ್ಟಾ (POLED) ಡಿಸ್​​ಪ್ಲೆ
  •  60Hz ಮತ್ತು 120Hz ನಡುವಿನ ರಿಫ್ರೆಶ್ ರೇಟ್
  •  ಗೂಗಲ್ ಪಿಕ್ಸೆಲ್ 9a ಜನರೇಷನ್​​ನ 4th ಟೆನ್ಸರ್ G4 ಚಿಪ್
  •  Pixel 9a 48-ಮೆಗಾಪಿಕ್ಸೆಲ್ ಬ್ಯಾಕ್​ಸೈಟ್ ಕ್ಯಾಮೆರಾ
  •  8x ವರೆಗೆ ಸೂಪರ್ ರೆಸಲ್ಯೂಶನ್ ಜೂಮ್ ಸಪೋರ್ಟ್
  •  13-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹೊಂದಿದೆ
  •  13-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ

ಇದನ್ನೂ ಓದಿ: ಆಧಾರ್​ ಕಾರ್ಡ್​​ ಅಪ್ಡೇಟ್​​ ಮಾಡಲು ಮತ್ತೊಂದು ಅವಕಾಶ; ನೀವು ಮಾಡಬೇಕಿರುವುದು ಇಷ್ಟೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment