/newsfirstlive-kannada/media/post_attachments/wp-content/uploads/2024/05/G-Pay.jpg)
ಆನ್​ಲೈನ್​ ಪೇಮೆಂಟ್​ ಆ್ಯಪ್​ಗಳಾದ ಗೂಗಲ್​ ಪೇ, ಪೇಟಿಯಂ, ಫೋನ್​ ಪೇಯನ್ನು ಅನೇಕರು ಬಳಸುತ್ತಿದ್ದಾರೆ. ಅದರ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ. ಬ್ಯಾಂಕ್​ಗೆ ತೆರಳದೆ ಮೊಬೈಲ್​ ಮೂಲಕ ಸೇವೆಯನ್ನು ನಡೆಸಲು ಈ ಆ್ಯಪ್​ಗಳು ಸಹಾಯಕವಾಗಿದೆ. ಆದರೀಗ ಇಂತಹ ಸೇವೆಯನ್ನು ಒದಗಿಸುತ್ತಿರುವ ಗೂಗಲ್​ ಪ್ಲೇ ಮಾರ್ಚ್​​​​ 24ರಿಂದ ಕಾರ್ಯ ನಿರ್ವಹಿಸುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಗೂಗಲ್​ ಪೇ ಡಿಜಿಟಲ್​ ಪೇಮೆಂಟ್​ ಅನ್ನು ಉತ್ತೇಜಿಸುವ ಆ್ಯಪ್​ ಆಗಿದೆ. ದೇಶದಲ್ಲಿ ಅನೇಕರು ಈ ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಕೇವಲ ಹಣದ ವ್ಯವಹಾರ ಮಾತ್ರವಲ್ಲ, ಗ್ಯಾಸ್​ ಬುಕ್ಕಿಂಗ್, ರೀಚಾರ್ಜ್​, ಇನ್ಶುರೆನ್ಸ್​ ಹೀಗೆ ನಾನಾ ಸೇವೆಯನ್ನು ನೀಡುತ್ತಾ ಬಂದಿದೆ. ಆದರೀಗ ಗೂಗಲ್​ ಪೇ ಇದೇ ತಿಂಗಳ ಕೊನೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುದ್ದಿ ಎಲ್ಲರಿಗೂ ಅಚ್ಚರಿಯಾಗಿದೆ.
ಗೂಗಲ್​ ಪ್ಲೇಗೆ ಏನಾಯ್ತು?
ಪ್ರಪಂಚದಾದ್ಯಂತ ಗೂಗಲ್​ ಪೇ ಜನಪ್ರಿಯವಾಗಿದೆ. ಪೇಟಿಯಂ ಕಾರ್ಯವನ್ನು ಸಡಿಲಗೊಳಿಸಿದ ಬಳಿಕ ಅದರ ಬಳಕೆದಾರರು ಗೂಗಲ್​ ಪೇ ಮತ್ತು ಫೋನ್​ ಪೇಯತ್ತ ಮುಖ ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಗೂಗಲ್​ ಪೇಯನ್ನು ಪ್ರಪಂಚದಾದ್ಯಂತ ಜನರು ಬಳಸುತ್ತಿದ್ದಾರೆ. ಆದರೆ ಕೆಲವು ದೇಶಗಳಲ್ಲಿ ಗೂಗಲ್​ ಪೇ ಕಾರ್ಯವನ್ನು ಮಾಡೋದಿಲ್ಲ. ಆದರೆ ಭಾರತೀಯರು ಟೆನ್ಶನ್​ ಮಾಡುವ ಅವಶ್ಯಕತೆ ಇಲ್ಲ. ಇದು ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಗೂಗಲ್​ ಯೋಚನೆಯೇ ಬೇರೆ
ಗೂಗಲ್​ ತನ್ನ ಎಲ್ಲಾ ಬಳಕೆದಾರರನ್ನು ಗೂಗಲ್​ ವಾಲೆಟ್​ಗೆ ತೆರಳುವಂತೆ ಕೇಳಿಕೊಂಡಿದೆ. ಹಾಗಾಗಿ ಅದರ ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕೆ ಗೂಗಲ್​ ಪೇ ಕೆಲವು ದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಹಿಡಿದಿದೆ. ಆದರೆ ಭಾರತ ಮತ್ತು ಸಿಂಗಪುರದಲ್ಲಿ ಗೂಗಲ್​ ಪ್ಲೇ ಕಾರ್ಯ ನಿರ್ವಹಿಸುತ್ತದೆ.
ಬಂದಿದೆ ಗೂಗಲ್​ ವಾಲೆಟ್​
ಈಗಾಗಲೇ ಗೂಗಲ್​ ವಾಲೆಟ್​ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಸದ್ಯ ಇದರ ಪ್ರಚಾರ ಕಾರ್ಯ ನಡೆಸುತ್ತಿದೆ. ಜೊತೆಗೆ ಬಳಕೆದಾರರನ್ನು ಸೆಳೆಯಲು ಕೆಲವು ಆಫರ್​ ನೀಡುತ್ತಿದೆ. ಅದರಲ್ಲಿ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​​, ಲಾಯಲ್ಟಿ ಕಾರ್ಡ್​, ಉಡುಗೊರೆಗಳನ್ನು ನೀಡುತ್ತಿದೆ.
ಇನ್ನು ಗೂಗಲ್​ ವಾಲೆಟ್​ ಹಲವು ಫೀಚರ್ಸ್​ ಹೊಂದಿದೆ. ಈ ಅಪ್ಲಿಕೇಶನ್​ ಪಿನ್​ ರಕ್ಷಣೆ, ಕಳೆದು ಹೋದ ಸಾಧನದಲ್ಲಿರುವ ಅಕೌಂಟ್​ ಅನ್ನು ನಿಷ್ಟ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಸ್ನೇಹಿತರಿಗೆ ಸುಲಭವಾಗಿ ಹಣ ಕಳುಹಿಸಲು ಸಾಧ್ಯವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ